ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಸಿಸ್ ಗೆ ಭಾರತದಲ್ಲಿ ಠೇವಣಿ ಸಿಕ್ಕಿಲ್ಲ! ರಾಜನಾಥ್ ಸಿಂಗ್

|
Google Oneindia Kannada News

ನವದೆಹಲಿ, ಜೂನ್ 3: ಐಸಿಸ್ ಭಯೋತ್ಪಾದಕ ಭಯೋತ್ಪಾದಕ ಸಂಘಟನೆಗೆ ಭಾರತದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಯಾವುದೇ ಅವಕಾಶ ಸಿಕ್ಕಿಲ್ಲ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದರು.

ಭಾರತದಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಲು ಐಸಿಸ್ ಬಹಳವೇ ಪ್ರಯತ್ನಿಸುತ್ತಿದೆ. ಆದರೆ ಭಾರತದ ಆಂತರಿಕ ಭದ್ರತೆಯ ವಿಷಯದಲ್ಲಿ ಗಣನೀಯವಾಗಿ ಸುಧಾರಿಸಿರುವುದರಿಂದ ಇಲ್ಲಿ ತನ್ನ ಆಧಿಪತ್ಯ ಸ್ಥಾಪಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ, ಎಂದು ಭಾರತೀಯ ಭದ್ರತಾ ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.[ಜಿಡಿಪಿ ಕುಸಿತವು ಹಿಂದಿನ ಸರಕಾರಗಳ ಪಾಪದ ಫಲ: ಜೇಟ್ಲಿ]

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸುಭದ್ರ ದೇಶವನ್ನು ಕಟ್ಟುವಲ್ಲಿ ಸಮರ್ಥವಾಗಿದೆ ಎಂದ ಅವರು, ಕಾಶ್ಮೀರದಲ್ಲೂ ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದರು.

ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ಕೇವಲ ಸೇನೆ ಮತ್ತು ರಾಜಕೀಯ ಇದ್ದರೆ ಸಾಲದು, ಈ ಕುರಿತು ಸಮಗ್ರ ಮತ್ತು ವಿಸ್ತಾರವಾದ ಚರ್ಚೆ ನಡೆಯಬೇಕು. ಕಾಶ್ಮೀರದಲ್ಲಿರುವ ಯುವಕರು ಭಾರತದ ಭವಿಷ್ಯ ಎಂದು ಸಹ ಇದೇ ಸಂದರ್ಭದಲ್ಲಿ ಸಿಂಗ್ ಹೇಳಿದರು.[ಪ್ರಧಾನಿ ಮೋದಿಗೆ ಬೇಕಂತೆ ನಿಮ್ಮ ಮೂರು ಪೀಳಿಗೆಯ ಸೆಲ್ಫಿ!]

ನಾವು ಕಾಶ್ಮೀರದ ಸಮಸ್ಯೆಗೆ ಒಂದು ಶಾಶ್ವತ ಅಂತ್ಯವನ್ನು ಹುಡುಕುತ್ತೇವೆ ಎನ್ನುವುದಕ್ಕೆ ಅವರು ಮರೆಯಲಿಲ್ಲ.

ಶಾಂತಿಕದಡುವುದಕ್ಕೆ ಬಿಡೆವು

ಶಾಂತಿಕದಡುವುದಕ್ಕೆ ಬಿಡೆವು

[ಸುಷ್ಮಾ ಗೆ ಹೈದರಾಬಾದ್ ದಂಪತಿ ಮೊರೆ, ಇದು ಮತ್ತೊಂದು ಉಜ್ಮಾ ಪ್ರಕರಣ][ಸುಷ್ಮಾ ಗೆ ಹೈದರಾಬಾದ್ ದಂಪತಿ ಮೊರೆ, ಇದು ಮತ್ತೊಂದು ಉಜ್ಮಾ ಪ್ರಕರಣ]

ಕಶ್ಮೀರವೂ ಸುಧಾರಿಸಿದೆ

ಕಶ್ಮೀರವೂ ಸುಧಾರಿಸಿದೆ

[ಮೋದಿ ಮನ್ ಕಿ ಬಾತ್ ನ ಮನತಟ್ಟುವ 15 ಹೇಳಿಕೆಗಳು][ಮೋದಿ ಮನ್ ಕಿ ಬಾತ್ ನ ಮನತಟ್ಟುವ 15 ಹೇಳಿಕೆಗಳು]

ತಟಸ್ಥವಾಗಿದ್ದಾರೆ ಭಯೋತ್ಪಾದಕರು

ತಟಸ್ಥವಾಗಿದ್ದಾರೆ ಭಯೋತ್ಪಾದಕರು

ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡುತ್ತಿದ್ದ 368 ಕ್ಕೂ ಹೆಚ್ಚು ಭಯೋತ್ಪಾದಕರನ್ನು 2014 ರಲ್ಲಿ ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ಇಲ್ಲಿಯವರೆಗೆ ತಟಸ್ಥಗೊಳಿಸಲಾಗಿದೆ. ಯಾವುದೇ ಭಯೋತ್ಪಾದಕ ಚಟುವಟಿಕೆಗಳನ್ನು ಅವರು ನಡೆಸಲಾಗದಂತೆ ದಿಗ್ಬಂಧನ ಹೇರಲಾಗಿದೆ ಎಂದರು.

ಸರ್ಜಿಕಲ್ ಸ್ಟ್ರೈಕ್ ನಂತರ ಭಯೋತ್ಪಾದಕರಲ್ಲಿ ನಡುಕ

ಸರ್ಜಿಕಲ್ ಸ್ಟ್ರೈಕ್ ನಂತರ ಭಯೋತ್ಪಾದಕರಲ್ಲಿ ನಡುಕ

ಸರ್ಜಿಕಲ್ ಸ್ಟ್ರೈಕ್ ನಂತರ ಪಾಕಿಸ್ಥಾನದಿಂದ ಜಮ್ಮು ಕಾಶ್ಮೀರದ ಮೂಲಕ ಭಾರತಕ್ಕೆ ನುಸುಳುತ್ತಿದ್ ನುಸುಳುಕೋರರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂಬುದನ್ನು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

ಐಸಿಸ್ ಗೆ ಸೂಕ್ತ ಪ್ರತ್ಯುತ್ತರ

ಐಸಿಸ್ ಗೆ ಸೂಕ್ತ ಪ್ರತ್ಯುತ್ತರ

ಐಸಿಸ್ ಪ್ರತಿಬಾರಿ ಭಾರತದ ಮೇಲೆ ಧಾಳಿ ನಡೆಸಲು, ಭಾರತದ ಶಾಂತಿ ಕಡಡಲು ಪ್ರಯತ್ನಿಸಿದಾಗಲೂ ನಾವು ಸೂಕ್ತ ಪ್ರತ್ಯುತ್ತರ ನೀಡಿದ್ದೇವೆ ಎಂದು ಕೇಂದ್ರ ಸರ್ಕಾರದ ಆಡಳಿತ ಕ್ರಮವನ್ನು ಶ್ಲಾಘಿಸಿದರು.

English summary
"We have been successful in countering the challenges posed by the ISIS," Rajnath said in a press conference on the completion of three years of the Central government, in New Delhi, today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X