ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹತ್ಯೆಗೆ ಖಲಿಸ್ಥಾನಿ ಉಗ್ರರು, ಭದ್ರತೆ ಹೆಚ್ಚಳ

|
Google Oneindia Kannada News

ನವದೆಹಲಿ, ನ.5 : ದೇಶದ ಭದ್ರತಾ ಸಿಬ್ಬಂದಿಗಳಿಗೆ ಸದ್ಯ ಅತೀ ಸವಾಲಿನ ಕೆಲಸ ಯಾವುದು? ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ರಕ್ಷಣೆ ನೀಡುವುದು. ಹೌದು ಇಂಡಿಯನ್ ಮುಜಾಹಿದೀನ್ ಸಂಘಟನೆ ಬೆದರಿಕೆ ಹಿನ್ನಲೆಯಲ್ಲಿ ನರೇಂದ್ರ ಮೋದಿ ಅವರ ಭದ್ರತೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಹೆಚ್ಚಿಸಿದೆ.

ಅ.20ರಂದು ಬಿಹಾರದ ಪಾಟ್ನಾದಲ್ಲಿ ನಡೆದ ನರೇಂದ್ರ ಮೋದಿ ಅವರ ಸಮಾವೇಶದ ಸಮಯದಲ್ಲಿ ಸರಣಿ ಬಾಂಬ್ ಸ್ಫೋಟ ನಡೆಸಿರುವ ಉಗ್ರರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಮ್ಮ ಟಾರ್ಗೆಟ್ ಎಂದು ಬಹಿರಂಗ ಸಂದೇಶ ಸಾರಿದ್ದಾರೆ. ಕೆಲವು ದಿನಗಳ ಹಿಂದೆ ಬಂಧಿತನಾದ ಉಗ್ರನೊಬ್ಬ ಇಂಡಿಯನ್ ಮುಜಾಹಿದೀನ್ ಹಿಟ್ ಲೀಸ್ಟ್ ನಲ್ಲಿ ಮೋದಿ ನಂ.1 ಎಂಬ ಮಾಹಿತಿ ನೀಡಿದ್ದಾನೆ.

Narendra Modi

ಖಲಿಸ್ತಾನಿ ಉಗ್ರರನ್ನು ಬಳಸಿಕೊಂಡು ಮುಜಾಹಿದೀನ್ ಸಂಘಟನೆ ಮೋದಿ ಅವರ ಮೇಲೆ ದಾಳಿ ನಡೆಸಬಹುದು ಎಂದು ತಿಳಿಸಿದ್ದಾನೆ. ಆದ್ದರಿಂದ ನರೇಂದ್ರ ಮೋದಿ ಅವರ ಭದ್ರತೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದ್ದು, ಮೂರು ಹಂತದ ಭದ್ರತೆಯನ್ನು ಮೋದಿ ಅವರಿಗೆ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯವೇ ಈ ಭದ್ರತೆ ನೀಡುವಂತೆ ಸೂಚನೆ ನೀಡಿದೆ.

ನರೇಂದ್ರ ಮೋದಿ ಅವರಿಗೆ ಈಗಾಗಲೇ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಯ 108 ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳಿಂದ ಭದ್ರತೆ ಒದಗಿಸಲಾಗಿದೆ. ಮುಂಬೈ ದಾಳಿಯ ಉಗ್ರಗಾಮಿಗಳನ್ನು ಸೆದೆಬಡಿದ ಎನ್‌ಎಸ್‌ಜಿ ಪಡೆ ಸದ್ಯ ಮೋದಿ ಅವರ ರಕ್ಷಣೆಗೆ ನಿಂತಿದೆ. ಸದ್ಯ ಇದನ್ನು ಮತ್ತಷ್ಟು ಹೆಚ್ಚಿಸಿದ್ದು, ಮೋದಿ ಭದ್ರತೆಯನ್ನು ಮೂರು ಹಂತಗಳಿಗೆ ವಿಸ್ತರಣೆ ಮಾಡಲಾಗಿದೆ.

ಭದ್ರತೆ ಹೇಗೆ : ಮೂರು ಹಂತದ ಭದ್ರತೆ ಪ್ರಕಾರ ಮೊದಲನೆಯ ಹಂತದ ಭದ್ರತಾ ಸಿಬ್ಬಂದಿ ದಾಳಿಕೋರರ ಮೇಲೆ ಕಣ್ಣಿಟ್ಟಿರುತ್ತಾರೆ ಮತ್ತು ದಾಳಿ ನಡೆದರೆ ಪ್ರತಿದಾಳಿ ನಡೆಸಲು ಶಸ್ತ್ರ ಸಜ್ಜಿತರಾಗಿರುತ್ತಾರೆ. ಎರಡನೇ ಹಂತದ ಸಿಬ್ಬಂದಿ ದಾಳಿ ಸಂಭವಿಸಿದರೆ ಮೊದಲು ಮೋದಿ ಅವರನ್ನು ಕವರ್ ಮಾಡಿಕೊಂಡು ರಕ್ಷಿಸುತ್ತಾರೆ. ಮೂರನೇ ಹಂತದ ಸಿಬ್ಬಂದಿ ಸಹ ಅವರನ್ನು ಅಲ್ಲಿಂದ ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕೆಲಸ ಮಾಡುತ್ತಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೊರ ರಾಜ್ಯಗಳ ಪ್ರವಾಸ ಕೈಗೊಳ್ಳುವುದಾದರೆ ಅದರ ಸಂಪೂರ್ಣ ಮಾಹಿತಿ ಭದ್ರತಾ ಸಿಬ್ಬಂದಿಗೆ ನೀಡಬೇಕಾಗುತ್ತದೆ. ಮೋದಿ ಅವರ ಹೊರ ರಾಜ್ಯಗಳ ಪ್ರವಾಸ, ತೆರಳುವ ಮಾರ್ಗ, ಭೇಟಿಯಾಗುವ ನಾಯಕರು, ಸಮಾವೇಶಕ್ಕೆ ಸೇರಬಹುದಾದ ಅಂದಾಜು ಜನರು ಮುಂತಾದ ಮಾಹಿತಿಗಳನ್ನು ಗುಜರಾತ್ ಪೊಲೀಸ್ ಇಲಾಖೆ ಮೋದಿ ಅವರಿಗೆ ಭದ್ರತೆ ಒದಗಿಸುತ್ತಿರುವ ಪಡೆಯ ಹಿರಿಯ ಅಧಿಕಾರಿಗಳಿಗೆ ರವಾನಿಸುತ್ತಾರೆ.

ಪ್ರಧಾನಿ ಭದ್ರತೆಯ ಸನಿಹದಲ್ಲಿ ಮೋದಿ : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭದ್ರತೆ ವಿಚಾರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸನಿಹದಲ್ಲಿದ್ದಾರೆ. ಮೋದಿ ಮತ್ತು ಪ್ರಧಾನಿ ಅವರ ಭದ್ರತೆಗಿರುವ ಪ್ರಮುಖ ವ್ಯತ್ಯಾಸವೆಂದರೆ ಭದ್ರತಾ ಪಡೆಗಳು ಮಾತ್ರ.

ಪ್ರಧಾನಿ ಮನಹೋಹನ್ ಸಿಂಗ್ ಅವರಿಗೆ ವಿಶೇ‍ಷ ಭದ್ರತಾ ಪಡೆ (ಎಸ್ ಪಿಜಿ) ಗಳ ಕಾವಲಿದೆ. ಪ್ರಧಾನಿ ಮತ್ತು ಅವರ ಕುಟುಂಬದ ಸದಸ್ಯರನ್ನು ವಿಶೇಷ ಭದ್ರತಾ ಪಡೆ ರಕ್ಷಿಸುತ್ತಿದೆ. ಆದರೆ, ಮೋದಿ ಅವರ ಭದ್ರತೆಗೆ ಸದ್ಯ ಎನ್‌ಎಸ್‌ಜಿ ಪಡೆಗಳ ಭದ್ರಕೋಟೆ ರಚಿಸಲಾಗಿದೆ. ಈ ವ್ಯತ್ಯಾಸ ಹೊರತು ಪಡಿಸಿದರೆ, ಮೋದಿ ಪ್ರಧಾನಿ ಅವರಷ್ಟು ಭದ್ರತೆಯನ್ನು ಪಡೆಯುತ್ತಿದ್ದಾರೆ.

English summary
The Center has rushed to tighten security around Gujarat CM Narendra Modi following an intelligence alert about an ISI plot to use Khalistani terrorists to eliminate BJP's PM candidate. On October 20, Modi was targeted by Indian Mujahideen (IM), a terror outfit nurtured by Pakistan's spy agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X