ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ಥಿಕ ಸಲಹೆಗಾರನಾಗಿ ಕೃಷ್ಣಮೂರ್ತಿ ಸುಬ್ರಮಣಿಯನ್ ನೇಮಕ

|
Google Oneindia Kannada News

ನವದೆಹಲಿ, ಡಿಸೆಂಬರ್ 7: ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್ ಅವರು ಹುದ್ದೆಯಿಂದ ಹಿಂದಕ್ಕೆ ಸರದಿ ಸುಮಾರು ಆರು ತಿಂಗಳ ಬಳಿಕ ಆ ಸ್ಥಾನಕ್ಕೆ ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ನೇಮಿಸಲಾಗಿದೆ.

ಕೃಷ್ಣಮೂರ್ತಿ ಅವರ ಅಧಿಕಾರದ ಅವಧಿ ಮೂರು ವರ್ಷಗಳದ್ದಾಗಿರಲಿದೆ. ಷಿಕಾಗೊ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬಿಜಿನೆಸ್‌ನಿಂದ ಪಿಎಚ್ ಡಿ ಪಡೆದಿರುವ ಕೃಷ್ಭಮೂರ್ತಿ, ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್‌ನಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಬೋಧಿಸುತ್ತಿದ್ದಾರೆ.

ನೋಟು ನಿಷೇಧ ಬಹುದೊಡ್ಡ ವಿತ್ತೀಯ ಆಘಾತ: ಅರವಿಂದ್ ಸುಬ್ರಮಣಿಯನ್ನೋಟು ನಿಷೇಧ ಬಹುದೊಡ್ಡ ವಿತ್ತೀಯ ಆಘಾತ: ಅರವಿಂದ್ ಸುಬ್ರಮಣಿಯನ್

ಡಾ. ಕೃಷ್ಣಮೂರ್ತಿ ಸುಬ್ರಮಣಿಯನ್ ಅವರನ್ನು ಮುಖ್ಯ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿರುವುದನ್ನು ಸಂಪುಟ ನೇಮಕಾತಿ ಸಮಿತಿಯು (ಎಸಿಸಿ) ಅನುಮೋದಿಸಿದೆ ಎಂದು ಸರ್ಕಾರದ ಅಧಿಸೂಚನೆ ತಿಳಿಸಿದೆ.

isb professor Krishnamurthy subramanian new chief economic advisor

ಐಐಟಿ-ಐಐಎಂನಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಕೃಷ್ಣಮೂರ್ತಿ, ಬ್ಯಾಂಕಿಂಗ್, ಕಾರ್ಪೊರೇಟ್ ಆಡಳಿತ ಮತ್ತು ಆರ್ಥಿಕ ನೀತಿಗಳಲ್ಲಿ ಜಗತ್ತಿನ ಅತ್ಯಂತ ಮುಂಚೂಣಿ ಪರಿಣತರಲ್ಲಿ ಒಬ್ಬರಾಗಿದ್ದಾರೆ.

ಆರ್ಥಿಕ ಸಲಹೆಗಾರ ಹುದ್ದೆಯಿಂದ ಹಿಂದೆ ಸರಿದ ಅರವಿಂದ್ ಸುಬ್ರಮಣಿಯನ್ಆರ್ಥಿಕ ಸಲಹೆಗಾರ ಹುದ್ದೆಯಿಂದ ಹಿಂದೆ ಸರಿದ ಅರವಿಂದ್ ಸುಬ್ರಮಣಿಯನ್

ಬ್ಯಾಂಕಿಂಗ್, ಕಾನೂನು ಮತ್ತು ಹಣಕಾಸು, ಆವಿಷ್ಕಾರ ಮತ್ತು ಆರ್ಥಿಕ ಬೆಳವಣಿಗೆ ಹಾಗೂ ಕಾರ್ಪೊರೇಟ್ ಆಡಳಿತ ಕ್ಷೇತ್ರಗಳಲ್ಲಿ ಅವರು ನಡೆಸಿರುವ ಸಂಶೋಧನಾ ಲೇಖನಗಳು ಜಗತ್ತಿನ ಪ್ರಮುಖ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.

English summary
ISB associate profession Krishnamurthy Subramanian appionted as India's new chief economic advisor, nearly six months after the exit of chief economic advisor Arvind Subramanian.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X