ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 30ರವರೆಗೆ ರೈಲು ಸಂಚಾರವಿಲ್ಲ: ಮುಂಗಡ ಕಾಯ್ದಿರಿಸಿದ್ದವರಿಗೆ ಹಣ ವಾಪಸ್

|
Google Oneindia Kannada News

ನವದೆಹಲಿ, ಏಪ್ರಿಲ್ 7: ಏಪ್ರಿಲ್ 30ರವರೆಗೆ ಯಾವುದೇ ರೈಲು ಸಂಚರಿಸುವುದಿಲ್ಲ ಎಂದು ಭಾರತೀಯ ರೈಲ್ವೆ ತಿಳಿಸಿದೆ.

ಹಾಗೆಯೇ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಿದ್ದವರಿಗೆ ಸಂಪುರ್ಣ ಹಣವನ್ನು ಹಿಂದಿರುಗಿಸುವುದಾಗಿ ತಿಳಿಸಿದೆ. ಏಪ್ರಿಲ್ 14ರಂದು ಲಾಕ್‌ಡೌನ್ ಮುಗಿದ ಬಳಿಕ ರೈಲುಗಳ ಸಂಚಾರ ಆರಂಭಗೊಳ್ಳುವ ನಿರೀಕ್ಷೆ ಇತ್ತು. ಆದರೆ ರೈಲ್ವೆ ಇಲಾಖೆ ಇದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.

ದೇಶದಲ್ಲಿ ಕೊರೊನಾ ವೈರಸ್ ಸೋಂಕು ಇನ್ನೂ ಕೂಡ ಹೆಚ್ಚಾಗುತ್ತಿರುವ ಕಾರಣ ರೈಲು ಕಾರ್ಯಾಚರಣೆಯನ್ನು ಈ ತಿಂಗಳ ಅಂತ್ಯದವರೆಗೆ ಮುಂದೂಡಿದೆ.

IRCTC Suspends Bookings For Trains Till April 30

ಖಾಸಗಿ ರೈಲುಗಳು ಸೇರಿ ಯಾವುದೇ ರೈಲಿಗೆ ಮುಂಗಡ ಟಿಕೆಟ್ ಕಾಯ್ದಿರಿಸಿದ್ದವರಿಗೆ ಸಂಪೂರ್ಣ ಮೊತ್ತ ಹಿಂದಕ್ಕೆ ಕೊಡಲಾಗುವುದು ಎಂದು ಐಆರ್‌ಸಿಟಿಸಿ ಸ್ಪಷ್ಟಪಡಿಸಿದೆ.

ಐಆರ್‌ಸಿಟಿಸಿ ವತಿಯಿಂದ 3 ಖಾಸಗಿ ರೈಲು- 2 ತೇಜಸ್ ಹಾಗೂ ಒಂದು ಕಾಶಿ ಮಹಾಕಾಲ್ ಎಕ್ಸ್‌ಪ್ರೆಸ್ ರೈಲಿಗೂ ಈ ನಿರ್ಧಾರ ಅನ್ವಯವಾಗಲಿದೆ.

ಭಾರತದಲ್ಲಿ ಒಟ್ಟು 4421 ಕೊರೊನಾ ಪ್ರಕರಣಗಳಿವೆ. 114 ಮಂದಿ ಮೃತಪಟ್ಟಿದ್ದಾರೆ. ಕೇರಳದಲ್ಲಿ 327 ಮಂದಿ ಕೊರೊನಾ ಸೋಂಕಿತರಿದ್ದಾರೆ. ಅದರಲ್ಲಿ 58 ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿದ್ದ ಕಾರಣ ರೈಲು, ವಿಮಾನ, ಬಸ್‌ಗಳ ಸೇವೆ ಸ್ಥಗಿತಗೊಳಿಸಲಾಗಿತ್ತು.

English summary
The Indian Railways on Tuesday suspended all the bookings for its three private trains till April 30. The passengers who had booked their tickets on IRCTC-run 3 trains, must note that the railways will refund the full amount of the tickets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X