ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಬಿಐ ನೂತನ ನಿರ್ದೇಶಕರಾಗಿ ರಿಷಿ ಕುಮಾರ್ ಶುಕ್ಲಾ ಅಧಿಕಾರ ಸ್ವೀಕಾರ

|
Google Oneindia Kannada News

ನವದೆಹಲಿ, ಫೆಬ್ರವರಿ 04: ಕೇಂದ್ರ ತನಿಖಾ ದಳ(ಸಿಬಿಐ)ದ ನೂತನ ನಿರ್ದೇಶಕರಾಗಿ ನೇಮಕಗೊಂಡ ಐಪಿಎಸ್ ಅಧಿಕಾರಿ ರಿಷಿ ಕುಮಾರ್ ಶುಕ್ಲಾ ಅವರು ಅಧಿಕೃತವಾಗಿ ಇಂದು(ಫೆ.4) ಅಧಿಕಾರ ಸ್ವೀಕರಿಸಿದ್ದಾರೆ.

ಮಧ್ಯಪ್ರದೇಶದ ಮಾಜಿ ಪೊಲೀಸ್ ಮುಖ್ಯಸ್ಥ ರಿಷಿ ಕುಮಾರ್ ಶುಕ್ಲಾ, ಅವರನ್ನು ಶನಿವಾರ ಸಿಬಿಐ ಮುಖ್ಯಸ್ಥರನ್ನಾಗಿ ಆಯ್ಕೆ ನೇಮಕ ಮಾಡಲಾಗಿತ್ತು.

ರಿಷಿ ಕುಮಾರ್ ಶುಕ್ಲಾ ನೂತನ ಸಿಬಿಐ ಮುಖ್ಯಸ್ಥ ರಿಷಿ ಕುಮಾರ್ ಶುಕ್ಲಾ ನೂತನ ಸಿಬಿಐ ಮುಖ್ಯಸ್ಥ

ಇಂದಿನಿಂದಿ ಎರಡು ವರ್ಷಗಳ ಕಾಲ ಅವರ ಅಧಿಕಾರಾವಧಿ ಇರಲಿದ್ದು, ಅವರನ್ನು ಸಿಬಿಐ ನಿರ್ದೇಶಕರನ್ನಾಗಿ ಆಯ್ಕೆ ಮಾಡುವ ಮೊದಲು, ಅವರು ಮಧ್ಯಪ್ರದೇಶದ ಪೊಲೀಸ್ ಮಹಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.

IPS officer Rishi Kumar Shukla takes charge as new CBI director

ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕಡ್ಡಾಯ ರಜೆಯ ಮೇಲೆ ತೆರಳಿದ್ದ ಸಿಬಿಐನ ನಿಕಟಪೂರ್ವ ನಿರ್ದೇಶಕ ಅಲೋಕ್ ವರ್ಮಾ ಅವರನ್ನು ಜನವರಿ 10 ರಿಂದ ಹುದ್ದೆಯಿಂದ ತೆಳಗಿಳಿಸಲಾಗಿತ್ತು. ಅವರ ಜಾಗಕ್ಕೆ ಹಂಗಾಮಿ ನಿರ್ದೇಶಕರಾಗಿ ತೆಲಂಗಾಣ ಮೂಲದ ನಾಗೇಶ್ವರ್ ರಾವ್ ಆಯ್ಕೆಯಾಗಿದ್ದರು.

ನಿವೃತ್ತಿಯ ದಿನವೇ ಕೆಲಸಕ್ಕೆ ಸೇರಿಕೊಳ್ಳುವಂತೆ ವರ್ಮಾಗೆ ಸೂಚನೆ!ನಿವೃತ್ತಿಯ ದಿನವೇ ಕೆಲಸಕ್ಕೆ ಸೇರಿಕೊಳ್ಳುವಂತೆ ವರ್ಮಾಗೆ ಸೂಚನೆ!

ಇದೀಗ ಅಧಿಕೃತವಾಗಿ ರಿಷಿ ಕುಮಾರ್ ಶುಕ್ಲಾ ಅವರನ್ನು ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಅವರು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ದೀದಿ-ಸಿಬಿಐ ವಿವಾದ LIVE: ಮಮತಾ ಬೆಂಬಲಕ್ಕೆ ನಿಂತ ರಾಜ್ ಠಾಕ್ರೆ ದೀದಿ-ಸಿಬಿಐ ವಿವಾದ LIVE: ಮಮತಾ ಬೆಂಬಲಕ್ಕೆ ನಿಂತ ರಾಜ್ ಠಾಕ್ರೆ

ಪಶ್ಚಿಮ ಬಂಗಾಳದಲ್ಲಿ ಎದ್ದರುವ ಪೊಲೀಸ್ ಕಮಿಷನರ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸಿಬಿಐ ನಡುವಿನ ವಿವಾದಕ್ಕೆ ಸಂಬಂಧಿಸಿದ ಪ್ರಕರಣ ಸಾಕಷ್ಟು ಚರ್ಚೆಗೊಳಗಾಗುತ್ತಿದ್ದು, ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಶುಕ್ಲಾ ಅವರಿಗೆ ಸವಾಲು ಎದುರಾದಂತಾಗಿದೆ.

English summary
1983-batch IPS officer Rishi Kumar Shukla, who was recently appointed as the new Central Bureau of Investigation (CBI) director, formally took charge of the office on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X