ಐಪಿಎಸ್ ಅಧಿಕಾರಿ ಡಿ ರೂಪಾ ಅವರಿಗೆ ಪ್ರತಿಷ್ಠಿತ ಜಿ-ಫೈಲ್ಸ್ ಪ್ರಶಸ್ತಿ
ನವದೆಹಲಿ, ಡಿಸೆಂಬರ್ 10: ಐಪಿಎಸ್ ಅಧಿಕಾರಿ ಡಿ ರೂಪಾ ಅವರು ಜಿ-ಫೈಲ್ಸ್ ಗವರ್ನೆನ್ಸ್ 2018ರ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಆಧಾರದ ಮೇಲೆ ಈ ಅವಾರ್ಡ್ ನೀಡಲಾಗಿದೆ.
ಸಮಾಜಸೇವೆ ಇನ್ನಿತರೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವವರಿಗೆ ಜಿ ಫೈಲ್ಸ್ ಅವಾರ್ಡ್ ನೀಡಲಾಗುತ್ತದೆ, ಪ್ರತಿ ವರ್ಷವೂ ಕೊಡಮಾಡುವ ಪ್ರಶಸ್ತಿ ಇದಾಗಿದೆ. ಸಮಾಜಸೇವೆಯಲ್ಲಿ ತೊಡಗಿರುವವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಜಿ ಫಲ್ಸ್ ಎನ್ನುವ ಸಂಸ್ಥೆಯು ಈ ಪ್ರಶಸ್ತಿ ನೀಡುತ್ತಿದೆ.
ನವದೆಹಲಿಯಲ್ಲಿರುವ ಸಿವಿಲ್ ಸರ್ವೀಸಸ್ ಆಫೀಸರ್ಸ್ ಆಫ್ ಇನ್ಸ್ಟಿಟ್ಯೂಟ್ ನಲ್ಲಿ ಪ್ರತಿ ವರ್ಷದ ನವೆಂಬರ್ ತಿಂಗಳಿನಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿಯಲ್ಲಿ ಮೂರು ವಿಧಗಳಿವೆ ಮೊದಲನೆಯದ್ದು ಲೈಫ್ಟೈಮ್ ಅಚೀವ್ಮೆಂಟ್ ಅವಾರ್ಡ್, ಎರಡನೆಯದ್ದು ಎಕ್ಸೆಪ್ಷನಲ್ ಕಾಂಟ್ರಿಬ್ಯೂಷನ್ ಅವಾರ್ಡ್, ಮೂರನೆಯದ್ದು ಎಕ್ಸಲೆಂಟ್ ಕಾಂಟ್ರಿಬ್ಯೂಷನ್ ಅವಾರ್ಡ್.
ಐಪಿಎಸ್ ಅಧಿಕಾರಿ ಡಿ ರೂಪಾ ಅವರಿಗೆ ಎಕ್ಸೆಪ್ಷನಲ್ ಕಾಂಟ್ರಿಬ್ಯೂಷನ್ ಅವಾರ್ಡ್ ದೊರೆತಿದೆ. ಸಚಿವರಾದ ಅಲ್ಫಾನ್ಸ್ ಜೋಸೆಫ್ ಹಾಗೂ ಸಚಿವ ವಿಕೆ ಸಿಂಗ್ ಪ್ರಶಸ್ತಿ ನೀಡಿ ಗೌರವಿಸಿದರು.