ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ 5 ತಿಂಗಳ ಬಳಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಬೈಲ್ ಸೇವೆ ವಾಪಸ್

|
Google Oneindia Kannada News

ನವದೆಹಲಿ, ಜನವರಿ 1: ಕಾಶ್ಮೀರದಲ್ಲಿನ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಐದು ತಿಂಗಳ ಬಳಿಕ ಡಿ. 31ರಿಂದ ಅಂತರ್ಜಾಲ ಸೇವೆ ಮತ್ತು ಎಲ್ಲ ಮೊಬೈಲ್ ಫೋನ್‌ಗಳಿಗೆ ಎಸ್ಎಂಎಸ್ ಸಂಪರ್ಕ ಸೇವೆಗಳು ಮರಳಿವೆ.

'ಡಿ. 31ರ ಮಧ್ಯರಾತ್ರಿಯಿಂದ ಜಾರಿಯಾಗುವಂತೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಂತರ್ಜಾಲ ಸೇವೆಯನ್ನು ಪುನರಾರಂಭಿಸಲಾಗಿದೆ. ಹಾಗೆಯೇ ಮೊಬೈಲ್ ಫೋನ್‌ಗಳಿಗೆ ಎಸ್ಎಂಎಸ್ ಸೇವೆಯನ್ನು ಕೂಡ ಮರಳಿ ಶುರುಮಾಡಲಾಗಿದೆ' ಎಂದು ಜಮ್ಮು ಮತ್ತು ಕಾಶ್ಮೀರದ ವಕ್ತಾರ ರೋಹಿತ್ ಕನ್ಸಾಲ್ ತಿಳಿಸಿದ್ದಾರೆ.

ಐದು ತಿಂಗಳ ನಂತರ ಕೊನೆಗೂ ಇಂಟರ್ ನೆಟ್ ಸೇವೆ ಆರಂಭಐದು ತಿಂಗಳ ನಂತರ ಕೊನೆಗೂ ಇಂಟರ್ ನೆಟ್ ಸೇವೆ ಆರಂಭ

ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಲು ಗೃಹ ಸಚಿವ ಅಮಿತ್ ಶಾ, ವಿಧಿ 370ರ ರದ್ದತಿಯನ್ನು ಪ್ರಕಟಿಸುವ ಮುನ್ನ ಆಗಸ್ಟ್ 5ರಂದು ಅಂತರ್ಜಾಲ ಸೌಲಭ್ಯವನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಗಿತಗೊಳಿಸಲಾಗಿತ್ತು.

Internet Service In Govt Hospitals SMS Mobile Phones In Kashmir Restored

ಕಾಶ್ಮೀರದ ಸ್ಥಿತಿ ಸುಧಾರಿಸಿದೆ, ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ! ಕಾಶ್ಮೀರದ ಸ್ಥಿತಿ ಸುಧಾರಿಸಿದೆ, ಕಾಂಗ್ರೆಸ್ ಪರಿಸ್ಥಿತಿ ಸುಧಾರಿಸಲು ಸಾಧ್ಯವಿಲ್ಲ!

370ನೇ ವಿಧಿ ರದ್ದತಿಯ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಇಂಟರ್‌ನೆಟ್ ಸೇವೆಯನ್ನು ಕಾರ್ಗಿಲ್ ಜಿಲ್ಲೆಯ ಲಡಾಕ್‌ನಲ್ಲಿ 145 ದಿನಗಳ ಬಳಿಕ ಕಳೆದ ವಾರ ಪುನರಾರಂಭಿಸಲಾಗಿತ್ತು. ಆರಂಭದಲ್ಲಿ ಸ್ಥಿರ ದೂರವಾಣಿ ಸಂಪರ್ಕ ಆರಂಭಿಸಲಾಗಿತ್ತು. ಬಳಿಕ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳ ಮೇಲಿನ ನಿರ್ಬಂಧವನ್ನು ಸಡಿಲಿಸಲಾಗಿತ್ತು. ಆದರೆ ಇಡೀ ಕಣಿವೆಯಲ್ಲಿ ಪ್ರೀಪೇಯ್ಡ್ ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆಗಳು ಇನ್ನೂ ಆರಂಭವಾಗಬೇಕಿದೆ.

English summary
SMS facility to all mobile phones and internet services in all government-run hospitals were restored from the midnight of December 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X