ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಇಂಟರನೆಟ್' ಮೂಲಭೂತ ಹಕ್ಕಲ್ಲ ಎಂದು ಎಚ್ಚರಿಸಿದ ಕೇಂದ್ರ

|
Google Oneindia Kannada News

ನವದೆಹಲಿ, ಫೆಬ್ರವರಿ 7; ""ಸಾಮಾಜಿಕ ಜಾಲತಾಣಗಳು, ಇಂಟರ್‌ನೆಟ್‌ ಮೂಲಭೂತ ಹಕ್ಕು ಅಲ್ಲವೇ ಅಲ್ಲ'' ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ರವಿಶಂಕರ್‌ ಪ್ರಸಾದ್ ಹೇಳಿದ್ದಾರೆ.

""ಇಂಟರ್‌ನೆಟ್‌ನ ಸಂವಹನ ಸಿದ್ಧಾಂತ ಮತ್ತು ನಿರೂಪಣೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆಯೇ ಹೊರತು ಅದು ಮೂಲಭೂತ ಹಕ್ಕೆಂದು ಹೇಳಿಲ್ಲ. ಇಂಟರ್‌ನೆಟ್‌ ಜೊತೆಗೆ ದೇಶದ ಭದ್ರತೆಯೂ ದೇಶದಲ್ಲಿರುವವರಿಗೆ ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಗುರುವಾರ ಕಾಂಗ್ರೆಸ್ ಸದಸ್ಯರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

"ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎಂಬುದಿಲ್ಲ, ಸೈರಾ ಕೋಟಿಗಟ್ಟಲೇ ಬಾಚುತ್ತಿದೆ"

ಇಂಟರ್‌ನೆಟ್‌ ಮೂಲಕ ಕಾಶ್ಮೀರ ದಲ್ಲಿ ಭಯೋತ್ಪಾದನೆ ಬೆಳೆಸಲು ಪಾಕಿಸ್ತಾನಕ್ಕೆ ಅನುಕೂಲ ಮಾಡಿಕೊಡಬೇಕೇ ಎಂದು ರವಿಶಂಕರ್ ಪ್ರಶ್ನಿಸಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ದೂರವಾಣಿ ಮತ್ತು ಇಂಟರ್‌ನೆಟ್‌ ಸೌಲಭ್ಯ ಮುಂದುವರಿಸಲಾಗಿದ್ದು, ಸದ್ಯ ಅಲ್ಲಿ 783 ವೆಬ್‌ಸೈಟ್‌ಗಳನ್ನು ಗ್ರಾಹಕರ ಬಳಕೆಗೆ ಮುಕ್ತಗೊಳಿಸಲಾಗಿದೆ ಎಂದು ಸಚಿವರು ಲೋಕಸಭೆಯಲ್ಲಿ ಉತ್ತರಿಸಿದ್ದಾರೆ.

Internet Is Not Fundamental Right; Syas Minister Ravi Shankar Prasad

ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ರದ್ದತಿ ನಂತರ ಅಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂಟರನೆಟ್ ಬಳಕೆಗೆ ನಿಷೇಧ ಹೇರಿತ್ತು. ಹೀಗಾಗಿ ದೇಶವಾಸಿಗಳ ಮೂಲಭೂತ ಹಕ್ಕು ಎಂದು ಪ್ರತಿಪಕ್ಷಗಳು ವಿರೋಧಿಸಿದ್ದವು.

English summary
Internet Is Not Fundamental Right; Syas Minister Ravi Shankar Prasad In Parliment Budget Session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X