ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟರ್ನೆಟ್ ನಲ್ಲಿ ಸ್ವಾತಂತ್ರ್ಯಕ್ಕೆ ಸುಪ್ರೀಂಕೋರ್ಟ್ ಅಸ್ತು

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮಾ.24: ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66 (ಎ ) ಅಸಂವಿಧಾನತ್ಮಾಕ ಎನ್ನುವ ಮೂಲಕ ಸುಪ್ರೀಂಕೋರ್ಟ್ ಮಂಗಳವಾರ ಇಂಟರ್ನೆಟ್ ಸ್ವಾತಂತ್ರ್ಯಕ್ಕೆ ಬೆಂಬಲ ಸೂಚಿಸಿದೆ. ವೆಬ್ ಸೈಟ್, ಸಾಮಾಜಿಕ ಜಾಲ ತಾಣಗಳಲ್ಲಿ ಕಾಮೆಂಟ್ ಮಾಡಿದರೆ ಎಲ್ಲಿ ಬಂಧನ ಮಾಡುತ್ತಾರೋ ಎಂಬ ಭಯ ಇನ್ನಿಲ್ಲ.

ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆ.66ಎ ಬಳಸಿಕೊಂಡು ಅಧಿಕಾರದಲ್ಲಿರುವವರು ವೆಬ್‌ಸೈಟ್‌ಗಳಲ್ಲಿ ಅವಹೇಳನಕಾರಿ ಪೋಸ್ಟಿಂಗ್‌ ಹಾಕಿದವರನ್ನು ಬಂಧಿಸುವ ಕೆಟ್ಟ ಕ್ರಮಕ್ಕೆ ಇನ್ಮುಂದೆ ಸುಪ್ರೀಂಕೋರ್ಟ್ ಆದೇಶ ಅಡ್ದ ಬರಲಿದೆ. ಪೊಲೀಸರಿಗೆ ಪರಮಾಧಿಕಾರ ನೀಡುವ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 66 ಎ ಗೆ ಕೋರ್ಟ್ ಕಡಿವಾಣ ಹಾಕಿದೆ.

Internet freedom at last: Section 66 A of IT act strcuk down

ಜಸ್ಟಿಸ್‌ ಚೆಲಮೇಶ್ವರ್‌ ಮತ್ತು ಆರ್‌ ಎಫ್ ನರಿಮಾನ್‌ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್‌ ಪೀಠ ಫೆ.26ರಂದು ಅರ್ಜಿ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರ್ಸಿತ್ತು. ಮಂಗಳವಾರ(ಮಾ.24) ಮಹತ್ವದ ತೀರ್ಪು ಪ್ರಕಟಿಸಿದೆ.

ಏನಿದು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್ 66 (ಎ )?

ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆ.66ಎ ಪ್ರಕಾರ ಯಾರಾದರೂ ಅಂತರ್ಜಾಲ ತಾಣಗಳಲ್ಲಿ ಅವಹೇಳನಕಾರಿ ಅಥವಾ ಆಕ್ಷೇಪಾರ್ಹ ಪೋಸ್ಟಿಂಗ್‌ ಹಾಕುವಂತಿಲ್ಲ. ಕಾಯ್ದೆ ಉಲ್ಲಂಘಿಸಿದವರನ್ನು ಬಂಧಿಸುವ ಅಧಿಕಾರ ಪೊಲೀಸರಿಗೆ ನೀಡಲಾಗಿತ್ತು.

ಸಂವಿಧಾನದ ಪರಿಚ್ಛೇದ 19(1) ರ ಅನ್ವಯ ಪ್ರತಿಯೊಬ್ಬ ನಾಗರೀಕನಿಗೂ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಸಿಗಬೇಕು. ಹಾಗೂ 19(2) ರಂತೆ ಸಂವಿಧಾನದ ನಿಯಮಕ್ಕೆ ನಿರ್ಬಂಧ ಹೇರಲು ಕಾಯ್ದೆಗೆ ಅವಕಾಶವಿರುವುದಿಲ್ಲ. ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆ.66ಎ ನಲ್ಲಿ ಅನೇಕ ಲೋಪಗಳಿದ್ದು, ಸಂವಿಧಾನ ನೀಡುವ ಹಕ್ಕನ್ನು ಕಿತ್ತುಕೊಳ್ಳುತ್ತಿತ್ತು.

ಮುಂಬೈ 26/11ದಾಳಿ ನಂತರ ಐಟಿ ಕಾಯ್ದೆಗೆ ತಿದ್ದುಪಡಿ ತಂದು 2008ರ ಡಿಸೆಂಬರ್ 22ರಂದು ಲೋಕಸಭೆಯಲ್ಲಿ ಆತುರವಾಗಿ ಮಸೂದೆ ಮಂಡಿಸಿ, ಅಂಗೀಕರಿಸಲಾಗಿತ್ತು. ವರದಕ್ಷಿಣೆ ಕಾಯ್ದೆಗೆ ಹೋಲಿಸಿದರೆ ಐಟಿ ಕಾಯ್ದೆಯ 66 (ಎ) ಸೆಕ್ಷನ್ ಇಲ್ಲಿ ತನಕ ದುರ್ಬಳಕೆಯಾದ ಉದಾಹರಣೆಗಳೇ ಕಂಡು ಬಂದಿದೆ.

ನಿಜಕ್ಕೂ ಐಟಿ ಕಾಯ್ದೆ ಲೋಪಗಳೇನು?
ಸೈಬರ್ ಕಾನೂನು ತಜ್ಞ ಪವನ್ ದುಗ್ಗಲ್ ಅವರು ಒನ್ ಇಂಡಿಯಾ ಜೊತೆ ಮಾತನಾಡಿ, ಕಂಪ್ಯೂಟರ್ ಅಥವಾ ಮೊಬೈಲಿನಿಂದ ಕಳಿಸುವ ಸಂದೇಶಗಳೆಲ್ಲವನ್ನು ಆಕ್ಷೇಪಾರ್ಹ ಎಂದು ಪರಿಗಣಿಸುವ ದುರಂತ ನಮಗೆ ಈ ಸೆಕ್ಷನ್ ಒದಗಿಸುತ್ತದೆ.

ಉದ್ದೇಶವಿಲ್ಲದೆ ಕಳಿಸುವ ಸಂದೇಶ ಕೂಡಾ ನಿಮ್ಮನ್ನು ಬಂಧನಕ್ಕೆ ಒಳಪಡಿಸುವುದಾದರೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲದ್ದಂತಾಗುತ್ತದೆ. ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುವ ಸಂದೇಶ, ಪ್ರತಿಕ್ರಿಯೆ ಎಲ್ಲವನ್ನು ಬೇರೆಯದೆ ಆಯಾಯದಿಂದ ಓದುವ ಸಾಧ್ಯತೆಯನ್ನು ಈ ಸೆಕ್ಷನ್ ಒದಗಿಸುತ್ತದೆ. ಹೀಗಾಗಿ ಇದು ಅಧಿಕಾರದಲ್ಲಿರುವವರು ಅಂದರೆ ದೂರುದಾರ ಹಾಗೂ ಪೊಲೀಸರ ಹಿಡಿತಕ್ಕೆ ಒಳಪಡುತ್ತದೆ. ಆರೋಪಿತ ವ್ಯಕ್ತಿಗೆ ಸ್ವಾತಂತ್ರ್ಯವೇ ಇಲ್ಲದ್ದಂತಾಗುತ್ತದೆ.

English summary
The Supreme Court today struck down the validity of Section 66 A of the Information Technology (IT) Act terming it as unconstitutional.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X