• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂತಾರಾಷ್ಟ್ರೀಯ ಯೋಗ ದಿನ LIVE: ದೇಶಾದ್ಯಂತ ಯೋಗ ಹಬ್ಬದ ಸಂಭ್ರಮ

|

ನವದೆಹಲಿ, ಜೂನ್ 21: ಐದನೇ ಅಂತಾರಾಷ್ಟ್ರೀಯ ಯೋಗದಿನದ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ದೇಶದಾದ್ಯಂತ ಯೋಗ ಪ್ರದರ್ಶನ ಮಾಡುವ ಮೂಲಕ ಯೋಗದಿನ ಆಚರಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಗೃಹಸಚಿವ ಅಮಿತ್ ಶಾ, ಹರ್ಯಾಣದ ರೋಹ್ಟಕ್ ನಲ್ಲಿ ಯೋಗದಿನದ ಕಾರ್ಯಕ್ರಮದಲ್ಲಿ ಭಾಗಿಯಾದರು.

ಗ್ಪುರದಲ್ಲಿ ವಿಶ್ವದ ಅತೀ ಚಿಕ್ಕ ಮಹಿಳೆ ಜ್ಯೋತಿಯಿಂದ ಯೋಗಾಭ್ಯಾಸ

International Yoga Day Live updates, PM Modi and leaders lead events across the country

2014 ರ ಸೆಪ್ಟೆಂಬರ್ 27 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನ ಆಚರಿಸುವ ಪ್ರಸ್ತಾಪವನ್ನಿಟ್ಟಿದ್ದರು. ಅದಕ್ಕೆ ಒಪ್ಪಿಗೆ ಸೂಚಿಸಿದ್ದ ವಿಶ್ವಸಂಸ್ಥೆ, ಜೂನ್ 21 ರಂದು ಯೋಗ ದಿನ ಆಚರಿಸಲು ಒಪ್ಪಿಗೆ ಸೂಚಿಸಿತ್ತು. 2015 ರ ಜೂನ್ 21 ರಂದು ಮೊದಲ ಯೋಗ ದಿನವನ್ನು ಆಚರಿಸಲಾಗಿತ್ತು.

ಸಾಂಸ್ಕೃತಿಕ ನಗರಿ ಮೈಸೂರಿಗೆ ಈ ಬಾರಿಯೂ 'ಯೋಗ' ಇಲ್ಲ!

ಈ ವರ್ಷದ ಯೋಗ ದಿನದ ಘೋಷವಾಕ್ಯ, 'ಹೃದಯದ ಆರೋಗ್ಯಕ್ಕಾಗಿ ಯೋಗ' ಎಂಬುದು. ಯೋಗದಿನದ ಹಿನ್ನೆಲೆಯಲ್ಲಿ ದೇಶದಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

Newest First Oldest First
9:30 AM, 21 Jun
ಕರ್ನಾಟಕ
ಕರ್ನಾಟಕ
ವಿಶ್ವ ಯೋಗದಿನದ ಅಂಗವಾಗಿ ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ಯೋಗಾಭ್ಯಾಸ ಮಾಡಲಾಯ್ತು. ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಗಣ್ಯರು ಯೋಗಾಭ್ಯಾಸ ನಡೆಸಿದರು.
9:26 AM, 21 Jun
ಕೇರಳ
ಕೇರಳದ ತಿರುವನಂತಪುರಂನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಯೋಗ ದಿನಾಚರಣೆ ಆಚರಿಸಿದರು.
9:01 AM, 21 Jun
ದ್ವಾರಕೆಯಲ್ಲಿ ಅಂತಾರಾಷ್ಟ್ರೀಯ ಯೋಗದಿನದ ನೇತೃತ್ವದ ವಹಿಸಿದ್ದ ಕೇಂದ್ರ ಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಸ್ಮೃತಿ ಇರಾನಿ(ಚಿತ್ರ ಕೃಪೆ: ಎಎನ್ ಐ)
8:59 AM, 21 Jun
ಯೋಗಜ್ಞಾನ ಜಗತ್ತಿನ ಕಲ್ಯಾಣಕ್ಕಾಗಿ. ಯೋಗಕ್ಕೆ ಜಾಗತಿಕ ಘನತೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ಈ ಸಂದರ್ಭದಲ್ಲಿ ಅಭಿನಂದಿಸುತ್ತೇನೆ- ಅಮಿತ್ ಶಾ, ಗೃಹ ಸಚಿವ
8:57 AM, 21 Jun
ಹರ್ಯಾಣದ ರೋಹ್ಟಕ್ ನಲ್ಲಿ ಗೃಹ ಸಚಿವ ಅಮಿತ್ ಶಾ ಯೋಗ ದಿನಾಚರಣೆಯ ನೇತೃತ್ವ ವಹಿಸಿ ಮಾತನಾಡಿದರು.
8:51 AM, 21 Jun
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಯೋಗ ದಿನ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಯೋಗ ಎಂಬುದು ಕೇವಲ ಒಂದು ಕಾರ್ಯಕ್ರಮವಲ್ಲ, ಅದು ನಮ್ಮ ಬದುಕಿನ ಅವಿಭಾಜ್ಯ ಅಂಗ" ಎಂದರು.
8:49 AM, 21 Jun
ದೆಹಲಿಯ ರಾಜಪಥದಲ್ಲಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಪ್ರಕಾಶ್ ಜಾವಡೇಕರ್ ಯೋಗ ಪ್ರದರ್ಶಿಸಿದರು.
8:46 AM, 21 Jun
ಹಿಮಾಲಯದಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ಯೋಗ ದಿನ ಆಚರಿಸಿದರು.
8:45 AM, 21 Jun
ಮಹಾರಾಷ್ಟ್ರದ ನಾಗ್ಪುರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಂತಾರಾಷ್ಟ್ರೀಯ ಯೋಗ ದಿನದ ನೇತೃತ್ವ ವಹಿಸಿದ್ದರು.
8:44 AM, 21 Jun
ವಿಶ್ವಸಂಸ್ಥೆಯ ಭಾರತೀಯ ರಾಯಭಾರಿಯಾಗಿರುವ ಎಸ್ ಅಕ್ಬರುದ್ದಿನ್ ನ್ಯೂಯಾರ್ಕ್ ನಲ್ಲಿ ಯೋಗಾಭ್ಯಾಸ ನಡೆಸಿ, ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯ ಕೋರಿದರು.
7:14 AM, 21 Jun
ಭಾಷಣದ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಯೋಗ ಪ್ರದರ್ಶನ ಆರಂಭ
7:11 AM, 21 Jun
ಯೋಗದಿನಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಜಗತ್ತಿನ ವಿವಿಧ ಭಾಗಗಳಲ್ಲಿ ಇಂದು ಜನರು ಯೋಗಾಚರಣೆಗಾಗಿ ಸೇರಿದ್ದಾರೆ. ಅದು ಹೆಮ್ಮೆಯ ವಿಷಯ- ನರೇಂದ್ರ ಮೋದಿ
7:09 AM, 21 Jun
"ಯೋಗ ನಮ್ಮೆಲ್ಲರ ಆರೋಗ್ಯಕ್ಕೆ ಅಗತ್ಯ ಎಂಬುದನ್ನು ನಾವು ಬಲ್ಲೆವು. ಅದು ನಮ್ಮ ಸಂಸ್ಕೃತಿಯ ಭಾಗವಾಗಿದೆ. ಆದರೆ ಇದೀಗ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ" - ನರೇಂದ್ರ ಮೋದಿ
7:07 AM, 21 Jun
ಅರುಣಾಚಲ ಪ್ರದೇಶ
ಅರುಣಾಚಲ ಪ್ರದೇಶದಲ್ಲಿ ಇಂಡೋ- ಟಿಬೇಟಿಯನ್ ಬಾರ್ಡರ್ ಪೊಲೀಸ್ ನ 9 ನೇ ಬೆಟಾಲಿಯನ್ ಸಿಬ್ಬಂದಿ ದಿಗುರು ನದಿಯಲ್ಲಿ ಯೋಗ ಆಚರಿಸಿದರು.
7:05 AM, 21 Jun
ಈ ಬಾರಿ ಯೋಗದ ಉದ್ದೇಶ ಶಾಂತಿ, ಸದ್ಭಾವ ಮತ್ತು ಸಮೃದ್ಧಿಗಾಗಿ ಆಗಿರಲಿ. ಯೋಗ ಪ್ರತಿಯೊಬ್ಬರ ಬದುಕಿನ ಜೀವನ ವಿಧಾನವಾಗಲಿ- ನರೇಂದ್ರ ಮೋದಿ
7:04 AM, 21 Jun
ಮಹಾರಾಷ್ಟ್ರ
ಮಹಾರಾಷ್ಟ್ರದ ನಂದೇಡ್ ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಯೋಗಗುರು ಬಾಬಾ ರಾಮದೇವ್ ಅವರು ಯೋಗ ಪ್ರದರ್ಶನ ಮಾಡಿದರು.
7:02 AM, 21 Jun
ನೇಪಾಳ
ನೇಪಾಳದ ಜಾನಕಪುರದ ಜಾನಕಿ ದೇವಾಲಯದ ಆವರಣದಲ್ಲಿ ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಯೋಗ ದಿನದಲ್ಲಿ ನೂರಾರು ಜನ ಪಾಲ್ಗೊಂಡು ಯೋಗ ಪ್ರದರ್ಶನ ಮಾಡಿದರು.
7:01 AM, 21 Jun
ಸಿಕ್ಕಿಂ
ಸಿಕ್ಕಿಂ ನಲ್ಲಿ ಐಟಿಬಿಪಿ ಸಿಬ್ಬಂದಿ ಒಬಿ ದೊರ್ಜಿಲಾ ಬಳಿ 19000 ಅಡಿ ಎತ್ತರದಲ್ಲಿ, -15 ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಯೋಗ ಪ್ರದರ್ಶನ ಮಾಡಿದರು.
6:59 AM, 21 Jun
ಜಾರ್ಖಂಡ್
ಜಾರ್ಖಂಡ್
ಆಧುನಿಕ ಯೋಗದ ಪಯಣವನ್ನು ನಗರದಿಂದ ಹಳ್ಳಿಗೆ, ಬುಡಕಟ್ಟು ಪ್ರದೇಶಕ್ಕೆ ತೆಗೆದುಕೊಂಡು ಹೋಗಬೇಕಿದೆ. ಯೋಗವನ್ನು ಬಡವರು ಮತ್ತು ಬುಡಕಟ್ಟು ಜನರ ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕಿದೆ. ಏಕೆಂದರೆ ಅನಾರೋಗ್ಯದಿಂದ ಹೆಚ್ಚು ಬಳಲುವವರು ಬಡವರು- ನರೇಂದ್ರ ಮೋದಿ
6:57 AM, 21 Jun
ಜಾರ್ಖಂಡ್
ಯೋಗಕ್ಕೆ ಜಾತಿ, ಮತ, ಬಣ್ಣ, ಲಿಂಗ, ಬಡವ-ಬಲ್ಲಿದ ಎಂಬ ಯಾವ ಬೇಧವಿಲ್ಲ. ಅದು ಎಲ್ಲ ಸರಹದ್ದುಗಳನ್ನು ಮೀರಿದ್ದು- ನರೇಂದ್ರ ಮೋದಿ
6:55 AM, 21 Jun
Illness(ಅನಾರೋಗ್ಯ) ನಿಂದ wellness(ಆರೋಗ್ಯ) ನೆಡೆಗೆ ನಮ್ಮನ್ನು ಒಯ್ಯಲು ಯೋಗ ಸಹಾಯ ಮಾಡುತ್ತದೆ- ನರೇಂದ್ರ ಮೋದಿ
6:54 AM, 21 Jun
ಜಾರ್ಖಂಡ್
ಎಲ್ಲರಿಗೂ ಯೋಗದಿನದ ಶುಭಾಶಯಗಳು. ಯೋಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯಗೊಳಿಸಲು ನಮ್ಮ ಮಾಧ್ಯಮ ಮಿತ್ರರು, ಸಾಮಾಜಿಕ ಮಾಧ್ಯಮದ ಮಿತ್ರರು ವಹಿಸಿರುವ ಪಾತ್ರ ಅತ್ಯಂತ ಮಹತ್ವದ್ದು. ಅವರಿಗೆ ನನ್ನ ಕೃತಜ್ಞತೆಗಳು-ನರೇಂದ್ರ ಮೋದಿ, ಪ್ರಧಾನಿ
6:51 AM, 21 Jun
ಅಂತಾರಾಷ್ಟ್ರೀಯ ಯೋಗದಿನಕ್ಕಾಗಿ ರಾಂಚಿಯ ಪ್ರಭಾತ್ ತಾರಾ ಮೈದಾನದಲ್ಲಿ ಮೋದಿ ಭಾಷಣ
6:48 AM, 21 Jun
ಕೇಂದ್ರ ಸಚಿವರಾದ ರವಿಶಂಕರ್ ಪ್ರಸಾದ್, ಪಿಯೂಶ್ ಗೋಯಲ್, ಹರ್ಷ್ ವರ್ಧನ್, ಸ್ಮೃತಿ ಇರಾನಿ, ಥವಾರ್ ಚಂದ್ ಗೆಹ್ಲೋಟ್, ಧರ್ಮೇಂದ್ರ ಪ್ರಧಾನ್, ರಮೇಶ್ ಪೊಕ್ರಿಯಾಲ್, ಮುಖ್ತಾರ್ ಅಬ್ಬಾಸ್ ನಖ್ವಿ, ಅರ್ಜುನ್ ಮುಂಡಾ ಮುಂತಾದವರು ದೇಶದ ನಾನಾ ಕಡೆಗಳಲ್ಲಿ ಯೋಗ ದಿನವನ್ನು ಮುನ್ನಡೆಸಲಿದ್ದಾರೆ.

English summary
5thn International Yoga Day Live updates in Kannada. PM Narendra Modi in Ranchi, and other leaders across the country lead events.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X