• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವ ಯೋಗ ದಿನ : ನೀವು ತಿಳಿದಿರಲೇಬೇಕಾದ ಸಂಗತಿಗಳು

By Vanitha
|

ನವದೆಹಲಿ, ಜೂ, 20 : ವಿಶ್ವಯೋಗ ದಿನ ಆಚರಣೆಗಾಗಿ ಎಲ್ಲೆಡೆ ಸಿದ್ಧತೆಗಳು ಭರದಿಂದ ಸಾಗಿದೆ. ನಾನಾ ವೇದಿಕೆಗಳು, ಮನಸ್ಸುಗಳು ಈಗಾಗಲೇ ಸಜ್ಜಾಗಿದೆ. ಇದರ ಹಿನ್ನೆಲೆಯಲ್ಲಿ ಗಿನ್ನಿಸ್ ದಾಖಲೆಗೆ ಸೇರುವ ತವಕ ಮುಗಿಲು ಮುಟ್ಟಿದೆ. ಈ ಹಿನ್ನೆಲೆಯಲ್ಲಿ ನೀವು ತಿಳಿದಿರಬೇಕಾದ ಸಂಗತಿಗಳು ಇಲ್ಲಿವೆ.

* ಯೋಗದಿನ ಅಚರಿಸಲು ನಗರದ ರಾಜಪಥ ಸಿದ್ಧವಾಗಿ ಕಂಗೊಳಿಸುತ್ತಿದೆ, ಪ್ರಧಾನಿ ನರೇಂದ್ರ ಮೋದಿ ಮುಂಜಾನೆ 6.45ಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂಧಿ ವರ್ಗ ಸೇರಿದಂತೆ 37,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಯೋಗ ದಿನ ಆಚರಿಸಿಕೊಂಡ ಬಹುದೊಡ್ಡ ಏಕೈಕ ಪಥ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಲಿದೆ.

* ಇದರ ಸಾರಥ್ಯವನ್ನು ಬಾಬಾ ರಾಮದೇವ್ ವಹಿಸಲಿದ್ದು, ಒಟ್ಟು 28 ಬಹುದೊಡ್ಡ ಪರದೆಯಲ್ಲಿ ಇದು ಕಾಣಸಿಗುತ್ತದೆ. 50 ರಾಷ್ಟ್ರಗಳ 80-100 ವಿದೇಶಿಗರು ಇದನ್ನು ನೋಡುವ ಸಾಧ್ಯತೆಯಿದೆ.

* 35 ನಿಮಿಷ ನಡೆಯುವ ಯೋಗದಲ್ಲಿ ಪಾಲ್ಗೊಳ್ಳಲು ರಾಜಕೀಯ ನಾಯಕರುಗಳು ಬಹಳ ಉತ್ಸುಕರಾಗಿದ್ದಾರೆ. ಇದು ವಿವಿಧ ಪ್ರದೇಶಗಳಲ್ಲಿ ವೇದಿಕೆಯನ್ನು ಹಂಚಿಕೊಂಡಿದೆ, ಅವರುಗಳೆಂದರೆ:

ಮಹಾರಾಷ್ಟ್ರ ಮುಖ್ಖಯಮಂತ್ರಿ - ದೇವೇಂದ್ರ ಪಡ್ನವೀಸ್, ನಾಗಪುರ್

ಸಾರಿಗೆ ಸಚಿವ ನಿತಿನ್ ಘಟ್ಕರಿ

ನಗಾರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು, ಚಿನೈ

ಆಹಾರ ಸಚಿವ ರಾಮ್ ವಿಲಾಸ್ ಪಸ್ವಾನ್, ಪಾಟ್ನಾ

ಕೃಷಿ ಸಚಿವ ರಾಧಾಮೋಹನ್ ಸಿಂಗ್, ಬಿಹಾರದ ಮೋತಿಹಾರಿ

ಇಂಧನ ಸಚಿವ ಧರ್ಮೇಂದ್ರ ಪ್ರಧಾನ್, ಭುವನೇಶ್ವರ್

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ನ್ಯೂಯರ್ಕ್,(ಯುಎನ್ಒ ಹಾಲ್)

ಐಶಾ ಫೌಂಡೇಶನ್ "High on Yoga@35000 feet" ಬಾಹ್ಯಾಕಾಶ ಜೆಟ್ ವಿಮಾನ ಕಾರ್ಯರಂಭ ಮಾಡಲಿದೆ,

* ಆರೋಗ್ಯ ಸಚಿವರು ಯೋಗ ನಡೆಯುವ ವಿವಿಧೆಡೆಯಲ್ಲಿ ಸುಮಾರು 200 ಅಬ್ಯುಲೆನ್ಸ್ ಸೇವೆ ಒದಗಿಸಿದ್ದಾರೆ. ಇದಕ್ಕಾಗಿ ಸಾಕಷ್ಟು ವೈದ್ಯರ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ.

* ನವದೆಹಲಿಯಲ್ಲಿ ಜೂನ್ 21ರಿಂದ 27ರವರೆಗೆ ಯೋಗ ಪರ್ವ ಕಾರ್ಯಕ್ರಮದಡಿಯಲ್ಲಿ ಹಲವು ಕಲಾತ್ಮಕವಾದ ರಂಜನೀಯಭರಿತ ಕಾರ್ಯಕ್ರಮಗಳು, ಧ್ಯಾನಗಳು, ನೃತ್ಯಗಳು, ಯೋಗ ವರ್ಕ್ ಶಾಪ್, ನಡೆಯಲಿವೆ.

* ಇದರ ಪ್ರಯುಕ್ತ ಮುಂಜಾನೆ 4 ಗಂಟೆಗೆ ದೆಹಲಿಯಲ್ಲಿ ಮೆಟ್ರೋ ಕಾರ್ಯರಂಭ ಮಾಡಲಿದೆ. ಆಗಮಿಸುವ ಪ್ರಯಾಣಿಕರಿಗೆ ರೈಲ್ವೆ ಟಿಕೆಟ್ ಗೆ ಸಂಬಂಧಿಸಿದಂತೆ ಕಾಶ್ಮೀರ್ ಗೇಟ್ ಮತ್ತು ಚಾಂದಿನಿ ಚೌಕ, ರೇಸ್ ಕೋರ್ಸ್, ಪಟೇಲ್ ಚೌಕ್, ಸೇರಿದಂತೆ ನಾನಾ ಕಡೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.

* ಅಲ್ಲದೇ ಇದರಿಂದ ಯೋಗ ಕಲಿಸುವವರಿಗೆ, ಆಯುರ್ವೇದಿಕ್ ಪಂಡಿತರು, ಆರೋಗ್ಯ ತಪಾಸನಾ ಕೇಂದ್ರಗಳು ಬಿಲಿಯನ್ ಗಟ್ಟಲೆ ಬೇಡಿಕೆ ಹೆಚ್ಚಲಿದೆ ಎಂದು ಅಸ್ಸೋಚ್ಚಮ್ ಅಧ್ಯಯನದಿಂದ ತಿಳಿದು ಬಂದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The stage set for the celebrations of the International Day of Yoga on June 21. Around 37,000 people are expected to join the function and 80-100 foreigners from around 50 countries are also expected to take part in the exercises
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more