ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Bois Locker Room ಗ್ರುಪ್ ಅಡ್ಮಿನ್ ಪಿಯುಸಿ ಹುಡುಗ!

|
Google Oneindia Kannada News

ನವದೆಹಲಿ, ಮೇ 6: ಇನ್‌ಸ್ಟಾಗ್ರಾಂ ಗ್ರೂಪ್‌ನಲ್ಲಿ ಶಾಲಾ ಬಾಲಕಿಯರ ಮೇಲೆ ಅತ್ಯಾಚಾರ ಮಾಡುವುದು ಹೇಗೆ ಎನ್ನುವ ಕುರಿತು ಚಾಟ್ ನಡೆಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರುಪ್ ಅಡ್ಮಿನ್ ನೋಯ್ಡಾದ 12 ನೇ ತರಗತಿಯ ವಿದ್ಯಾರ್ಥಿಯನ್ನು ದೆಹಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

'ಬಾಯ್ಸ್ ಲಾಕರ್ ರೂಮ್' (Bois Locker Room) ಎನ್ನುವ ಇನ್‌ಸ್ಟಾ ಗ್ರಾಂ ಗ್ರೂಪ್‌ನಲ್ಲಿ ಒಟ್ಟು ದೆಹಲಿ ಶಾಲೆಯೊಂದರ 27 ಮಂದಿ ಕಾಲೇಜು, ಹೈಸ್ಕೂಲ್ ವಿದ್ಯಾರ್ಥಿಗಳಿದ್ದಾರೆ. ಅವರು ಬಾಲಕಿಯರ ಅತ್ಯಾಚಾರದ ಕುರಿತು ಚಾಟಿಂಗ್ ನಡೆಸುತ್ತಿದ್ದರು. ಹುಡುಗಿಯರ ಚಿತ್ರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು.

'ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಳ' : ಕ್ರಮಕ್ಕೆ ಆಗ್ರಹ'ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಹೆಚ್ಚಳ' : ಕ್ರಮಕ್ಕೆ ಆಗ್ರಹ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 15 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ, ತೀವ್ರ ವಿಚಾರಣೆ ನಡೆಸಿದ್ದಾರೆ. ಅವರ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ.

27 ಸದಸ್ಯರನ್ನು ಗುರುತಿಸಿದ್ದಾರೆ

27 ಸದಸ್ಯರನ್ನು ಗುರುತಿಸಿದ್ದಾರೆ

ಪೊಲೀಸರು ಈ ಗುಂಪಿನ 27 ಸದಸ್ಯರನ್ನು ಗುರುತಿಸಿದ್ದಾರೆ. ಕೆಲವರು ಅಪ್ರಾಪ್ತ ವಯಸ್ಸಿನವರು ಮತ್ತು ಕೆಲವರು 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಸೈಬರ್ ಕ್ರೈಂ ಪೊಲೀಸರಿಂದ ಪತ್ರ

ಸೈಬರ್ ಕ್ರೈಂ ಪೊಲೀಸರಿಂದ ಪತ್ರ

ಫೇಸ್‌ಬುಕ್ ಒಡೆತನದ ಕಂಪನಿಯಾಗಿರುವ ಇನ್‌ಸ್ಟಾಗ್ರಾಂಗೆ ಸೈಬರ್ ಕ್ರೈಂ ಪೊಲೀಸರು ಪತ್ರ ಬರೆದಿದ್ದು, ಆ ಗ್ರೂಪ್ ಬಗ್ಗೆ ಮತ್ತಷ್ಟು ಮಾಹಿತಿ ನೀಡುವಂತೆ ತಿಳಿಸಿದ್ದಾರೆ.

ಫೇಸ್‌ಬುಕ್ ಪ್ರತಿಕ್ರಿಯೆ

ಫೇಸ್‌ಬುಕ್ ಪ್ರತಿಕ್ರಿಯೆ

ಲೈಂಗಿಕ ದೌರ್ಜನ್ಯವನ್ನು ಉತ್ತೇಜಿಸುವ ಅಥವಾ ಯಾರನ್ನೂ, ವಿಶೇಷವಾಗಿ ಮಹಿಳೆಯರು ಮತ್ತು ಯುವಜನರನ್ನು ಶೋಷಿಸುವ ನಡವಳಿಕೆಯನ್ನು ನಾವು ಸಂಪೂರ್ಣವಾಗಿ ಅನುಮತಿಸುವುದಿಲ್ಲ ಎಂದು ಇನ್‌ಸ್ಟಾ ಗ್ರಾಂ ಒಡೆತನದ ಫೇಸ್‌ಬುಕ್ ವಕ್ತಾರರು ತಿಳಿಸಿದ್ದಾರೆ. ಆಕ್ಷೇಪಾರ್ಹ ವಿಷಯ ಬಗ್ಗೆ ಅರಿವು ಮೂಡಿದ ಕೂಡಲೇ ತೆಗೆದುಹಾಕಲಾಗಿದೆ ಎಂದು ಕಂಪನಿ ತಿಳಿಸಿದೆ.

ವಿದ್ಯಾರ್ಥಿನಿಯರ ಫೋಟೊಗಳನ್ನು ಹಾಕುತ್ತಿದ್ದರು

ವಿದ್ಯಾರ್ಥಿನಿಯರ ಫೋಟೊಗಳನ್ನು ಹಾಕುತ್ತಿದ್ದರು

ಯಾರದ್ದೂ ಒಪ್ಪಿಗೆ ಇಲ್ಲದೆ ಗ್ರೂಪ್‌ಗಳಲ್ಲಿ ವಿದ್ಯಾರ್ಥಿನಿಯರ ಫೋಟೊಗಳನ್ನು ಶೇರ್ ಮಾಡುತ್ತಿದ್ದರು. ಈ ಕುರಿತು ಗ್ರೂಪ್‌ನ ಸ್ಕ್ರೀನ್‌ಶಾಟ್ ತೆಗೆದು ಒಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಅದನ್ನು ಪೋಸ್ಟ್‌ ಮಾಡಿದ್ದರು. ತಮ್ಮದೇ ತರಗತಿಯ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವುದು ಹೇಗೆ ಎಂಬುದರ ಕುರಿತು ಕೂಡ ಚರ್ಚೆ ನಡೆದಿತ್ತು.

English summary
Instagram Bois Locker Room Group Admin Arrested By Delhi Police. he is 18 year old and puc student. police said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X