ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮಗೆ ಗೊತ್ತಿರದ ಕೆಲವು ರಾಷ್ಟ್ರೀಯ ಸುದ್ದಿಗಳ ತುಣುಕು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ನವದೆಹಲಿ.ಮಾ.12: ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯು ಮಾರ್ಚ್ 21 ರಿಂದ 23ರವರೆಗೆ ಹರಿಯಾಣದಲ್ಲಿ ನಡೆಯಲಿದ್ದು, ಈ ಪಂದ್ಯಾವಳಿಯಲ್ಲಿ ಅನೇಕ ರಾಜ್ಯಗಳು ಪಾಲ್ಗೊಳ್ಳಲಿವೆ ಎಂದು ಹರಿಯಾಣ ಸರ್ಕಾರದ ಅಮಿತ್ ವಿಜ್ ಹೇಳಿದ್ದಾರೆ.

ಭಾರತ್ ಕೇಸರಿ ಡಾಂಗಲ್ ಪ್ರಶಸ್ತಿ ವಿಜೇತರಾದವರು ಒಲಿಂಪಿಕ್ ಕ್ರೀಡಾಕೂಟದಲ್ಲಿ ಅರ್ಹತೆ ಪಡೆಯುತ್ತಾರೆ ಎಂದು ಅವರು ಹೇಳಿದರು. ಚಾಂಪಿಯನ್ ಶಿಪ್ ಪ್ರಶಸ್ತಿ ಒಂದು ಕೋಟಿ ರೂಪಾಯಿ ನಗದು ಪುರಸ್ಕಾರ ಹೊಂದಿದೆ ಎಂದು ತಿಳಿಸಿದರು.

ಲೋಕಸಭೆಯಲ್ಲಿ ಆಧಾರ್ ಮಸೂದೆ ಅಂಗೀಕಾರ

ಹಣಕಾಸು ಮತ್ತು ಇತರ ಸಬ್ಸಿಡಿಗಳ ಫಲಾನುಭವಿಗಳಿಗೆ ವಿತರಿಸುವ ಆಧಾರ್ ಮಸೂದೆ 2016ಕ್ಕೆ ಲೋಕಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ದೊರೆಯಿತು.

ಸೋರಿಕೆಯನ್ನು ತಡೆಗಟ್ಟುವ, ಅರ್ಹ ಫಲಾನುಭವಿಗಳಿಗೆ ನೇರವಾಗಿ ಸಬ್ಸಿಡಿ ವರ್ಗಾವಣೆ ಮಾಡುವ ಯೋಜನೆ ಇದಾಗಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸುವುದರ ಜತೆಗೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡುವುದು ಪ್ರಮುಖ ಉದ್ದೇಶವಾಗಿದೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಎಂದರು.[ಬಜೆಟ್ 2016: ಅರುಣ್ ಜೇಟ್ಲಿ ಹೇಳಿದ ತೆರಿಗೆ ಲೆಕ್ಕವೇನು?]

Inshort news of National, India

ಸೈನಿಕರ ಮೇಲೆ ದಾಳಿ ಮಾಡಿದ ಮಾವೋವಾದಿಗಳು

ತೆಲಂಗಾಣ ರಾಜ್ಯದ ಗಡಿ ಭಾಗದ ಸುಕ್ಮಾ ಜಿಲ್ಲೆಯ ಕುಂಟಾಪ್ರದೇಶದಲ್ಲಿ ಮಾವೋವಾದಿಗಳು ಹುದುಗಿಟ್ಟಿದ್ದ ನೆಲಬಾಂಬ್ ಸ್ಫೋಟದಿಂದಾಗಿ ಓರ್ವ ಕೇಂದ್ರ ಮೀಸಲು ಪಡೆಯ ಯೋಧ ಸೇರಿದಂತೆ 12 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಮೂವರು ಸಿಆರ್ಎಫ್ ಯೋಧರ ಸ್ಥಿತಿ ಗಂಭೀರವಾಗಿದ್ದು, ಗಾಯಗೊಂಡವರನ್ನು ಹೆಲಿಕಾಪ್ಟರ್ ಮೂಲಕ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗೆ ತೆಲಂಗಾಣ ಮತ್ತು ಚತ್ತೀಸ್ ಗಢದ ಗಡಿ ಭಾಗದಲ್ಲಿ ಭದ್ರತಾ ಸಿಬ್ಬಂದಿ ನಡೆಸಿದ ಗುಂಡಿನ ಕಾಳಗದಲ್ಲಿ ಹಲವಾರು ಮಾವೋವಾದಿಗಳು ಸಾವಿಗೀಡಾಗಿದ್ದರು.[ಸಿಯಾಚಿನ್ ಭೀಕರತೆ ಎದುರಿಸಿ ಸಾವು ಗೆದ್ದ ಕೊಡಗಿನ ಯೋಧರು]

ಅಸ್ಸಾಂ ವಿಧಾನಸಭೆ ಚುನಾವಣೆ ಭರದ ಸಿದ್ಧತೆ

ಅಸ್ಸಾಂ ವಿಧಾನಸಭೆ ಚುನಾವಣಾ ಸಿದ್ಧತೆ ಭರದಿಂದ ಸಾಗಿದ್ದು, ಮೊದಲನೇ ಹಂತದ ಮತದಾನಕ್ಕೆ ಮುಖ್ಯ ಚುನಾವಣಾ ಆಯೋಗದ ಉಪ ಆಯುಕ್ತರು ಶುಕ್ರವಾರ ಅಧಿಸೂಚನೆ ಹೊರಡಿಸಿದ್ದಾರೆ.

ಚುನಾವಣಾ ಅವಧಿಯಲ್ಲಿ ಎಲ್ಲ ಸರಕಾರಿ ವಾಹನಗಳಿಗೆ ಜಿಪಿಎಸ್ ಪದ್ಧತಿಯನ್ನು ಅಳವಡಿಸಿ, ವಾಹನದ ಚಲನವಲನಗಳ ಮೇಲೆ ನಿಗಾಇಡಲು ಸೂಚಿಸಲಾಗಿದೆ. ಏಪ್ರಿಲ್ 4ರಂದು ಮೊದಲನೇ ಹಂತದ 65 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.[30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]

ದೂರಸಂಪರ್ಕ ಇಲಾಖೆಯಲ್ಲಿ ವಂಚನೆ

ದೂರಸಂಪರ್ಕ ಇಲಾಖೆಯಲ್ಲಿ ಖಾಸಗಿ ಸೇವಾ ವಿತರಕರು ಸುಮಾರು 12 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಭಾರತದ ಮಹಾಲೇಖಪಾಲರ ವರದಿಯಲ್ಲಿ ತಿಳಿಸಿದೆ.

2006 2007ರಿಂದ ಮತ್ತು 2009 ರಿಂದ 2010ರ ವರೆಗೆ ಆರು ಪ್ರಮುಖ ಮಹಾನಗರಗಳಲ್ಲಿ ಮೊದಲನೇ ಹಂತದಲ್ಲಿ ಸಾರ್ವಜನಿಕ ವಲಯದ ಸೇವಾ ವಿತರಕರಿಂದ ಭಾರೀ ಪ್ರಮಾಣದ ಹಣ ವಂಚನೆಯಾಗಿರುವ ಅಂಶವನ್ನು ಮಹಾಲೇಖಪಾಲರು ತನಿಖೆಯಿಂದ ಪತ್ತೆ ಮಾಡಿದ್ದಾರೆ. ದೂರಸಂಪರ್ಕ ಇಲಾಖೆ ಮೊಬೈಲ್ ಹಾಗೂ ಇತರ ಸೇವೆಗಳ ಬಳಕೆದಾರರಿಗೆ ಸಮಗ್ರವಾದ ಪ್ರಯೋಜನವಾಗುವ ಸೇವೆಯನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಸಿಎಜಿ ತಿಳಿಸಿದೆ.[ಶೀಘ್ರ ಎಂ-ಒನ್ ಆಪ್ ಗೆ ಆಧಾರ್ ಸಂಖ್ಯೆಯೂ ಲಾಗಿನ್ ಐಡಿ]

ಹೈಡ್ರೋಕಾರ್ಬನ್ ವಲಯದ ಪಾರದರ್ಶಕತೆಗೆ ಸದ್ಯದಲ್ಲೇ ಹೊಸನೀತಿ

ಹೊಸ ಹೈಡ್ರೋಕಾರ್ಬನ್ ಶೋಧನೆ ಮತ್ತು ಪರವಾನಿಗೆ ನೀತಿಯು ದೇಶದಲ್ಲಿ ಹೊಸ ಶಕೆಯನ್ನು ಆರಂಭಿಸಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದರ್ ಪ್ರಧಾನ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ನೀತಿ, ಹೈಡ್ರೋಕಾರ್ಬನ್ ವಲಯದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ಮತ್ತು
ಖಚಿತ ಪಡಿಸುವ, ದೇಶಿಯ ತೈಲ ಮತ್ತು ಅನಿಲ ಉತ್ಪಾದನೆಯನ್ನು ವೃದ್ಧಿಸುವುದು, ಈ ವಲಯದಲ್ಲಿ ಸಾಕಷ್ಟು ಹೂಡಿಕೆ ಮಾಡಿ ಅಪಾರ ಪ್ರಮಾಣದ ಉದ್ಯೋಗವಕಾಶ ಸೃಷ್ಠಿಸುವ ಉದ್ದೇಶ ಹೊಂದಿದೆ ಎಂದು ಸಚಿವರು ಹೇಳಿದೆ.[ಪತಿ, ಪತ್ನಿ ಆದಾಯ 10 ಲಕ್ಷ ಇದ್ದರೆ ಎಲ್ ಪಿಜಿ ಸಬ್ಸಿಡಿ ಇಲ್ಲ]

ಮುಂದಿನ 48 ಗಂಟೆಯಲ್ಲಿ ಹಿಮಪಾತ

ಜಮ್ಮು ಮತ್ತು ಕಾಶ್ಮೀರ, ಹಿಮಾಚಲಪ್ರದೇಶ ಮತ್ತು ಉತ್ತರಾಖಂಡಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಹಿಮಕುಸಿತ ಉಂಟಾಗಲಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

English summary
Inshort news of National, Within 48 hours snow fall in Jammu and kashmir, Uttarkahand. Mavovadi's attaacked on ೧೨ soldiers they were very injured in Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X