• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತಮ ಸಲಹೆ ಇದ್ದರೆ ಮೋದಿಗೆ ನೀವೂ ಮೇಲ್ ಮಾಡಿ!

By Srinath
|

ನವದೆಹಲಿ, ಜೂನ್ 10: ದೇಶದ ಅಭಿವೃದ್ಧಿಗೆ ಪೂರಕವಾದ ಐಡಿಯಾಗಳಿವೆಯೇ? ಹಾಗಿದ್ದರೆ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದನ್ನೇ ಇ-ಮೇಲ್ ಮಾಡಿ ತಿಳಿಸಿಬಿಡಿ!

ಅದರಲ್ಲೂ ಸರ್ಕಾರಿ ಅಧಿಕಾರಿಗಳು ತಮ್ಮ ಉತ್ತಮ ಚಿಂತನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಬಹುದು ಎಂದು ಸ್ವತಃ ಪ್ರಧಾನಿ ಮೋದಿ ಅವರೇ ತಿಳಿಸಿದ್ದಾರೆ. ಇದು ಅನೇಕ ಅಧಿಕಾರಿಗಳಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. (ಮೋದಿ ವರದಿಗಾರಿಕೆ: ಹಳೆಯ ಸೊಗಡಿಲ್ಲ; ಹೊಸ ಸೊಗಸು! )

ಇತ್ತೀಚೆಗಷ್ಟೇ ಮೂಲಸೌಕರ್ಯ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಧ್ಯಮ ಶ್ರೇಣಿಯ ಅಧಿಕಾರಿಯೊಬ್ಬರು ಪ್ರಧಾನಿ ಮೋದಿಗೆ ಇ-ಮೇಲ್ ಮಾಡಿ, ತಮ್ಮಲ್ಲಿ ಮೊಳಕೆಯೊಡೆದಿದ್ದ ಚಿಂತನೆಯನ್ನು ಹಂಚಿಕೊಂಡಿದ್ದರು. (ಸರ್ಕಾರಿ ಕಚೇರಿಗಳಲ್ಲಿ ಜಿಮೇಲ್, ಯಾಹೂಗೆ ನಿಷೇಧ)

ಹೆಚ್ಚುತ್ತಿರುವ ಜನಸಂಖ್ಯೆಯ ನಡುವೆಯೂ ನಗರಗಳನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ಅವರು ಮಿಂಚಂಚೆಯಲ್ಲಿ ವಿವರಿಸಿದ್ದರು. ಅದಾಗುತ್ತಿದ್ದಂತೆ ಮೂರೇ ದಿನಗಳಲ್ಲೇ ಮೋದಿಯವರಿಂದ ಪ್ರತಿಕ್ರಿಯೆ ಬಂದಿದೆ. ಅಧಿಕಾರಿಯ ಚಿಂತನೆಯನ್ನು ಪ್ರಧಾನಿ ಶ್ಲಾಘಿಸಿದ್ದೇ ಅಲ್ಲದೆ, ಈ ವಿಚಾರವನ್ನು ಮುಂದೆ ಸಂಬಂಧಪಟ್ಟವರೊಂದಿಗೆ ಚರ್ಚೆಗೆ ತೆಗೆದುಕೊಳ್ಳುವೆ ಎಂದೂ ಹೇಳಿದ್ದಾರೆ. (ಮೋದಿಗೂ ಮೊರೆಯಿಟ್ಟ ಅರ್ಕಾವತಿ ನಿವೇಶನದಾರರು!)

ನನ್ನ ಇ-ಮೇಲ್ ಗೆ ಸ್ವತಃ ಪ್ರಧಾನಿಯೇ ಪ್ರತಿಕ್ರಿಯಿಸಿರುವುದನ್ನು ನನಗೆ ನಂಬಲಾಗುತ್ತಿಲ್ಲ. ನಮ್ಮ ಸಲಹೆಗಳನ್ನು ಆಲಿಸುವಂತಹ ಪ್ರಧಾನಿಯೊಬ್ಬರು ಸಿಕ್ಕಿರುವುದು ನಮ್ಮಲ್ಲಿ ಸ್ಫೂರ್ತಿ ತಂದಿದೆ ಎಂದು ಸದರಿ ಅಧಿಕಾರಿ ಸಂತಸಪಟ್ಟಿದ್ದಾರೆ. (ಚಿತ್ರ ಕೃಪೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Infrastructure Ministry officer gives idea to PM Narendra Modi through email and gets spontaneous approval. A mid-level officer posted with an infrastructure ministry sent an email to the PM Modi giving ideas on how to develop Indian cities to cater to the growing population. Modi not only appreciated the idea but said it would be taken up when the issue is discussed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more