ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತನವಾದ ಇಂಡೋನೇಷ್ಯಾ ವಿಮಾನದ ಪೈಲೆಟ್ ದೆಹಲಿಯವರು!

|
Google Oneindia Kannada News

ಜಕಾರ್ತಾ, ಅಕ್ಟೋಬರ್ 29: ಇಂಡೋನೇಷ್ಯಾದ ಜಕಾರ್ತಾದಿಂದ ಹೊರಟ ಲಯನ್ ಏರ್ ವಿಮಾನ ಪತನವಾಗಿದ್ದು, ವಿಮಾನದಲ್ಲಿದ್ದ 189 ಜನರೂ ಮೃತರಾಗಿದ್ದಾರೆಂದು ಮೂಲಗಳು ತಿಳಿಸಿವೆ.

ವಿಮಾನ ಪತನವಾಗುವ ಕೆಲವೇ ಕ್ಷಣ ಮೊದಲು ಸೂಚನೆ ಸಿಕ್ಕಿತ್ತು!ವಿಮಾನ ಪತನವಾಗುವ ಕೆಲವೇ ಕ್ಷಣ ಮೊದಲು ಸೂಚನೆ ಸಿಕ್ಕಿತ್ತು!

ಅಚ್ಚರಿಯ ವಿಷಯವೆಂದರೆ ಈ ವಿಮಾನದ ಪೈಲೆಟ್ ಆಗಿದ್ದವರು ಕ್ಯಾ.ಭವ್ಯೆ ಸುನೆಜಾ ಎಂಬ ಭಾರತೀಯ! ದೆಹಲಿ ಮೂಲದ ಭವ್ಯೆ ಅವರು ಸಹ ಈ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದು, ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ ಎಂದು ಇಂಡೋನೇಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಮುಂಬೈ ವಿಮಾನದಿಂದ ಆಯತಪ್ಪಿ ಬಿದ್ದ ಗಗನಸಖಿ ಮುಂಬೈ ವಿಮಾನದಿಂದ ಆಯತಪ್ಪಿ ಬಿದ್ದ ಗಗನಸಖಿ

31 ವರ್ಷ ಯವಸ್ಸಿನ ಸುನೆಜಾ ದೆಹಲಿಯ ಮಯೂರ್ ವಿಹಾರ್ ನವರು. ಇಲ್ಲಿನ ಅಹಾಲ್ಕಾನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಸುನೆಜಾ ಅವರಿಗೆ ಪೈಲೆಟ್ ಆಗಬೇಕೆಂಬುದು ಎಂದಿನ ಕನಸು.

Indonesian Air crash: Pilot was an Indian from Delhi

2009 ರಲ್ಲಿ ಬೆಲ್ ಏರ್ ಇಂಟರ್ನ್ಯಾಶ್ನಲ್ ನಿಂದ ಲೈಸೆನ್ಸ್ ಪಡೆದು ತಮ್ಮಕನಸನ್ನು ಸುನೆಜಾ ನನಸಾಗಿಸಿಕೊಂಡಿದ್ದರು.

ಮೃದುಭಾಷಿ, ಸರಳ ವ್ಯಕ್ತಿತ್ವದ ಸುನೆಜಾ ಎಮಿರೇಟ್ಸ್ ನಲ್ಲಿ ತರಬೇತಿ ಪಡೆದು, ನಂತರ ಲಯನ್ ಏರ್ ಗೆ ಮಾರ್ಚ್ 2011 ರಲ್ಲಿ ಸೇರಿದ್ದರು. ಇಂದು ಬೆಳಿಗ್ಗೆ ಕೋ ಪೈಲೆಟ್ ಹಾರ್ವಿನೋ ಮತ್ತಿತರ ಆರು ಸಿಬ್ಬಂದಿಯೊಡನೆ ಕ್ಯಾ.ಸುನೆಜಾ ವಿಮಾನ ಚಾಲನೆ ಮಾಡುತ್ತಿದ್ದರು. ಆದರೆ ವಿಮಾನ ಟೇಕಾಫ್ ಅದ 13 ನಿಮಿಷಗಳಲ್ಲಿ ರಾಡರ್ ಸಂಪರ್ಕ ಕಳೆದುಕೊಂಡು, ಪತನಗೊಂಡಿತ್ತು.

ಚೆನ್ನೈ ಏರ್ಪೋರ್ಟ್ ಗೋಡೆಗೆ ಡಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ! ಚೆನ್ನೈ ಏರ್ಪೋರ್ಟ್ ಗೋಡೆಗೆ ಡಿಕ್ಕಿ ಹೊಡೆದ ಏರ್ ಇಂಡಿಯಾ ವಿಮಾನ!

ಇಂಡೋನೇಷ್ಯಾ ರಾಜಧಾನಿ ಜಕಾರ್ತಾ ವಿಮಾನ ನಿಲ್ದಾಣದಿಂದ ಬೆಳಗ್ಗೆ 6:20 ಕ್ಕೆ ಟೇಕಾಫ್ ಆದ ವಿಮಾನ 6:33 ರ ಸಮಯಕ್ಕೆ ಸಂಪರ್ಕ ಕಳೆದುಕೊಂಡಿತ್ತು. ಟೇಕಾಫ್ ಆದ 13 ನಿಮಿಷದ ನಂತರ ಸಂಪರ್ಕ ಕಳೆದುಕೊಂಡ ವಿಮಾನ ಸಮುದ್ರವೊಂದರಲ್ಲಿ ಬಿದ್ದಿದ್ದು ನಂತರ ತಿಳಿಯಿತು. ವಿಮಾನದಲ್ಲಿದ್ದ 189 ಜನರೂ ಮೃತರಾಗಿದ್ದಾರೆಂದು ಮೂಲಗಳು ತಿಳಿಸಿವೆ.

English summary
Indonesian Lion Air plane crash took lives of 189 passengers. The pilot of the flight was an Indian, Bhavye Suneja.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X