ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯಲ್ಲಿ ಅ.27ರಂದು ಭಾರತ ಹಾಗೂ ಅಮೆರಿಕ ಮಧ್ಯೆ 2+2 ಮಾತುಕತೆ

|
Google Oneindia Kannada News

ನವದೆಹಲಿ,ಅಕ್ಟೋಬರ್ 22: ದೆಹಲಿಯಲ್ಲಿ ಅಕ್ಟೋಬರ್ 27 ರಂದು ಭಾರತ ಹಾಗೂ ಅಮೆರಿಕ ನಡುವೆ 2+2 ಮಾತುಕತೆ ನಡೆಯಲಿದೆ.

ಅಮೆರಿಕ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಮಾರ್ಕ್ ಟಿ ಎಸ್ಪರ್ ಭಾರತಕ್ಕೆ ಮಾತುಕತೆ ನಡೆಸಲು ಅಕ್ಟೋಬರ್ 26 ಮತ್ತು 27ರಂದು ಎರಡು ದಿನಗಳ ಮಾತುಕತೆ ನಡೆಸಲಿದ್ದಾರೆ.

ಚೀನಾ ವಿರೋಧಿ ಟ್ರಂಪ್‌ಗೆ ಚೀನಾದಲ್ಲೂ ಬ್ಯಾಂಕ್ ಖಾತೆ, ಉದ್ಯಮ ವ್ಯವಹಾರ!ಚೀನಾ ವಿರೋಧಿ ಟ್ರಂಪ್‌ಗೆ ಚೀನಾದಲ್ಲೂ ಬ್ಯಾಂಕ್ ಖಾತೆ, ಉದ್ಯಮ ವ್ಯವಹಾರ!

ಮೂರನೇ ಆವೃತಿಯನ್ನು ಆಯೋಜಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.ಈ ಬಾರಿಯ ಮೂರನೇ ಆವೃತ್ತಿಯ ಮಾತುಕತೆಯಲ್ಲಿ ಇಂಡೊ-ಫೆಸಿಫಿಕ್ ಪ್ರದೇಶದ ಸ್ಥಿತಿಗತಿ, ಭಾರತದ ನೆರೆ ದೇಶಗಳೊಂದಿಗೆ ನಡೆಯುತ್ತಿರುವ ಬೆಳವಣಿಗೆ, ದ್ವಿಪಕ್ಷೀಯ ಸಂಬಂಧಗಳ ಕುರಿತು ಮಾತುಕತೆ ನಡೆಸಲಿವೆ.

Indo-US Two-Plus-Two Talks On Oct 27 In Delhi

ಭಾರತದ ಕಡೆಯಿಂದ ಮಾತುಕತೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ.

ಮೊದಲ 2+2 ಮಾತುಕತೆ ಸೆಪ್ಟೆಂಬರ್ 2018ರಂದು ದೆಹಲಿಯಲ್ಲಿ ನಡೆದಿತ್ತು. ಅಂದಿನ ಮಾತುಕತೆ ಕಾರ್ಯತಂತ್ರಕ್ಕೆ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಗೆ ನೀಡಿದ್ದರು. 2019 ರ ಡಿಸೆಂಬರ್ ನಲ್ಲಿ ಎರಡನೇ ಸುತ್ತಿನ ಮಾತುಕತೆ ವಾಷಿಂಗ್ಟನ್ ನಲ್ಲಿ ನಡೆದಿತ್ತು.

English summary
India will host the third edition of the two-plus-two ministerial dialogue with the US on October 27, the Ministry of External Affairs announced on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X