• search
 • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶದ ಬರೇಲಿಯಿಂದ ಮುಂಬೈ, ಬೆಂಗಳೂರಿಗೆ ಇಂಡಿಗೋ ವಿಮಾನ ಸೇವೆ

|
Google Oneindia Kannada News

ನವದೆಹಲಿ, ಮಾರ್ಚ್ 4: ಉತ್ತರ ಪ್ರದೇಶದ ಬರೇಲಿಯಿಂದ ಮುಂಬೈ ಹಾಗೂ ಬೆಂಗಳೂರಿಗೆ ವಿಮಾನ ಯಾನ ಸೇವೆ ಆರಂಭಿಸುವುದಾಗಿ ಗುರುವಾರ ಇಂಡಿಗೋ ಘೋಷಣೆ ಮಾಡಿದೆ. ಏಪ್ರಿಲ್ 29ರ ನಂತರ ವಿಮಾನ ಯಾನ ಸೇವೆ ಆರಂಭಿಸಲಿರುವುದಾಗಿ ತಿಳಿಸಿದೆ.

ಲಕ್ನೋ, ಗೋರಖ್‌ಪುರ, ಅಲಹಾಬಾದ್, ವಾರಾಣಸಿ ಹಾಗೂ ಆಗ್ರಾ ನಂತರ ಇಂಡಿಗೋ ವಿಮಾನ ಯಾನ ಸೇವೆ ಪಡೆಯಲಿರುವ ಉತ್ತರ ಪ್ರದೇಶದ ಆರನೇ ನಗರ ಬರೇಲಿ ಎನಿಸಿಕೊಳ್ಳಲಿದೆ. ಇಂಡಿಗೋ ಸೇವೆ ಕಲ್ಪಿಸುತ್ತಿರುವ ದೇಶದ 67ನೇ ನಗರ ಬರೇಲಿ ಆಗಲಿದೆ.

ಹುಬ್ಬಳ್ಳಿಯಿಂದ ಗೋವಾ, ಕೊಚ್ಚಿಗೆ ಜ.21ರಿಂದ ನೇರ ವಿಮಾನಹುಬ್ಬಳ್ಳಿಯಿಂದ ಗೋವಾ, ಕೊಚ್ಚಿಗೆ ಜ.21ರಿಂದ ನೇರ ವಿಮಾನ

ಮುಂಬೈ-ಬರೇಲಿ ಮಾರ್ಗದಲ್ಲಿ ವಾರಕ್ಕೆ ನಾಲ್ಕು ವಿಮಾನಗಳು ಹಾಗೂ ಬೆಂಗಳೂರು-ಬರೇಲಿ ಮಾರ್ಗದಲ್ಲಿ ವಾರಕ್ಕೆ ಮೂರು ವಿಮಾನಗಳು ಸಂಚರಿಸಲಿವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

   10 ದಿನ ಸದನದಿಂದ ಬ್ಯಾನ್ ಮಾಡಿದ್ದು ಯಾಕೆ ?? | Bhadravati | Oneinda Kannada

   ಉತ್ತರ ಪ್ರದೇಶದ ಎಂಟನೇ ಮೆಟ್ರೊಪಾಲಿಟನ್ ನಗರ ಎಂದು ಕರೆಸಿಕೊಂಡಿರುವ ಬರೇಲಿ ಕ್ಷಿಪ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ವ್ಯವಹಾರ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಹಲವು ಅವಕಾಶ ಸೃಷ್ಟಿಯ ಸಾಧ್ಯತೆ ಇರುವುದರಿಂದ ಇಲ್ಲಿ ವಿಮಾನ ಯಾನ ಸೇವೆ ಆರಂಭಿಸಿರುವುದಾಗಿ ಇಂಡಿಗೋ ಹೇಳಿಕೆ ನೀಡಿದೆ.

   English summary
   Indigo on Thursday(Mar 4) has announced that it will start flight service from Bareilly To Mumbai and Bengaluru from April 29
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X