ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಗೋದಿಂದ 14 ಹೊಸ ವಿಮಾನಗಳು; ಇಲ್ಲಿದೆ ವಿವರ...

|
Google Oneindia Kannada News

ನವದೆಹಲಿ, ಏಪ್ರಿಲ್ 2: ಪ್ರಾದೇಶಿಕ ಸಂಪರ್ಕವನ್ನು ವಿಸ್ತರಿಸುವ ಉದ್ದೇಶದೊಂದಿಗೆ ಉಡಾನ್ ಯೋಜನೆಯಡಿಯಲ್ಲಿ ಇಂಡಿಗೋ 14 ಹೊಸ ವಿಮಾನಗಳನ್ನು ಪರಿಚಯಿಸಿರುವುದಾಗಿ ಶುಕ್ರವಾರ ಘೋಷಣೆ ಮಾಡಿದೆ.

ಈ ವಿಮಾನಗಳು ಒಡಿಶಾ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ ಸಂಪರ್ಕ ಸಾಧಿಸಲಿದ್ದು, ಈಶಾನ್ಯ ಪ್ರದೇಶಗಳಿಗೂ ವಿಮಾನ ಯಾನ ಸೇವೆ ವಿಸ್ತರಿಸಲಿದೆ.

Indigo Announces 14 New Flights Under Udaan Scheme

ಶುಕ್ರವಾರ ಸಂಸ್ಥೆ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಭುವನೇಶ್ವರ- ಅಲಹಾಬಾದ್, ಭುವನೇಶ್ವರ- ವಾರಾಣಸಿ, ಭೋಪಾಲ್- ಅಲಹಾಬಾದ್, ದಿಬ್ರುಗರ್- ದಿಮಾಪುರ, ಶಿಲಾಂಗ್- ಅಗರ್ತಲಾ ಹಾಗೂ ಶಿಲಾಂಗ್ ಸಿಲ್ಚಾರ್ ಮಾರ್ಗದಲ್ಲಿ ಈ ಹೊಸ ವಿಮಾನಗಳು ಸಂಚರಿಸಲಿವೆ ಎಂದು ಮಾಹಿತಿ ನೀಡಿದೆ.

ಪ್ರಾದೇಶಿಕ ವಿಮಾನ ಯಾನಕ್ಕೆ ಒತ್ತು ನೀಡುವುದರೊಂದಿಗೆ ಜನರಿಗೆ ವಿಮಾನ ಪ್ರಯಾಣ ದರವನ್ನು ಕೈಗೆಟುಕುವಂತೆ ಮಾಡುವ ಉದ್ದೇಶದೊಂದಿಗೆ ಉಡಾನ್ ಯೋಜನೆಯಡಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ವಿಮಾನ ನಿಲ್ದಾಣ ಸಂಸ್ಥೆಗಳು ಆಯ್ದ ವಿಮಾನ ಯಾನ ಸಂಸ್ಥೆಗಳಿಗೆ ಆರ್ಥಿಕ ಪ್ರೋತ್ಸಾಹ ವಿಸ್ತರಿಸಿವೆ.

ಉತ್ತರ ಪ್ರದೇಶದ ಬರೇಲಿಯಿಂದ ಮುಂಬೈ, ಬೆಂಗಳೂರಿಗೆ ಇಂಡಿಗೋ ವಿಮಾನ ಸೇವೆ ಉತ್ತರ ಪ್ರದೇಶದ ಬರೇಲಿಯಿಂದ ಮುಂಬೈ, ಬೆಂಗಳೂರಿಗೆ ಇಂಡಿಗೋ ವಿಮಾನ ಸೇವೆ

ಈ ವರ್ಷದ ಆರಂಭದಲ್ಲಿ, ಇಂಡಿಗೋ ಸಂಸ್ಥೆಯು ಉತ್ತರ ಪ್ರದೇಶದ ಬರೇಲಿ ಹಾಗೂ ಗುಜರಾತ್‌ನ ರಾಜಕೋಟ್‌ನಿಂದ ವಿಮಾನ ಯಾನಕ್ಕೆ ಚಾಲನೆ ನೀಡಲಾಗಿತ್ತು.

English summary
Indian domestic carrier Indigo has introduced 14 new flights under udaan scheme
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X