ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದೀಯ ರಾಜಕಾರಣಕ್ಕೆ ವಿದಾಯದ ಸೂಚನೆ ನೀಡಿದ ಸುಷ್ಮಾ, ಸುಮಿತ್ರಾ

|
Google Oneindia Kannada News

ಭಾರತೀಯ ಜನತಾ ಪಕ್ಷದ ಇಬ್ಬರು ಮಹಾನ್ ಮುಖಂಡರಾದ ಸುಷ್ಮಾ ಸ್ವರಾಜ್ ಮತ್ತು ಸುಮಿತ್ರಾ ಮಹಾಜನ್ ಅವರು ಮಾಜಿ-ಸಂಸದರ ಗುರಿತಿನ ಚೀಟಿಗೆ ಅರ್ಜಿ ಹಾಕಿರುವುದು ಅವರ ಸಂಸದೀಯ ರಾಜಕಾರಣಕ್ಕೆ ವಿದಾಯ ಹೇಳುತ್ತಿರುವ ಸೂಚನೆ ಎನ್ನಿಸಿದೆ.

ಅನಾರೋಗ್ಯದ ಕಾರಣ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿದ್ದರೂ, ರಾಜ್ಯ ಸಭೆಯಿಂದಾದರೂ ಸುಮಿತ್ರಾ ಮಹಾಜನ್, ಮತ್ತು ಸುಷ್ಮಾ ಸ್ವರಾಜ್ ಅವರು ಸಂಸತ್ ಪ್ರವೇಶಿಸಬಹುದು ಎಂಬ ಊಹೆ ಇನ್ನೂ ಹಲವು ಅಭಿಮಾನಿಗಳಿಗಿತ್ತು. ಆದರೆ ಅವರು ಮಾಜಿ ಸಂಸದರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿರುವುದು ಅಭಿಮಾನಿಗಳಿಗೆ ಭಾರೀ ನಿರಾಶೆಯನ್ನುಂಟು ಮಾಡಿದೆ.

ಆಂಧ್ರದ ರಾಜ್ಯಪಾಲೆಯಾಗಿ ನೇಮಕ? ಸುಷ್ಮಾ ಸ್ವರಾಜ್ ನೀಡಿದರು ಸ್ಪಷ್ಟನೆಆಂಧ್ರದ ರಾಜ್ಯಪಾಲೆಯಾಗಿ ನೇಮಕ? ಸುಷ್ಮಾ ಸ್ವರಾಜ್ ನೀಡಿದರು ಸ್ಪಷ್ಟನೆ

2019 ರ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂದು 67 ವರ್ಷ ವಯಸ್ಸಿನ ಸುಷ್ಮಾ ಸ್ವರಾಜ್ ಮೊದಲೇ ಘೋಷಿಸಿದ್ದರು. ಆದರೆ ತಾವು ರಾಜಕೀಯದಿಂದ ನಿವೃತ್ತಿ ಪಡೆಯುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದರು.

Indication of end of legislative innings: Sushma, Sumitra apply for ex MP card

ಜೊತೆಗೆ ಇಂಧೋರ್ ಸಂಸದೆ(ಮಾಜಿ)ಯಾಗಿದ್ದ 76 ವರ್ಷ ವಯಸ್ಸಿನ ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಹ ತಾವು ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಮಂಗಳವಾರ ಸುಮಿತ್ರಾ ಮಹಾಜನ್ ಅವರಿಗೆ ಮಾಜಿ ಸಂಸದರ ಗುರುತಿನ ಚೀಟಿಯನ್ನು ನೀಡಲಾಗಿದೆ ಎಂದು ಅವರ ವಕ್ತಾರ ಪಂಕಜ್ ಕ್ಷೀರಸಾಗರ್ ಸ್ಪಷ್ಟಪಡಿಸಿದ್ದಾರೆ.

ಈಗಾಗಲೇ ತಮ್ಮ ವಿದಾಯದ ಸಭೆಯನ್ನು ಮಹಾಜನ್ ನಡೆಸಿದ್ದು, ಟ್ವೀಟ್ ಮಾಡಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. "ನೀವು ನನಗೆ ಸ್ಪೀಕರ್ ಆಗುವ ಅವಕಾಶ ಕೊಟ್ಟಿದ್ದೀರಿ. ಧನ್ಯವಾದಗಳಿ ಪ್ರಧಾನಿ ಮೋದಿ" ಎಂದಿದ್ದಾರೆ.

ಆಂಧ್ರ ಪ್ರದೇಶದ ರಾಜ್ಯಪಾಲೆಯಾಗಿ ಸುಷ್ಮಾ ಸ್ವರಾಜ್ ನೇಮಕ?ಆಂಧ್ರ ಪ್ರದೇಶದ ರಾಜ್ಯಪಾಲೆಯಾಗಿ ಸುಷ್ಮಾ ಸ್ವರಾಜ್ ನೇಮಕ?

ಆದರೆ ಸುಷ್ಮಾ ಸ್ವರಾಜ್ ಅವರ ಅರ್ಜಿಯನ್ನು ಸ್ವೀಕರಿಸಲಾಗಿದ್ದು, ಅದು ಪ್ರಗತಿಯಲ್ಲಿದೆ ಎಂದು ತಿಳಿದುಂದಿದೆ. ಈ ಬಗ್ಗೆ ಸ್ವರಾಜ್ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ.

English summary
BJP leaders Sushma Swaraj who is former External affairs minister and Sumitra Mahajan who is former Lok Sabha speaker applied for Ex-MP cards. This indicates the end of their legislative innings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X