ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದಿಂದ ಆಮದು ಪ್ರಮಾಣ ಭಾರಿ ಏರಿಕೆ: ಕಾರಣವೇನು?

|
Google Oneindia Kannada News

ನವದೆಹಲಿ, ಡಿಸೆಂಬರ್ 04: ಒಂದೆಡೆ ಚೀನಾ ಹಾಗೂ ಭಾರತದ ನಡುವೆ ಗಡಿ ವಿವಾದ ಮುಂದುವರೆದಿದೆ. ಮತ್ತೊಂದೆಡೆ ಭಾರತವು ಚೀನಾದಿಂದ ಆಮದು ಮಾಡಿಕೊಂಡ ವಸ್ತುಗಳ ಪ್ರಮಾಣ ಕೂಡ ಏರಿಕೆಯಾಗಿದೆ.

ಚೀನಾದಿಂದ ಭಾರತದ ಆಮದು 2016-17ರಲ್ಲಿ 61.28 ಶತಕೋಟಿ ಡಾಲರ್‌ಗಳಿಂದ 2020-21ರ ಹೊತ್ತಿಗೆ 65.21 ಶತಕೋಟಿ ಡಾಲರ್‌ಗೆ ಏರಿಕೆಯಾಗಿದ್ದು, ಆ ಸಮಯದಲ್ಲಿ ವಾರ್ಷಿಕ ಶೇ.1.28ರಷ್ಟು ಬೆಳವಣಿಗೆ ದರವನ್ನು ದಾಖಲಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ರಾಜ್ಯಸಭೆಯಲ್ಲಿ ಶುಕ್ರವಾರ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Indias Import From China Increased From $61.28 Billion To $65.21 Billion

ಇನ್ನು ಭಾರತ ಚೀನಾಕ್ಕೆ ರಪ್ತು ಮಾಡುವ ಪ್ರಮಾಣದಲ್ಲೂ ಹೆಚ್ಚಿನ ಅಭಿವೃದ್ಧಿ ಕಂಡಿದೆ. 2016-17 ರಲ್ಲಿ 10.17 ಶತಕೋಟಿ ಡಾಲರ್​, 2020-21 ರಲ್ಲಿ 21.19 ಶತಕೋಟಿ ಡಾಲರ್​​ ಆಗಿದ್ದು, ಇದು ವಾರ್ಷಿಕವಾಗಿ ಶೇ. 21.67ರಷ್ಟು ಬೆಳವಣಿಗೆ ಹೊಂದಿದೆ ಎಂದು ಇದೇ ವೇಳೆ ಲೋಕಸಭೆಗೆ ಸಚಿವರು ಮಾಹಿತಿ ನೀಡಿದ್ದಾರೆ.

2019-20 ಮತ್ತು 2020-21ರ ನಡುವೆ ಚೀನಾದಿಂದ ಆಮದುಗಳು ಸ್ಥಿರವಾಗಿವೆ. ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮುಖ ವಸ್ತುಗಳು ಟೆಲಿಕಾಂ ಉಪಕರಣಗಳು, ಕಂಪ್ಯೂಟರ್ ಹಾರ್ಡ್‌ವೇರ್, ರಸಗೊಬ್ಬರ, ಎಲೆಕ್ಟ್ರಾನಿಕ್ ಘಟಕಗಳು ಮತ್ತು ಉಪಕರಣಗಳಾಗಿವೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.

ಭಾರತದಲ್ಲಿ ಟೆಲಿಕಾಂ ಮತ್ತು ಬಲವರ್ಧನೆ ಸಂಬಂಧ ವೇಗವಾಗಿ ವಿಸ್ತರಿಸುತ್ತಿರುವ ವಲಯಗಳ ಬೇಡಿಕೆಯನ್ನು ಪೂರೈಸಲು ಈ ಆಮದು ಮಾಡಲಾದ ಹಲವು ವಸ್ತುಗಳನ್ನು ಬಳಸಲಾಗುತ್ತದೆ. ಔಷಧ ಸೂತ್ರೀಕರಣಗಳು ಭಾರತೀಯ ಫಾರ್ಮಾ ಉದ್ಯಮಕ್ಕೆ ಸಿದ್ಧಪಡಿಸಿದ ಸರಕುಗಳನ್ನು ಉತ್ಪಾದಿಸಲು ಕಚ್ಚಾ ವಸ್ತುಗಳನ್ನು ಭಾರತದಿಂದ ರಫ್ತು ಮಾಡಲಾಗುತ್ತದೆ.

ಲಡಾಖ್‌ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಮಾರಾಮಾರಿಯ ಬಳಿಕವೂ ಭಾರತ ಮತ್ತು ಚೀನಾದ ನಡುವಿನ ವಹಿವಾಟಿಗೆ ಮಾತ್ರ ಯಾವುದೇ ಧಕ್ಕೆಯಾಗಿಲ್ಲ. ಇದನ್ನು ಅಂಕಿ ಅಂಶಗಳೇ ಹೇಳುತ್ತಿವೆ.

2020ರ ಜನವರಿಯಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಭಾರತವು ಚೀನಾದಿಂದ ಅತೀ ಹೆಚ್ಚಿನ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಈ ಅವಧಿಯಲ್ಲಿ ಭಾರತವು 4.26 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳನ್ನು ಚೀನಾದಿಂದ ಆಮದು ಮಾಡಿಕೊಂಡಿದೆ.

ಚೀನಾ, ಅಮೆರಿಕ, ಯುಎಇ, ಸೌದಿ ಅರೇಬಿಯಾ ಮತ್ತು ಇರಾಕ್‌ ಕ್ರಮವಾಗಿ ಭಾರತ ಅತೀ ಹೆಚ್ಚಿನ ಆಮದು ಮಾಡಿಕೊಂಡ ದೇಶಗಳಾಗಿವೆ.

ಚೀನಾದಿಂದ ಭಾರತ 58,71 ಬಿಲಿಯನ್‌ ಡಾಲರ್‌ ( 4.26 ಲಕ್ಷ ಕೋಟಿ ರೂ.) ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದ್ದರೆ, ಅಮೆರಿಕದಿಂದ 26.89 ಬಿಲಿಯನ್‌ ಡಾಲರ್‌, ಯುಎಇಯಿಂದ 23.96 ಬಿಲಿಯನ್‌ ಡಾಲರ್‌, ಸೌದಿ ಅರೇಬಿಯಾದಿಂದ 17.73 ಬಿಲಿಯನ್‌ ಡಾಲರ್‌ ಹಾಗೂ ಇರಾಕ್‌ನಿಂದ 16.26 ಬಿಲಿಯನ್‌ ಡಾಲರ್‌ ಮೌಲ್ಯದ ವಸ್ತುಗಳನ್ನು ಭಾರತ ಆಮದು ಮಾಡಿಕೊಂಡಿದೆ.

ಕೇವಲ ಈ ಐದು ದೇಶಗಳಿಂದಲೇ ಭಾರತ 143.55 ಬಿಲಿಯನ್‌ ಡಾಲರ್‌ ಅಂದರೆ 10.41 ಲಕ್ಷ ಕೋಟಿ ರೂ. ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ. ಒಟ್ಟಾರೆ ಭಾರತ 2020ರಲ್ಲಿ 371.98 ಬಿಲಿಯನ್‌ ಡಾಲರ್‌ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದ್ದು, ಇದರಲ್ಲಿ ಈ ಐದು ದೇಶಗಳ ಪಾಲೇ ಶೇ. 38.59 ರಷ್ಟಿದೆ.

ಭಾರತ-ಚೀನಾ ನಡುವೆ ಡಿಸೆಂಬರ್ ಅಂತ್ಯದೊಳಗೆ 14ನೇ ಸುತ್ತಿನ ಮಾತುಕತೆ ನಡೆಯಲಿದೆ. ಪೂರ್ವ ಲಖಾಡ್‌ನ ಗಡಿಯಲ್ಲಿ ಸಂಘರ್ಷವನ್ನು ಸಂಪೂರ್ಣವಾಗಿ ನಿಲ್ಲಿಸುವ ಗುರಿ ಹೊಂದಿರುವ ಭಾರತ ಮತ್ತು ಚೀನಾ ಮತ್ತೊಂದು ಸುತ್ತಿನ ಮಾತುಕತೆಗೆ ಮುಂದಾಗಿವೆ.

ಪೂರ್ವ ಲಖಾಡ್‌ನ ಗಡಿಯಲ್ಲಿ ಸಂಘರ್ಷವನ್ನು ಸಂಪೂರ್ಣವಾಗಿ ನಿಲ್ಲಿಸುವ ಗುರಿ ಹೊಂದಿರುವ ಭಾರತ ಮತ್ತು ಚೀನಾ ಮತ್ತೊಂದು ಸುತ್ತಿನ ಮಾತುಕತೆಗೆ ಮುಂದಾಗಿವೆ.

ಉಭಯ ದೇಶಗಳ ನಡುವಿನ 14ನೇ ಸುತ್ತಿನ ಕಾರ್ಪ್ಸ್‌ ಕಮಾಂಡ್ ಮಟ್ಟದ ಮಾತುಕತೆ ಈ ತಿಂಗಳ ದ್ವಿತೀಯಾರ್ಧದಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

Recommended Video

Mirage 2000 Fighter Jet : ಇನ್ನೂ ಏನ್ ಏನ್ ಕಳ್ಳತನ ಮಾಡ್ತಾರೋ! | Oneindia Kannada

English summary
India's import from China increased from $61.28 billion in 2016-17 to $65.21 billion in 2020-21, registering an annual growth rate of 1.28% during the time, the Minister of State for Commerce and Industry Anupriya Patel stated in the Rajya Sabha in a written statement on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X