ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ಮುಕ್ತಿ ಪಡೆದ ವಿದ್ಯಾರ್ಥಿನಿ; ಇದು ಭಾರತದಲ್ಲಿ ಮೊದಲು!

|
Google Oneindia Kannada News

ನವದೆಹಲಿ, ಫೆಬ್ರವರಿ 14: ಜಗತ್ತಿನಾದ್ಯಂತ ತೀವ್ರ ಆತಂಕ ಸೃಷ್ಠಿಸಿರುವ ಕೊರೊನಾ ವೈರಸ್ ಖಾಯಿಲೆ (ಕೋವಿದ್19) ಗೆ ತುತ್ತಾಗಿ ಚೇತರಿಸಿಕೊಂಡ ಭಾರತದ ಎರಡನೇ ರೋಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವರದಿಗಳು ಬಂದಿವೆ.

ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ವರದಿ ಬಿಡುಗಡೆ ಮಾಡಿದೆ. ಚೀನಾದ ವುಹಾನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗಕ್ಕೆ ತೆರಳಿದ್ದ ಕೇರಳದ ತ್ರಿಸುರ ಮೂಲದ ವಿದ್ಯಾರ್ಥಿನಿಗೆ ಕೊರೊನಾ ಇರುವುದು ದೃಡಪಟ್ಟಿತ್ತು. ಆಕೆ ಜನೇವರಿ 30 ರಂದು ಭಾರತಕ್ಕೆ ಬಂದಿದ್ದಳು. ಸದ್ಯ ನಾಲ್ಕನೇ ತಪಾಸೆಣೆ ನಂತರ ವಿದ್ಯಾರ್ಥಿನಿಗೆ ಕೊರೊನಾ ಇಲ್ಲದಿರುವುದು ಪತ್ತೆಯಾಗಿದೆ.

ಕೊರೊನಾ ವೈರಸ್ ಬಂದರೆ ಏನೇನಾಗುತ್ತದೆ?: ಅಧ್ಯಯನ ವರದಿಕೊರೊನಾ ವೈರಸ್ ಬಂದರೆ ಏನೇನಾಗುತ್ತದೆ?: ಅಧ್ಯಯನ ವರದಿ

ಸದ್ಯ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದ ಇನ್ನೊಂದು ವಾರ ಅವರ ಮೇಲೆ ತೀವ್ರ ನಿಗಾ ವಹಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್ ಹೇಳಿದ್ದಾರೆ.

2,51,447 ಜನರ ತಪಾಸೆಣೆಗೆ

2,51,447 ಜನರ ತಪಾಸೆಣೆಗೆ

ಹೊರದೇಶದಿಂದ ಬರುವ ಎಲ್ಲರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಇಲ್ಲಿಯವರೆಗೆ 2,51,447 ಜನರನ್ನು ತಪಾಸೆಣೆಗೆ ಒಳಪಡಿಸಲಾಗಿದೆ. 15,991 ಜನರ ಮೇಲೆ ನಿಗಾ ಇಡಲಾಗಿದೆ. ಅವರಲ್ಲಿ 497 ಜನರಲ್ಲಿ ಕೊರೊನಾ ಲಕ್ಷಣಗಳು ಕಂಡು ಬಂದಿವೆ. 47 ಜನರನ್ನು ಆಸ್ಪತ್ರಗೆ ಸೇರಿಸಿ ತೀವ್ರ ನಿಗಾ ವಹಿಸಲಾಗಿದೆ ಎಂದು ಡಾ ಹರ್ಷವರ್ಧನ್ ತಿಳಿಸಿದ್ದಾರೆ.

ಕೊರೊನಾ; ಮತ್ತೊಂದು ಸುತ್ತಿನ ಸಭೆ

ಕೊರೊನಾ; ಮತ್ತೊಂದು ಸುತ್ತಿನ ಸಭೆ

ಜಗತ್ತಿನಾದ್ಯಂತ ತೀವ್ರ ಆತಂಕ ಸೃಷ್ಠಿಸಿರುವ ಕೊರೊನಾ ವೈರಸ್ ಖಾಯಿಲೆ ಭಾರತದಲ್ಲಿ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಎರಡನೇ ಸುತ್ತಿನ ಉನ್ನತ ಮಟ್ಟದ ಸಭೆಯನ್ನು ನಡೆಸಲಿದ್ದಾರೆ. ದೇಶವಾಸಿಗಳು ಕೊರೊನಾ ಬಗ್ಗೆ ಆತಂಕಗೊಳ್ಳುವ ಅಗತ್ಯ ಇಲ್ಲ ಎಂದು ಅವರು ಹೇಳಿದ್ದಾರೆ.

CoronaVirus:ಚೀನಾದಲ್ಲಿ ಹುಟ್ಟಿದ ಸೋಂಕು ವಿಶ್ವಕ್ಕೆ ಹರಡಿದ್ದು ಹೇಗೆ?CoronaVirus:ಚೀನಾದಲ್ಲಿ ಹುಟ್ಟಿದ ಸೋಂಕು ವಿಶ್ವಕ್ಕೆ ಹರಡಿದ್ದು ಹೇಗೆ?

1400 ಗಡಿ ದಾಟಿದ ಸಾವು

1400 ಗಡಿ ದಾಟಿದ ಸಾವು

ಚೀನಾದಲ್ಲಿ ತೀವ್ರ ತಲ್ಲಣ ಸೃಷ್ಠಿಸಿರುವ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಶುಕ್ರವಾರಕ್ಕೆ 1400 ಗಡಿ ದಾಟಿದೆ. ಸುಮಾರು 49 ಸಾವಿರ ಜನರಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಕೊರೊನಾ ಹರಡದಂತೆ ತಡೆಯುವಲ್ಲಿ ಚೀನಾ ಸರ್ಕಾರ ಚಿಂತಾಕ್ರಾಂತವಾಗಿದೆ ಎಂದು ಕೆಲ ವರದಿಗಳು ಹೇಳಿವೆ.

ಕೊರೋನಾ ವೈರಸ್: ಇಲ್ಲಿದೆ ನಿಮಗೆ ಗೊತ್ತಿರದ ಕರ್ನಾಟಕದ ಸ್ಥಿತಿಗತಿ!ಕೊರೋನಾ ವೈರಸ್: ಇಲ್ಲಿದೆ ನಿಮಗೆ ಗೊತ್ತಿರದ ಕರ್ನಾಟಕದ ಸ್ಥಿತಿಗತಿ!

ಕೊರೊನಾಕ್ಕೆ ಹೆದರಿ ಆತ್ಮಹತ್ಯೆ

ಕೊರೊನಾಕ್ಕೆ ಹೆದರಿ ಆತ್ಮಹತ್ಯೆ

ಇತ್ತೀಚೆಗೆ ಭಾರತದಲ್ಲಿ ತನಗೆ ಕೊರೊನಾ ಸೋಂಕು ತಗುಲಿದೆ ಎಂದು ಆಂಧ್ರಪ್ರದೇಶದ ರೈತನನೊಬ್ಬ ತನ್ನನ್ನೇ ತಾನು ಬಲಿ ಪಡೆದುಕೊಂಡಿದ್ದ ವಿಚಿತ್ರ ಘಟನೆ ಸೋಮವಾರ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿತ್ತು. ತಿರುಪತಿ ಬಳಿಯ ತೊಟ್ಟಂಬೇಡು ಗ್ರಾಮದ ಬಾಲಕೃಷ್ಣಯ್ಯ ಎಂಬ 54 ವರ್ಷದ ರೈತ, "ತನಗೆ ಕೊರೊನಾ ಬಂದಿದೆ. ಅದು ಬೇರೆಯವರಿಗೂ ಬರುವುದು ಬೇಡ' ಎಂದು ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ನಡೆದಿತ್ತು.

ಮಾಸ್ಕ್ ಧರಿಸಿದರೆ ಕೊರೊನಾ ವೈರಸ್ ಬರುವುದಿಲ್ಲವೇ?ಮಾಸ್ಕ್ ಧರಿಸಿದರೆ ಕೊರೊನಾ ವೈರಸ್ ಬರುವುದಿಲ್ಲವೇ?

English summary
Indias First Coronavirus (COVID19) Patient Recovering. Union Health Minister Union Minister Dr. Harsh Vardhan Confirmed It. Kerala Origin Medical Student Recovering From Deadly Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X