ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಟಲ್ ಹುಟ್ಟುಹಬ್ಬದಂದು ದೇಶದ ಅತೀವೇಗದ ರೈಲಿಗೆ ರೈಟ್ ರೈಟ್!

|
Google Oneindia Kannada News

ನವದೆಹಲಿ, ಡಿಸೆಂಬರ್ 03 : ವಿಶ್ವ ದರ್ಜೆಯ ವೇಗದ ರೈಲನ್ನು ಜನತೆಗೆ ನೀಡಬೇಕೆಂದು ಬಹುವರ್ಷಗಳ ಕನಸು ಇದೇ ವರ್ಷ ಕ್ರಿಸ್ಮಸ್ ಹಬ್ಬದಂದು ನೆರವೇರಿದರೂ ಅಚ್ಚರಿಯಿಲ್ಲ. ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸುವ 'ಟ್ರೈನ್ 18' ಅಟಲ್ ಬಿಹಾರಿ ವಾಜಪೇಯಿ ಅವರ ಜನುಮದಿನದಂದೇ ಸಂಚರಿಸುವುದು ಹೆಚ್ಚೂಕಡಿಮೆ ಖಚಿತವಾಗಿದೆ.

ಸಂಪೂರ್ಣವಾಗಿ ಸ್ವದೇಶದಲ್ಲಿ ನಿರ್ಮಾಣವಾಗಿರುವ ಇಂಜಿನ್ ರಹಿತ 'ಟ್ರೈನ್ 18' ಅನ್ನು ಭಾನುವಾರ ಪರೀಕ್ಷಿಸಲಾಯಿತು. ಕೋಟ ಜಂಕ್ಷನ್ ಮತ್ತು ಕುರ್ಲಾಸಿ ಸ್ಟೇಷನ್ ನಡುವೆ ರೈಲು ಸಂಚರಿಸಿದರೂ ಯಾವುದೇ ತಾಂತ್ರಿಕ ಅಡಚಣೆಗಳು ಕಂಡುಬಂದಿಲ್ಲ. ಗ್ರೀನ್ ಸಿಗ್ನಲ್ ದೊರೆತರೆ ಡಿಸೆಂಬರ್ 25ರಿಂದ ದೆಹಲಿ ಮತ್ತು ವಾರಣಾಸಿ ನಡುವೆ ಸಂಚರಿಸಲಿದೆ.

ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18' ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'

ಈ ರೈಲು ನವದೆಹಲಿಯಿಂದ ಬೆಳಿಗ್ಗೆ 6 ಗಂಟೆಗೆ ಹೊರಟು, ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಕ್ಷೇತ್ರವಾಗಿರುವ ವಾರಣಾಸಿಯನ್ನು ಮಧ್ಯಾಹ್ನ 2 ಗಂಟೆಗೆ ತಲುಪಲಿದೆ. ನಂತರ ಇದೇ ರೈಲು ಮಧ್ಯಾಹ್ನ 2.30ಕ್ಕೆ ವಾರಣಾಸಿಯಿಂದ ಹೊರಟು ದೇಶದ ರಾಜಧಾನಿಯನ್ನು ರಾತ್ರಿ 10.30ಕ್ಕೆ ತಲುಪಲಿದೆ.

100 ಕೋಟಿ ರುಪಾಯಿ ವೆಚ್ಚದಲ್ಲಿ ಆರಂಭಿಸಲಾಗಿರುವ ಈ ರೈಲಿನ ಪ್ರಯಾಣ ದರವೂ ಸಹಜವಾಗಿ ಹೆಚ್ಚಾಗಿರಲಿದೆ ಎಂದು ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಆದರೆ, ದರ ನಿಖರವಾಗಿ ಎಷ್ಟಿರಲಿದೆ ಎಂಬುದು ಇನ್ನೂ ದೃಢಪಡಿಸಿಲ್ಲ.

ಅಭೂತಪೂರ್ಣ ಕ್ಷಣಗಳಿಗೆ ಸಾಕ್ಷಿ

ಅಭೂತಪೂರ್ಣ ಕ್ಷಣಗಳಿಗೆ ಸಾಕ್ಷಿ

ರೈಲು ತನ್ನ ವೇಗವನ್ನು 180 ಕಿ.ಮೀ. ತಲುಪುತ್ತಿದ್ದಂತೆ ಇಲಾಖೆಯವರು ಲಡ್ಡೂ ಹಂಚಿ ಸಂತೋಷ ಪಟ್ಟರು. ಈ ರೈಲನ್ನು ಯಶಸ್ವಿಯಾಗಿ ಚಲಾಯಿಸಿದ ಲೋಕೋ ಪೈಲಟ್ ಪದಮ್ ಸಿಂಗ್ ಗುಜಾರ್ ಮತ್ತು ಅವರ ಸಹಾಯಕ ಓಂಕಾರ್ ಯಾದವ್ ಅವರಿಗೆ ಸಿಹಿ ನೀಡಲಾಯಿತು. "ಇಂಥ ಅಭೂತಪೂರ್ಣ ಕ್ಷಣಗಳಿಗೆ ಸಾಕ್ಷಿಯಾಗಿದ್ದು ನಮಗೆ ಅತೀವ ಸಂತಸ ತಂದಿದೆ" ಎಂದು ಗುಜಾರ್ ಅವರು ಹೇಳಿದ್ದಾರೆ. ನೇರವಾದ ಹಾದಿಯಲ್ಲಿ ರೈಲು ಗಂಟೆಗೆ 180 ಕಿ.ಮೀ. ತಲುಪಿದರೆ, 1 ಡಿಗ್ರಿ ತಿರುವು ಇದ್ದಾಗ ಗಂಟೆಗೆ 150 ಕಿ.ಮೀ. ಮತ್ತು 2 ಡಿಗ್ರಿ ತಿರುವು ಇದ್ದಾಗ 140ರಿಂದ 150 ಕಿ.ಮೀ. ವೇಗ ತಲುಪಿತ್ತು. ಕ್ರಮಿಸಲಾದ 113 ಕಿ.ಮೀ. ದೂರದ ಪ್ರತಿ ಹಂತದಲ್ಲಿಯೂ ಯಾವುದೇ ತೊಂದರೆ ಬಾರದಂತೆ ಎಲ್ಲ ವಿಷಯಗಳ ಬಗ್ಗೆ ಗಮನ ಇಡಲಾಗಿತ್ತು.

ಬ್ರೇಕಿಂಗ್ ವ್ಯವಸ್ಥೆಯ ಪರೀಕ್ಷೆ ನಡೆಯಬೇಕಿದೆ

ಭಾರತದ ಇತಿಹಾಸದಲ್ಲಿಯೇ ಇಷ್ಟು ವೇಗವನ್ನು ತಲುಪಿದ ರೈಲಿನಲ್ಲಿ ಪ್ರಯಾಣ ಅತ್ಯಂತ ಸುಗಮವಾಗಿತ್ತು. ತಿರುವುಗಳಿದ್ದಾಗ ಸೀಟುಗಳು ತಾನಾಗಿಯೇ ತಿರುಗುವಂಥ ವ್ಯವಸ್ಥೆಯನ್ನೂ ಇದರಲ್ಲಿ ಅಳವಡಿಸಲಾಗಿದೆ. ಹಲವಾರು ನದಿ, ಸೇತುವೆಗಳು ಮತ್ತು ತಿರುವುಗಳನ್ನು ಕ್ರಮಿಸಿ ಟ್ರೈನ್ 18 ತನ್ನ ಯಶಸ್ವಿ ಮೊದಲ ಪಯಣವನ್ನು ಮುಗಿಸಿತು. ಇನ್ನು ತುರ್ತಾಗಿ ಬ್ರೇಕ್ ಹಾಗಬೇಕಾದಂಥ ಸಂದರ್ಭದಲ್ಲಿ ಎಷ್ಟು ಅಂತರದಿಂದ ಬ್ರೇಕ್ ಹಾಕಬೇಕು ಎಂಬ ಬಗ್ಗೆ ಪರೀಕ್ಷೆ ನಡೆಯಬೇಕಿದೆ. ರೈಲ್ವೆ ಸುರಕ್ಷತಾ ಆಯುಕ್ತರಿಂದ ಗ್ರೀನ್ ಸಿಗ್ನಲ್ ಬಂದ ನಂತರ ಸಾರ್ವಜನಿಕರಿಗೆ ಈ ರೈಲು ಲಭ್ಯವಾಗಲಿದೆ. ಆದರೆ, ಆರಂಭದಲ್ಲಿ ಇದು ಗಂಟೆಗೆ 160 ಕಿ.ಮೀ. ವೇಗದಲ್ಲಿ ಮಾತ್ರ ಚಲಿಸಲಿದೆ.

ಏನಿದು ಹೈಡ್ರೋಜನ್ ಟ್ರೈನ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?ಏನಿದು ಹೈಡ್ರೋಜನ್ ಟ್ರೈನ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಚೆನ್ನೈನ ಫ್ಯಾಕ್ಟರಿಯಲ್ಲಿ ನಿರ್ಮಾಣ

ಚೆನ್ನೈನ ಫ್ಯಾಕ್ಟರಿಯಲ್ಲಿ ನಿರ್ಮಾಣ

ಈ ರೈಲು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ನಿರ್ಮಾಣವಾಗಿದೆ. ಪ್ರಯಾಣಿಕರ ಸುರಕ್ಷತೆ ಮತ್ತು ಹಿತಕರ ಅನುಭವ ನೀಡುವ ಉದ್ದೇಶದಿಂದ 100 ಕೋಟಿ ರುಪಾಯಿ ವೆಚ್ಚದ ಈ ರೈಲಿನಲ್ಲಿ ಉನ್ನತ ಮಟ್ಟದ ವೈಫೈ, ಜಿಪಿಎಸ್ ಆಧಾರಿತ ಮಾಹಿತಿ ನೀಡುವ ವ್ಯವಸ್ಥೆ, ಅತ್ಯಂತ ಸ್ವಚ್ಛ ಶೌಚಾಲಯಗಳು, ಎಲ್ಇಡಿ ಲೈಟಿಂಗ್, ಮೊಬೈಲ್ ಚಾರ್ಜಿಂಗ್ ಪಾಯಿಂಟ್, ಹವಾಮಾನಕ್ಕೆ ತಕ್ಕಂತೆ ತಾಪಮಾನ ನಿಯಂತ್ರಣಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. 16 ಕೋಚ್ ಗಳಿರುವ ಟ್ರೈನ್ 18ರಲ್ಲಿ 52 ಸೀಟುಗಳಿರುವ ಎರಡು ಎಕ್ಸಿಕ್ಯೂಟಿವ್ ಕೋಚ್ ಗಳಿರುತ್ತವೆ ಮತ್ತು ಇತರ ಕೋಚ್ ಗಳಲ್ಲಿ 78 ಸೀಟುಗಳಿರುತ್ತವೆ.

ಚಿತ್ರ ಕೃಪೆ : ManiSudhanshu

ಇಂಧನವನ್ನು ಉಳಿಸಲಿದೆ ಟ್ರೈನ್ 18

ಇಂಧನವನ್ನು ಉಳಿಸಲಿದೆ ಟ್ರೈನ್ 18

ಸ್ವದೇಶದಲ್ಲಿ ಈ ಟ್ರೈನ್ 18 ಯಶಸ್ವಿಯಾದ ನಂತರ ಇತರ ದೇಶಗಳಿಗೆ ರಫ್ತು ಮಾಡುವ ಉದ್ದೇಶವನ್ನೂ ಹೊಂದಲಾಗಿದೆ. ಇದು ಶತಾಬ್ದಿ ಎಕ್ಸ್ ಪ್ರೆಸ್ ರೈಲಿಗೆ ಬದಲಾಗಿ ಸಂಚರಿಸಲಿದೆ. ಸಂಪೂರ್ಣ ಹವಾ ನಿಯಂತ್ರಿತ ರೈಲಾಗಿರುವ ಇದು ಶೇ.15ರಿಂದ 20ರಷ್ಟು ಇಂಧನವನ್ನು ಉಳಿಸಲಿದೆ ಮತ್ತು ಕಾರ್ಬನ್ ಡೈಆಕ್ಸೈಡನ್ನೂ ಕಡಿಮೆ ಹೊರಬಿಡಲಿದೆ ಎನ್ನುವುದು ಇದರ ವಿಶೇಷ. ಹಳಿಗಳು ಮತ್ತು ಸಿಗ್ನಲ್ ವ್ಯವಸ್ಥೆ ಇದರ ವೇಗಕ್ಕೆ ಪೂರಕವಾಗಿದ್ದರೆ ರೈಲು 200 ಕಿ.ಮೀ. ಕೂಡ ತಲುಪುವ ಸಾಮರ್ಥ್ಯ ಹೊಂದಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಚಿತ್ರ ಕೃಪೆ : ManiSudhanshu

ಮೇಕ್ ಇನ್ ಇಂಡಿಯಾ ಕೂಸಾಗಿರುವ ಈ ರೈಲಿನಲ್ಲಿ ಏನೇನುಂಟು?ಮೇಕ್ ಇನ್ ಇಂಡಿಯಾ ಕೂಸಾಗಿರುವ ಈ ರೈಲಿನಲ್ಲಿ ಏನೇನುಂಟು?

English summary
India's fastest Train 18 likely to be launched on Atal Bihari Vajpayees's birthday on December 25, which happens to be Christmas day also. A successful trial run was conducted on Sunday betweet Kota and Kurlasi station. The train will run between Delhi and Varanasi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X