ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್ ನಿಯಂತ್ರಣ: N95 ಮಾಸ್ಕ್ ಹೆಚ್ಚು ಪರಿಣಾಮಕಾರಿ

|
Google Oneindia Kannada News

ನವದೆಹಲಿ, ಆಗಸ್ಟ್ 26: ಕೊರೊನಾ ಸೋಂಕು ನಿಯಂತ್ರಿಸುವಲ್ಲಿ N95 ಮಾಸ್ಕ್ ಹೆಚ್ಚು ಪರಿಣಾಮಕಾರಿ ಎಂದು ಇಸ್ರೋ ವಿಜ್ಞಾನಿಗಳು ಹೇಳಿದ್ದಾರೆ.

Recommended Video

ಕೊನೆಗೂ Africa , Polioದಿಂದ ಮುಕ್ತ | Oneindia Kannada

ಕೊರೊನಾ ವೈರಸ್ ಹರಡದಂತೆ ತಡೆಯಲು ಹಾಗೂ ತಮಗೆ ವೈರಸ್ ಸೋಂಕದಂತೆ ಜಾಗ್ರತೆ ವಹಿಸಲು ಮಾಸ್ಕ್ ಧರಿಸಲೇಬೇಕು.

ಭಾರತದಲ್ಲಿ 24 ಗಂಟೆಗಳಲ್ಲೇ ಕೊರೊನಾವೈರಸ್ ಗೆ 1059 ಜನ ಬಲಿ! ಭಾರತದಲ್ಲಿ 24 ಗಂಟೆಗಳಲ್ಲೇ ಕೊರೊನಾವೈರಸ್ ಗೆ 1059 ಜನ ಬಲಿ!

ಶೀನುವಾಗ ಅಥವಾ ಕೆಮ್ಮುವಾಗ ಬಾಯಿಯಿಂದ ಎಂಜಿಲು ಬೇರೊಬ್ಬರಿಗೆ ಸೋಕುತ್ತದೆ. ಹೀಗಾಗಿ ಮಾಸ್ಕ್ ಧರಿಸುವುದರಿಂದ ಅದನ್ನು ತಡೆಯಬಹುದು. ಇಸ್ರೋದ ಪದ್ಮನಾಭ ಪ್ರಸನ್ನ ಸಿಂಹ ಮಾತನಾಡಿ, ಬೇರೆಲ್ಲಾ ಮಾಸ್ಕ್‌ಗಳಿಗಿಂತ ಎನ್ 95 ಮಾಸ್ಕ್ ಸೋಂಕು ಹರಡುವುದನ್ನು ತಡೆಯಬಲ್ಲದು.

Indian Scientists Find N95 Masks To Be Most Effective At Stopping Of Coronavirus Spread

ಸಾಮಾನ್ಯ ಮಾಸ್ಕ್‌ಗಳಲ್ಲಿ ಎಂಜಿಲು 3 ಮೀಟರ್‌ವರೆಗೂ ಹಾರುವ ಸಾಧ್ಯತೆ ಇರುತ್ತದೆ. ಆದರೆ ಎನ್‌95 ಮಾಸ್ಕ್‌ನಲ್ಲಿ 0.1-0.25 ಮೀಟರ್‌ವರಗೆ ಮಾತ್ರ ಹಾರುತ್ತದೆ.

ರೋಗಿಗಳಿರುವ ಜಾಗವನ್ನು ಹೆಚ್ಚು ಬಚ್ಚಗೆ ಇಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸುವುದನ್ನು ಮರೆಯಬಾರದು.

ಕೊರೊನಾ ಸೋಂಕು ಹರಡುವಿಕೆಯನ್ನು ತಗ್ಗಿಸುವ ಮೂಲಕ ವ್ಯಕ್ತಿ ಪರಿಸರವನ್ನು ಎಷ್ಟು ಕಲುಷಿತಗೊಳಿಸುತ್ತಾನೆ. ಅಂತಹ ಕಲುಷಿತ ಪ್ರದೇಶಗಳನ್ನು ಹೊಂದಿರುವ ಸ್ಥಳಗಳಿಗೆ ಹೋಗುವ ಇತರೆ ಆರೋಗ್ಯವಂತ ವ್ಯಕ್ತಿಗೆ ಮಾಸ್ಕ್ ಉತ್ತಮವಾದದ್ದಾಗಿದೆ.

ಮಾಸ್ಕ್‌ಗಳು ಎಲ್ಲಾ ಕಣಗಳನ್ನು ಫಿಲ್ಟರ್ ಮಾಡದಿದ್ದರೂ ಕೂಡ ಅಂತಹ ಕಣಗಳು ಹೆಚ್ಚು ದೂರ ಹರಡುವುದನ್ನು ತಡೆಯಬಹುದು, ಏನನ್ನೂ ಮಾಡದಿರುವುದಕ್ಕಿಂತ ಇದು ಉತ್ತಮವಾಗಿದೆ.

ಕೆಮ್ಮುವಾಗ ಕೈಯನ್ನು ಬಾಯಿಗೆ ಅಡ್ಡ ಹಿಡಿಯವುದರಿಂದ ಸೋಂಕು ಹರಡುವುದಿಲ್ಲ ಎಂಬುವುದನ್ನು ಸಂಶೋಧಕರು ವಿರೋಧಿಸಿದ್ದಾರೆ.

ಸಾಧ್ಯವಾದವರು ಎನ್‌95 ಮಾಸ್ಕ್ ಬಳಸಿ, ಅದನ್ನು ಕೊಳ್ಳಲು ಸಾಧ್ಯವಾಗದಿರುವವರು ಬಟ್ಟೆಯ ಮಾಸ್ಕ್ ಕೂಡ ಬಳಸಬಹುದು, ಆದರೆ ಮಾಸ್ಕ್ ಧರಿಸಿದ ಬಳಿಕವೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮಾತ್ರ ಮರೆಯಬೇಡಿ ಎಂದು ಕಿವಿಮಾತು ಹೇಳಿದ್ದಾರೆ.

English summary
N95 masks may be the most effective at reducing the spread of the novel coronavirus, according a study by researchers, including those from the Indian Space Research Organisation (ISRO), which suggests that any mask is better than no mask at preventing COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X