• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2023ರೊಳಗೆ ಖಾಸಗಿ ರೈಲು ಪ್ರಾರಂಭಿಸಲಿರುವ ಭಾರತೀಯ ರೈಲ್ವೆ: 2027ರ ವೇಳೆಗೆ 151 ರೈಲುಗಳು

|

ನವದೆಹಲಿ, ಜುಲೈ 20: ವಿಮಾನದಂತೆ ರೈಲುಗಳು ಖಾಸಗಿ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂದು ಬಯಸುವ ಜನರಿಗೆ ಇಲ್ಲಿದೆ ಗುಡ್‌ನ್ಯೂಸ್. ಭಾರತೀಯ ರೈಲ್ವೈ ಇತಿಹಾಸದಲ್ಲಿ ಮೊದಲ ಬಾರಿಗೆ 2023ರಿಂದ ಖಾಸಗಿ ರೈಲು ಪ್ರಾರಂಭಿಸಲು ಮುಂದಾಗಿದೆ.

ಭಾರತೀಯ ರೈಲ್ವೇ ಅಧಿಕಾರಿಯೊಬ್ಬರ ಪ್ರಕರಾರ 2023ರಿಂದ 12 ಖಾಸಗಿ ರೈಲುಗಳನ್ನು ಪ್ರಾರಂಭಿಸಲಿದೆ. ನಂತರ 2027ರ ವೇಳೆಗೆ ಇನ್ನೂ 45 ಮಾರ್ಗಗಳನ್ನು ರೂಪಿಸುವ ಯೋಜನೆ ಹಾಕಿಕೊಂಡಿದ್ದು, 2027ರ ವೇಳೆಗೆ ಅಂತಹ ಎಲ್ಲಾ 151 ರೈಲುಗಳು ತಮ್ಮ ಪೂರ್ವನಿರ್ಧರಿತ ವೇಳಾಪಟ್ಟಿಯ ಪ್ರಕಾರ ಆರಂಭವಾಗಲಿದೆ.

ಖಾಸಗಿ ಕಂಪನಿಗಳಿಗೆ ಆಹ್ವಾನ

ಖಾಸಗಿ ಕಂಪನಿಗಳಿಗೆ ಆಹ್ವಾನ

ಖಾಸಗಿ ಸಂಸ್ಥೆಗಳಿಗೆ ತನ್ನ ನೆಟ್‌ವರ್ಕ್‌ನಲ್ಲಿ ಪ್ರಯಾಣಿಕರ ರೈಲುಗಳನ್ನು ಓಡಿಸಲು ಅವಕಾಶ ನೀಡುವ ಯೋಜನೆಗೆ ಔಪಚಾರಿಕ ಯೋಜನೆಗೆ ಕಿಕ್‌ ಸ್ಟಾರ್ಟ್ ನೀಡಲಾಗಿದ್ದು, ರೈಲ್ವೆ ಈ ತಿಂಗಳ ಆರಂಭದಲ್ಲಿ ದೇಶಾದ್ಯಂತ 109 ಜೋಡಿ ಮಾರ್ಗಗಳಲ್ಲಿ 151 ಆಧುನಿಕ ಪ್ರಯಾಣಿಕ ರೈಲುಗಳನ್ನು ಓಡಿಸಲು ಕಂಪನಿಗಳಿಂದ ಪ್ರಸ್ತಾಪಗಳನ್ನು ಆಹ್ವಾನಿಸಿತು. ಈ ಯೋಜನೆಯು ಖಾಸಗಿ ವಲಯದ ಹೂಡಿಕೆಗೆ ಸುಮಾರು 30,000 ಕೋಟಿ ರುಪಾಯಿಯಷ್ಟಿದೆ.

ವಂದೇ ಭಾರತ್ ಟ್ರೈನ್ಸ್‌ ಯೋಜನೆಯಿಂದ ಚೀನಾ ಕಂಪನಿಗಳನ್ನು ದೂರವಿಡಿ:CAIT

2023-24ರ ವೇಳೆಗೆ 45 ರೈಲುಗಳು

2023-24ರ ವೇಳೆಗೆ 45 ರೈಲುಗಳು

ಖಾಸಗಿ ರೈಲುಗಳ ಪ್ರಾರಂಭಕ್ಕೆ ಸಂಬಂಧಿಸಿದಂತೆ ರೈಲ್ವೆ 2022-23ರಲ್ಲಿ ಅಂತಹ 12 ರೈಲುಗಳನ್ನು ಓಡಿಸಲು ಯೋಜಿಸಿದೆ. ಇದರ ನಂತರ 2023-24ರಲ್ಲಿ 45, 2025-26ರಲ್ಲಿ 50 ಮತ್ತು ಈ ರೀತಿಯಾಗಿ ಒಟ್ಟು 151 ರೈಲುಗಳನ್ನು ಹಣಕಾಸು ವರ್ಷ 2026-27ರೊಳಗೆ ಪ್ರಾರಂಭಿಸುವುದು ರೈಲ್ವೆ ಇಲಾಖೆಯ ಯೋಜನೆಯಾಗಿದೆ.

ಟೈಮ್‌ಲೈನ್ ಪ್ರಕಾರ ಆಯ್ಕೆ

ಟೈಮ್‌ಲೈನ್ ಪ್ರಕಾರ ಆಯ್ಕೆ

ಈ ಹೊಸ ಯೋಜನೆಯ ಆರಂಭಕ್ಕೆ ಜುಲೈ 8 ರಂದು ಹೊರಡಿಸಲಾದ ಅರ್ಹತೆಗಾಗಿ ವಿನಂತಿ (ಆರ್‌ಎಫ್‌ಕ್ಯು) ನವೆಂಬರ್ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆಯಿದೆ ಮತ್ತು ಮಾರ್ಚ್ 2021 ರೊಳಗೆ ಹಣಕಾಸು ಬಿಡ್‌ಗಳನ್ನು ತೆರೆಯಲಾಗುವುದು. ಇದರ ನಂತರ 2021 ರ ಏಪ್ರಿಲ್ 31 ರೊಳಗೆ ಹರಾಜು ಕೂಗುವವರನ್ನು ಆಯ್ಕೆ ಮಾಡಲಾಗುವುದು.

ಚಬಹಾರ್ ರೈಲು ಯೋಜನೆ: ಭಾರತದೊಂದಿಗೆ ಒಪ್ಪಂದವೇ ಆಗಿರಲಿಲ್ಲ ಎಂದ ಇರಾನ್

ಮಾರ್ಚ್‌ 2021ರೊಳಗೆ ಟೆಂಡರ್ ಅಂತಿಮ

ಮಾರ್ಚ್‌ 2021ರೊಳಗೆ ಟೆಂಡರ್ ಅಂತಿಮ

ಭಾರತೀಯ ರೈಲ್ವೆ ಅಡಿಯಲ್ಲಿ ಖಾಸಗಿ ರೈಲು ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮುನ್ನ, ಮಾರ್ಚ್ 2021 ರೊಳಗೆ ಟೆಂಡರ್‌ಗಳನ್ನು ಅಂತಿಮಗೊಳಿಸಲಾಗುವುದು ಮತ್ತು ಮಾರ್ಚ್ 2023 ರಿಂದ ರೈಲುಗಳು ಕಾರ್ಯನಿರ್ವಹಿಸಲು ಪ್ರಾರಂಭಿಸುವ ಗುರಿ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ 70 ಪ್ರತಿಶತದಷ್ಟು ಖಾಸಗಿ ರೈಲುಗಳನ್ನು ತಯಾರಿಸಲಾಗುವುದು ಎಂದು ರೈಲ್ವೆ ಹೇಳಿದೆ. ಇದನ್ನು ಗಂಟೆಗೆ ಗರಿಷ್ಠ 160 ಕಿಲೋಮೀಟರ್ ವೇಗದಲ್ಲಿ ವಿನ್ಯಾಸಗೊಳಿಸಲಾಗುವುದು.

ರೈಲುಗಳ ವೇಗದಲ್ಲಿ ಗಂಟೆಗೆ 130 ಕಿ.ಮೀ ವೇಗದಲ್ಲಿ 10-15 ಪ್ರತಿಶತದಷ್ಟು ಪ್ರಯಾಣದ ಸಮಯವನ್ನು ಉಳಿಸಲಾಗುವುದು ಮತ್ತು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವಾಗ 30 ಪ್ರತಿಶತದವರೆಗೆ ಸಮಯ ಉಳಿತಾಯವಾಗಲಿದೆ ಎಂದು ಅವರು ಹೇಳಿದರು.

English summary
Indian Railways To start 12 Private Trains in 2023, followed by 45 more in the next fiscal year. which plans to roll out all 151 such train services by 2027, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X