• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರೈಲ್ವೆಯನ್ನು ಎಂದಿಗೂ ಖಾಸಗೀಕರಣಗೊಳಿಸುವುದಿಲ್ಲ; ಗೋಯಲ್

|

ನವದೆಹಲಿ, ಮಾರ್ಚ್ 16: "ಭಾರತೀಯ ರೈಲ್ವೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣಗೊಳಿಸುವುದಿಲ್ಲ. ಆದರೆ ರೈಲ್ವೆ ಇಲಾಖೆ ಪರಿಣಾಮಕಾರಿ ಕಾರ್ಯನಿರ್ವಹಣೆಗೆ ಖಾಸಗಿ ಹೂಡಿಕೆಯನ್ನು ಪ್ರೋತ್ಸಾಹಿಸಲಾಗುತ್ತದೆ" ಎಂದು ರೈಲ್ವೆ ಸಚಿವ ಪಿಯೂಶ್ ಗೋಯಲ್ ಮಂಗಳವಾರ ತಿಳಿಸಿದ್ದಾರೆ.

ಮಂಗಳವಾರ ರೈಲ್ವೆ ಇಲಾಖೆಗೆ ಅನುದಾನದ ಕುರಿತಂತೆ ಸಂಸತ್‌ನಲ್ಲಿ ಮಾಹಿತಿ ನೀಡಿದ ಅವರು, "ಭಾರತೀಯ ರೈಲ್ವೆಯನ್ನು ಎಂದಿಗೂ ಖಾಸಗೀಕರಣಗೊಳಿಸುವುದಿಲ್ಲ. ರೈಲ್ವೆ ಪ್ರತಿಯೊಬ್ಬ ಭಾರತೀಯನ ಸ್ವತ್ತು. ಅದು ಹಾಗೇ ಉಳಿಯುತ್ತದೆ. ಭಾರತ ಸರ್ಕಾರದ ಅಧೀನದಲ್ಲಿಯೇ ಇರುತ್ತದೆ" ಎಂದು ಹೇಳಿದರು.

ಬೆಂಗಳೂರು ಸಬ್‌ಅರ್ಬನ್ ರೈಲ್ವೆ ಯೋಜನೆಗೆ ಮತ್ತಷ್ಟು ವೇಗ: ಗೋಯಲ್ಬೆಂಗಳೂರು ಸಬ್‌ಅರ್ಬನ್ ರೈಲ್ವೆ ಯೋಜನೆಗೆ ಮತ್ತಷ್ಟು ವೇಗ: ಗೋಯಲ್

ಈ ಎರಡು ವರ್ಷಗಳಲ್ಲಿ ರೈಲ್ವೆ ಅಪಘಾತದಿಂದ ಯಾವುದೇ ಪ್ರಯಾಣಿಕ ಸಾವನ್ನಪ್ಪಿಲ್ಲ. ಪ್ರಯಾಣಿಕರ ಸುರಕ್ಷತೆಗೆ ಇಲಾಖೆ ಬದ್ಧವಾಗಿದೆ ಎಂದು ತಿಳಿಸಿದರು. ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಮಾತ್ರ ದೇಶದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿ ಸಾಧ್ಯ ಎಂದರು.

2019-20ನೇ ಹಣಕಾಸು ವರ್ಷದಲ್ಲಿ ರೈಲ್ವೆಗೆ 1.5 ಕೋಟಿ ರೂ ಅನುದಾನ ಒದಗಿಸಲಾಗಿತ್ತು. ಪ್ರಧಾನಿ ಮೋದಿ ನೇತೃತ್ವದಲ್ಲಿ 2021-22ನೇ ಹಣಕಾಸು ವರ್ಷದಲ್ಲಿ 2.15 ಲಕ್ಷ ಕೋಟಿ ರೂ ಅನುದಾನ ನೀಡಲಾಗಿದೆ" ಎಂದು ಹೇಳಿದರು.

English summary
"Indian Railways will never be privatised. It is a property of every Indian and will remain so," said railway minister Piyush Goyal in lok sabha
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X