ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆ ಸುರಕ್ಷತೆಗೆ ಹೊಸ ಆಪ್ ಜಾರಿಗೆ ತಂದ ಭಾರತೀಯ ರೈಲ್ವೆ

By Vanitha
|
Google Oneindia Kannada News

ನವದೆಹಲಿ, ಆಗಸ್ಟ್, 22 : ಮಹಿಳೆಯರ ಸುರಕ್ಷತೆಗಾಗಿ ಹಲವಾರು ವಿಭಿನ್ನ, ವಿಶೇಷ ಪ್ರಯತ್ನಗಳು ನಡೆಯುತ್ತಲೇ ಇದೆ. ಇದೀಗ ರೈಲ್ವೆ ಇಲಾಖೆಯು ಮಹಿಳೆ ಸುರಕ್ಷತೆಗೆ ಹೊಸ ಆಪ್ ಜಾರಿಗೆ ತಂದು ಮುನ್ನುಡಿ ಬರೆಯಲು ಹೊರಟಿದೆ.

ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಪೂರ್ವ ರೈಲ್ವೆ ಇಲಾಖೆ ಜಾರಿಗೆ ತಂದ ಆರ್-ಮಿತ್ರ (Railway Mobile Instant Tracking Response and Assistance) ಎಂಬ ಹೊಸ ಬಗೆಯ ಮೊಬೈಲ್ ಆಪ್‌ನ್ನು ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಶುಕ್ರವಾರ ಉದ್ಘಾಟಿಸಿದರು.[ರೈಲ್ವೆ ಟಿಕೆಟ್ ಕನ್ ಫರ್ಮ್ ಆಗಿಲ್ಲವೇ? ಚಿಂತೆ ಬಿಡಿ]

Indian Railways brings R-Mitra app for women’s safety

ಪ್ರತಿನಿತ್ಯ ಸುಮಾರು 2.7 ರಿಂದ 3 ಕೋಟಿ ಜನರು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ದಿನಗಳೆದಂತೆ ರೈಲ್ವೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದಂತೆ ವಿವಿಧ ರೀತಿಯ ಅಪರಾಧಗಳು ಘಟಿಸುತ್ತಿದೆ. ಇದನ್ನು ತಡೆಗಟ್ಟಲು ಈ ನವ್ಯ ಬಗೆಯ ಆಪ್ ಜಾರಿಗೆ ತರಲಾಗಿದೆ.

ಮಹಿಳೆಯರ ಮೇಲೆ ಇತ್ತೀಚಿನ ದಿನಗಳಲ್ಲಿ ಉದ್ಯೋಗ ಸ್ಥಳ, ಮನೆ, ಪ್ರಯಾಣದ ಸಮಯದಲ್ಲಿ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿದೆ. ಅದರಲ್ಲೂ ಮುಖ್ಯವಾಗಿ ರೈಲುಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟುವುದು ದೊಡ್ಡ ಸವಾಲಾಗಿದೆ. ಹಾಗಾಗಿ ಈ ಆಪ್ ಜಾರಿಗೆ ತರಲಾಗಿದೆ ಎಂದು ಸುರೇಶ್ ಪ್ರಭು ತಿಳಿಸಿದ್ದಾರೆ.

ಆಪ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಆರ್- ಮಿತ್ರ ಆಪ್ ನ್ನು ಡೌನ್‌ಲೋಡ್‌ ಮಾಡಿಕೊಂಡ ಮಹಿಳೆ ರೈಲಿನಲ್ಲಿ ತೊಂದರೆಗೆ ಸಿಲುಕಿದರೆ 56161 ಸಂಖ್ಯೆಗೆ ಒಂದು ಸಂದೇಶ ಕಳುಹಿಸಿದರೆ ಸಾಕು. ಇದು ಅವರಿರುವ ಸ್ಥಳದ ಸಂಪೂರ್ಣ ಮಾಹಿತಿ ನೇರವಾಗಿ ಜಿಪಿಎಸ್ ಮತ್ತು ಜಿಪಿಆರ್ ಎಸ್‌ ಮೂಲಕ ಪೊಲೀಸ್ ನಿಯಂತ್ರಣ ಕೊಠಡಿಗೆ ರವಾನಿಸುತ್ತದೆ. ಇದರಿಂದ ಪೊಲೀಸರು ಕಾರ್ಯಪ್ರವೃತ್ತರಾಗಿ ತಕ್ಷಣವೇ ಅಪರಾಧಿಯನ್ನು ಬಂಧಿಸಲು ಸಾಧ್ಯವಾಗುತ್ತದೆ.

ಈ ಹೊಸ ಆಪ್, ಆನ್ ಲೈನ್ ಹಾಗೂ ಆಫ್ ಲೈನ್ ಎರಡೂ ರೀತಿಯಲ್ಲೂ ಕಾರ್ಯ ನಿರ್ವಹಿಸಲಿದ್ದು, ಮಹಿಳೆಯನ್ನು ತೊಂದರೆಯಿಂದ ತಪ್ಪಿಸಲು ಇದು ನೆರವಾಗಲಿದೆ.

English summary
Railway Minister Suresh Prabhu on Friday inaugurated a mobile-based application system introduced by Eastern Railway, R-Mitra,to ensure women's safety. The app works both online and offline in SMS mode by using the helpline number 56161.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X