ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಯ್ದಿರಿಸದ ರೈಲ್ವೆ ಟಿಕೆಟ್ ಮೊದಲೇ ಪಡೆಯಲು ಹೊಸ ಆಪ್!

By Vanitha
|
Google Oneindia Kannada News

ನವದೆಹಲಿ, ಅಕ್ಟೋಬರ್, 10 : ರೈಲ್ವೆ ಟಿಕೆಟ್ ಪಡೆಯಲು ಸಾಲಿನಲ್ಲಿ ನಿಂತು ಹೈರಾಣರಾಗಿದ್ದೀರಾ? ರೈಲ್ವೆ ಪ್ರಯಾಣಿಕರು ಇನ್ನು ಮಂದೆ ಫ್ಲಾಟ್ ಫಾರಂ ಹಾಗೂ ಕಾಯ್ದಿರಿಸದ ಪ್ರಯಾಣ ಟಿಕೆಟ್ ಗಳನ್ನು ಮೊಬೈಲ್ ಮೂಲಕ ಖರೀದಿಸಲು ಸಹಾಯಕವಾಗುವ ಆಪ್ ನ್ನು ಭಾರತೀಯ ರೈಲ್ವೆ ಇಲಾಖೆ ಜಾರಿಗೆ ತಂದಿದೆ.

ಭಾರತೀಯ ರೈಲ್ವೆ ಇಲಾಖೆ ಕಾಗದ ರಹಿತ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶದಿಂದ ಶುಕ್ರವಾರ ಅಕ್ಟೋಬರ್ 9ರ ಶುಕ್ರವಾರದಂದು ಹೊಸ ಆಪ್ ಬಿಡುಗಡೆ ಮಾಡಿದೆ. ಈ ಆಪ್ ಸಹಾಯದಿಂದ ಫ್ಲಾಟ್ ಫಾರಂ ಮತ್ತು ಕಾಯ್ದಿರಿಸದ ಟಿಕೆಟ್ ಗಳನ್ನು ಮುಂಚಿತವಾಗಿಯೇ ಪಡೆದುಕೊಳ್ಳಬಹುದು.[ರೈಲ್ವೆ ಇ-ಟಿಕೆಟ್ ಬುಕಿಂಗ್ ಗೆ 15 ನಿಮಿಷ ಹೆಚ್ಚುವರಿ ಅವಕಾಶ]

Indian Railway launched unreserved and platform tickets from home using app

ಮುಂಬೈನ ಉಪನಗರ ರೈಲುಗಳ ಪ್ರಯಾಣಿಕರನ್ನು ಕೇಂದ್ರಿಕರಿಸಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಇದರಿಂದ ಸಾಕಷ್ಟು ಸಮಯ ಉಳಿತಾಯವಾಗಲಿದ್ದು, ಸ್ಥಳೀಯ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕಾಗದ ರಹಿತ ಪ್ಲಾಟ್ ಫಾರಂ ಟಿಕೆಟ್ ವ್ಯವಸ್ಥೆ ನವದೆಹಲಿ, ನಿಜಾಮುದ್ದೀನ್ ನಿಲ್ದಾಣಗಳಲ್ಲಿ ಜಾರಿಯಲ್ಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾ ಅಭಿಯಾನವನ್ನು ಮುಖ್ಯ ಗುರಿಯಾಗಿರಿಸಿಕೊಂಡು ರೈಲ್ವೆ ಇಲಾಖೆಯಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವರಾದ ಸುರೇಶ್ ಪ್ರಭು ಹೇಳಿದ್ದಾರೆ.

English summary
Indian Railway launched unreserved and platform tickets from home using app on Friday, October 10th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X