ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IM ಭಯೋತ್ಪಾದನೆ ಭೀತಿ ಎದುರಿಗೇ ಇದೆ - ಗುಪ್ತಚರ

By Srinath
|
Google Oneindia Kannada News

Indian Mujahideen terror threat undiminished Intelligence Bureau chief Asif Ibrahim
ನವದೆಹಲಿ, ನ. 21: ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕರನ್ನು ಹೆಡೆಮುರಿಗೆ ಕಟ್ಟಿ ತಂದಿದ್ದರೂ ಭಾರತಕ್ಕೆ ಭಯೋತ್ಪಾದನೆ ತಪ್ಪಿದ್ದಲ್ಲ. ಯಾವುದೇ ಕ್ಷಣ ಭಯೋತ್ಪಾದನೆ ದಾಳಿ ನಡೆಯಬಹುದು ಎಂದು ದೇಶದ ಗುಪ್ತಚರ ಮುಖ್ಯಸ್ಥರೇ ಖುದ್ದಾಗಿ ತಿಳಿಸಿದ್ದಾರೆ. ಅದೂ ಎಲ್ಲಿ ಅಂದರೆ ದೇಶದ ಆಯಾ ರಾಜ್ಯಗಳ ಪೊಲೀಸ್ ಮುಖ್ಯಸ್ಥರ ಸಮ್ಮೇಳನದಲ್ಲಿ. ಸೋ, ಅಲ್ಲಿ terror threat ಗಂಭೀರವಾಗಿಯೇ ಇದೆ ಎನ್ನಬಹುದು.

ಈ Indian Mujahideen ಸಂಘಟನೆ ದೇಶೀಯವಾಗಿಯೇ ಅಸ್ತಿತ್ವ/ ಚಾಲನೆಗೆ ಬಂದಿದೆಯಾದರೂ ಅದರ ಸೂತ್ರಧಾರರು ಖಂಡಿತ ಪಾಕಿಸ್ತಾನದಲ್ಲಿದ್ದಾರೆ. ಭಾರತದ ವಿರುದ್ಧ ಪಾಕಿಸ್ತಾನವು ಇಂತಹ ಉಗ್ರರನ್ನು ನಿರಂತರವಾಗಿ ಪೋಷಿಸುತ್ತಾ ಬಂದಿದೆ. ಪಾಟ್ನಾ ಬಾಂಬ್ ಸ್ಫೋಟ ಪ್ರಕರಣವನ್ನು ಸೂಕ್ಷ್ಮವಾಗಿ ಅರ್ಥೈಸಿದಾಗ IM ಭಯೋತ್ಪಾದನೆ ಭೀತಿ ನಿಂತಿಲ್ಲ ಎಂಬುದು ಶೃತಪಡುತ್ತದೆ ಎಂದು Intelligence Bureau ಮುಖ್ಯಸ್ಥ ಅಸೀಫ್ ಇಬ್ರಾಹಿಂ ಅವರು ಇಂದು ಬೆಳಗ್ಗೆ ತಿಳಿಸಿದ್ದಾರೆ.

ಈ IMಗಳು ಲಷ್ಕರೆ ತೊಯ್ಬಾ (LeT) ಜತೆಗೂಡಿ, ತನ್ನ ಶಕ್ತಿಸಾಮರ್ಥ್ಯಗಳನ್ನು ಹೆಚ್ಚಿಸಿಕೊಂಡಿದೆ. ದಿಢೀರನೆ ಯಾವಾಗ ಬೇಕಾದರೂ ಈ IMಗಳು ಭಯೋತ್ಪಾದನೆ ಕೃತ್ಯಗಳನ್ನು ಎಸಗಬಹುದು. ಆದ್ದರಿಂದ ರಾಜ್ಯದ ಪೊಲೀಸ್ ಪಡೆಯ ಸಾರಥ್ಯ ವಹಿಸಿರುವ ನಿಮ್ಮಂಥ ಅಧಿಕಾರಿಗಳು ಕಟ್ಟೆಚ್ಚರದಿಂದ ಇರಬೇಕು ಎಂದು IB ಚೀಫ್ ಅಸೀಫ್ ಇಬ್ರಾಹಿಂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ IMಗಳನ್ನು ಸದೆಬಡಿಯಲು ಅವರ ಬಂಧನವಾದಾಗ/ ಅವರಿಂದ ದೊರೆಯುವ ಸುಳಿವುಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಅವುಗಳನ್ನು ಬೇರು ಸಮೇತ ನಾಶಪಡಿಸಬೇಕು. ಹಾಗೇ ಮಾಡಿದರೇನೇ ಇವರ ನಿರ್ಮೂಲನೆಯಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ನಾನಾ ರಾಜ್ಯಗಳ ಪೊಲೀಸ್ ಮುಖ್ಯಸ್ಥರ ಮೂರು ದಿನಗಳ ಸಮ್ಮೇಳನ ಇಂದು ಬೆಳಗ್ಗೆ ಆರಂಭವಾಗಿದೆ.

English summary
Indian Mujahideen terror threat undiminished Intelligence Bureau chief Asif Ibrahim. Terror challenge from Indian Mujahideen remains undiminished despite the arrest of its top leader Yasin Bhatkal and his aide Asadullah Akhtar alias Haddi in August this year, Intelligence Bureau chief Asif Ibrahim warned. "Though a sizeable component of IM was home-grown, its mentors were very much based in Pakistan," the IB chief said addressing a conference of state DGPs/IGPs here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X