ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಖಲೆಯ ಸಂಖ್ಯೆಯಲ್ಲಿ ಫೇಸ್‌ಬುಕ್ ಬಳಕೆದಾರರ ಡೇಟಾ ಕೇಳಿದ ಭಾರತ ಸರ್ಕಾರ

|
Google Oneindia Kannada News

ನವದೆಹಲಿ, ನವೆಂಬರ್ 20: ಫೇಸ್‌ಬುಕ್‌ನಿಂದ ದಾಖಲೆಯ ಸಂಖ್ಯೆಯಲ್ಲಿ ಬಳಕೆದಾರರ ಮಾಹಿತಿಯನ್ನು ಭಾರತ ಸರ್ಕಾರ ಕೇಳಿದೆ ಎಂದು ಸಾಮಾಜಿಕ ಜಾಲತಾಣ ದಿಗ್ಗಜ ಶುಕ್ರವಾರ ಹೇಳಿದೆ.

2020ರ ಮೊದಲ ಆರು ತಿಂಗಳಿನಲ್ಲಿ ಭಾರತ ಸರ್ಕಾರವು ಅತಿ ಹೆಚ್ಚು ಬಳಕೆದಾರರ ಡೇಟಾ ನೀಡುವಂತೆ ಕೇಳಿಕೊಂಡಿದೆ. ಜನವರಿಯಿಂದ- ಜೂನ್‌ ತಿಂಗಳ ಅವಧಿಯಲ್ಲಿ ಒಟ್ಟಾರೆ 35,560 ಬಳಕೆದಾರರ ಡೇಟಾ ವಿನಂತಿಗಳು ಭಾರತ ಸರ್ಕಾರದಿಂದ ಬಂದಿದ್ದು, ಇದು 2019ರ ದ್ವಿತಿಯಾರ್ಧದಲ್ಲಿ 26,698 ಬಳಕೆದಾರರ ಮಾಹಿತಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ.

ಫೇಸ್‌ಬುಕ್ ಬಳಕೆಯಲ್ಲಿನ ಭಾರತದ ಅನುಭವ ಅಮೆರಿಕ ಚುನಾವಣೆಗೆ ನೆರವು: ಜುಕರ್‌ಬರ್ಗ್ಫೇಸ್‌ಬುಕ್ ಬಳಕೆಯಲ್ಲಿನ ಭಾರತದ ಅನುಭವ ಅಮೆರಿಕ ಚುನಾವಣೆಗೆ ನೆರವು: ಜುಕರ್‌ಬರ್ಗ್

ಈಗಾಗಲೇ ಸರ್ಕಾರ ಕೇಳಿರುವ ಒಟ್ಟಾರೆ ಬಳಕೆದಾರರ ಮಾಹಿತಿಗಳಲ್ಲಿ 2,186 ತುರ್ತು ವಿನಂತಿ ಮತ್ತು 33,374 ಕಾನೂನು ಪ್ರಕ್ರಿಯೆಗಳಿಗೆ ಸಂಬಂಧಿಸಿವೆ. ಫೇಸ್‌ಬುಕ್ ಸ್ವೀಕರಿಸಿದ ಒಟ್ಟಾರೆ ವಿನಂತಿಗಳಲ್ಲಿ ಈಗಾಗಲೇ ಶೇಕಡಾ 50ರಷ್ಟು ಡೇಟಾವನ್ನು ಸರ್ಕಾರಕ್ಕೆ ಒದಗಿಸಿದೆ.

Indian Government Sought Record User Data From Facebook In First half of 2020

ಔಪಚಾರಿಕವಾಗಿ ಕಾನೂನು ಪ್ರಕ್ರಿಯೆಗೆ, ಸರ್ಕಾರ ಬಳಕೆದಾರರ ಮಾಹಿತಿಯನ್ನು ಕೋರುವುದರಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಈ ಅವಧಿಗಳಲ್ಲಿ 4,100 ಖಾತೆಗಳನ್ನು ಸರ್ಕಾರವು ಸಂರಕ್ಷಿಸಲು ಕೇಳಿದ್ದು, ಇದು ಹಿಂದಿನ 2,500ಕ್ಕಿಂತ ಹೆಚ್ಚು ಖಾತೆಯ ವಿವರಣೆ ಪಡೆಯುವ ವಿನಂತಿಯಾಗಿದೆ.

"ಬಳಕೆದಾರರ ಮಾಹಿತಿ ನೀಡಲು ನಾವು ಸರ್ಕಾರದ ವಿನಂತಿಗಳನ್ನು ಅನುಸರಿಸುತ್ತೇವೆ, ಅಲ್ಲಿಯ ನೆಲದ ಕಾನೂನು ಮೇಲೆ ನಮಗೆ ನಂಬಿಕೆಯಿದೆ. ಹೆಚ್ಚುವರಿಯಾಗಿ, ವಿನಂತಿಯು ಬಂದರೂ ಮಾನವ ಹಕ್ಕುಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿನ ಮಾನದಂಡಗಳಿಗೆ ಅನುಗುಣವಾಗಿದೆಯೇ ಡೇಟಾವನ್ನು ನೀಡಲು ನಾವು ನಿರ್ಣಯಿಸುತ್ತೇವೆ. ಇದರಲ್ಲಿ ಸರಿಯಾದ ಪ್ರಕ್ರಿಯೆ, ಗೌಪ್ಯತೆ , ಮುಕ್ತ ಅಭಿವ್ಯಕ್ತಿ ಮತ್ತು ಕಾನೂನಿನ ನಿಯಮ ಒಳಗೊಂಡಿದೆ "ಎಂದು ಬ್ಲಾಗ್ ಪೋಸ್ಟ್‌ನಲ್ಲಿ ಫೇಸ್‌ಬುಕ್‌ನ ಉಪಾಧ್ಯಕ್ಷ ಮತ್ತು ಉಪ ಸಾಮಾನ್ಯ ಸಲಹೆಗಾರ ಕ್ರಿಸ್ ಸೋಂಡರ್ಬಿ ಹೇಳಿದ್ದಾರೆ.

ಜಾಗತಿಕವಾಗಿ ಈ ವರ್ಷ ಜನವರಿಯಿಂದ ಜೂನ್‌ವರೆಗೆ ಬಳಕೆದಾರರ ಡೇಟಾದ ವಿನಂತಿಯು ಶೇಕಡಾ 23ರಷ್ಟು ಏರಿಕೆಯಾಗಿದ್ದು 1,73,592ಕ್ಕೆ ತಲುಪಿದೆ. ಇದರಲ್ಲಿ ಹೆಚ್ಚಿನದು ಅಮೆರಿಕಾದಿಂದ ಬಂದಿದೆ. ನಂತರದಲ್ಲಿ ಭಾರತ, ಜರ್ಮನಿ , ಫ್ರಾನ್ಸ್‌ ಮತ್ತು ಇಂಗ್ಲೆಂಡ್ ಸೇರಿದೆ.

ಅಮೆರಿಕಾ ದೇಶವು ಫೇಸ್‌ಬುಕ್‌ನಿಂದ 61,528 ಬಳಕೆದಾರರ ಡೇಟಾವನ್ನು ಸ್ವೀಕರಿಸಿದೆ. ಇದು 2019ರ ದ್ವಿತಿಯಾರ್ಧಕ್ಕೆ ಹೋಲಿಸಿದರೆ ಶೇಕಡಾ 20ರಷ್ಟು ಹೆಚ್ಚಾಗಿದೆ.

English summary
Social media giant Facebook on Friday said the Indian government sent the highest ever user data requests, second only to US, during the first six months of 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X