ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಅರಸ ಹಾಗೂ ಮೆಕ್ಕಾ ಬಗ್ಗೆ ಅವಹೇಳನ: ಭಾರತೀಯನ ಬಂಧನ

|
Google Oneindia Kannada News

ದೆಹಲಿ, ಡಿಸೆಂಬರ್.22: ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ವಾಕ್ ಸ್ವಾತಂತ್ರ್ಯ, ಸರ್ಕಾರದ ವಿರುದ್ಧ ಪ್ರತಿಭಟನೆ ಹೋರಾಟ ಧಿಕ್ಕಾರ ಕೂಗುವ ಹಕ್ಕನ್ನು ಸಂವಿಧಾನವೇ ನೀಡಿದೆ. ಇದು ಪ್ರಜೆಗಳ ಪಾಲಿನ ಹಕ್ಕು. ಆದರೆ, ಈ ವರ್ತನೆಯನ್ನು ಬೇರೆ ದೇಶಗಳಲ್ಲಿ ತೋರಿಸಿದರಾ ಆಗುತ್ತದೆಯೇ?
ಹೀಗೊಂದು ಪ್ರಶ್ನೆಯನ್ನು ಹುಟ್ಟು ಹಾಕಿದ್ದು ಸೌದಿ ಅರೇಬಿಯಾದಲ್ಲಿ ನಡೆದಿರುವ ಘಟನೆ. ಫೈ ಝ್ ಎಂಬ ವ್ಯಕ್ತಿ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ದುಡಿಯಲು ಬೇರೆ ದೇಶಕ್ಕೆ ಹೋಗುವವರಿಗೆ ಆ ಮೂಲಕ ಸಂದೇಶವೊಂದನ್ನು ನೀಡಿದ್ದಾರೆ.

ಸೌದಿಯಲ್ಲಿ ಮೃತಪಟ್ಟ ಜಾನ್ ಶವ 9 ತಿಂಗಳ ಬಳಿಕ ಮೂಲ್ಕಿಗೆ ಬಂತು!ಸೌದಿಯಲ್ಲಿ ಮೃತಪಟ್ಟ ಜಾನ್ ಶವ 9 ತಿಂಗಳ ಬಳಿಕ ಮೂಲ್ಕಿಗೆ ಬಂತು!

ಹೌದು, ಸೌದಿ ಅರೇಬಿಯಾದಲ್ಲಿ ದುಡಿಯಲು ತೆರಳಿದ್ದ ಹರೀಶ್ ಬಂಗೇರ ಎಂಬ ವ್ಯಕ್ತಿ ತನ್ನ ವೈಯಕ್ತಿಕ ಫೇಸ್ ಬುಕ್ ಖಾತೆಯಲ್ಲಿ ಸೌದಿ ಅರಸ ಹಾಗೂ ಮೆಕ್ಕಾದ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದರು ಎಂಬ ಕಾರಣಕ್ಕೆ ಅಲ್ಲಿನ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಅವಹೇಳನಕಾರಿ ಪೋಸ್ಟ್ ಹಾಕದಂತೆ ಫೈ ಝ್ ಮನವಿ

ಅವಹೇಳನಕಾರಿ ಪೋಸ್ಟ್ ಹಾಕದಂತೆ ಫೈ ಝ್ ಮನವಿ

ಪ್ರಜಾಪ್ರಭುತ್ವವಲ್ಲದ ಸೌದಿ ಅರೇಬಿಯಾದಲ್ಲಿ ರಾಜನ ವಿರುದ್ಧ ಯಾವ ಟೀಕೆಗಳನ್ನು ಸಹಿಸಲಾಗದು. ಬಾಬ್ರಿ ಒಡೆದು ಹಾಕಿದಂತೆ ಮೆಕ್ಕಾ ಮಸೀದಿಯನ್ನು ಒಡೆಯಲು ಸಾಧ್ಯವಿಲ್ಲ. ದುಡಿಯಲು ದೂರದ ದೇಶಕ್ಕೆ ಹೋಗುವ ಸಹೋದರರು ಅಲ್ಲಿನ ಕಾನೂನನ್ನು ಅರಿತುಕೊಳ್ಳಿ, ಉನ್ಮಾದಕ್ಕೊಳಗಾಗಿ ಅವಹೇಳನಕಾರಿ ಪೋಸ್ಟ್ ಹಾಕಬೇಡಿ. ದುಡಿಯಲು ಹೋದ ಮೇಲೆ ದುಡಿದು ಬನ್ನಿ, ಜೀವ ದೊಡ್ಡದು, ಮನೆಯಲ್ಲಿ ನಿಮಗಾಗಿ ಕಾಯುವ ಕುಟುಂಬಸ್ಥರಿದ್ದಾರೆ. ಅಲ್ಲಿ ನಿಮಗಾಗಿ ಪ್ರತಿಭಟನೆಗೆ ನಿಲ್ಲಲು "ಬುದ್ಧಿಜೀವಿಗಳಿಲ್ಲ" ಎಂದು ಪೋಸ್ಟ್ ಮಾಡಿದ್ದಾರೆ.

ಮೋದಿ ವಿತ್ ಅಸ್ ಎಂಬ ಅತಿಯಾದ ನಂಬಿಕೆ ಏಕೆ?

ಮೋದಿ ವಿತ್ ಅಸ್ ಎಂಬ ಅತಿಯಾದ ನಂಬಿಕೆ ಏಕೆ?

"ಮೋದಿ ವಿಥ್ ಅಸ್" ಎಂದು ಮುಗ್ಧವಾಗಿಯೇ ನಂಬುವ ಇಂತಹ ಹುಡುಗರು ಅಪಾಯವನ್ನು ಮೈ ಮೇಲೆ ಎಳೆದು ಹಾಕಿಕೊಳ್ಳುತ್ತಿದ್ದಾರೆ. ನೀವೊಂದು ಅರ್ಥ ಮಾಡ್ಕೊಳ್ಳಿ ಜಗತ್ತು ಪೋಸ್ಟ್‌ಕಾರ್ಡ್ ಹೇಳುವಂತೆ ಮೋದಿಗೆ ಸಲಾಮ್ ಹೊಡೆಯುತ್ತಿಲ್ಲ. ಮೋದಿಯೇ ಸಿಕ್ಕಸಿಕ್ಕ ಕಡೆ ಸಲಾಮ್ ಹೊಡೆಯುತ್ತಿದ್ದಾರೆ ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

"ಭಾರತೀಯರೇ ಭಾರತೀಯನ ನೆರವಿಗೆ ಬನ್ನಿ"

ಸೌದಿಯಲ್ಲಿರುವ ಗೆಳೆಯರಲ್ಲಿ ಒಂದು ಮನವಿ. ಸಾಧ್ಯವಾದರೆ ಈ ಹುಡುಗನ ತಪ್ಪನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಸಹಾಯ ಮಾಡಿ, ಮನುಷ್ಯ ಪ್ರೇಮ ದೊಡ್ಡದು. ಕ್ಷಮೆ ಪ್ರವಾದಿ ಮಹಮ್ಮದರ ಗುಣ ನೆನಪಿನಲ್ಲಿಡಿ. ದುಡಿಯುವ ವರ್ಗವನ್ನು ಧರ್ಮದ ಅಫೀಮಿನಲ್ಲಿ ಮುಳುಗಿಸುವ ಸಿದ್ಧಾಂತದಲ್ಲಿ ನಮ್ಮ ವಿರೋಧವಿರಲಿ. ನಮ್ಮ ಕ್ಷಮೆ ಆ ಸಹೋದರನಲ್ಲಿ ಬದಲಾವಣೆ ಮಾಡಬಲ್ಲದು ಎಂದು ಫೈ ಝ್ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

ತಪ್ಪನ್ನು ಮನ್ನಿಸಿ ಎಂದು ಸೌದಿ ಸರ್ಕಾರಕ್ಕೆ ಮನವಿ

ತಪ್ಪನ್ನು ಮನ್ನಿಸಿ ಎಂದು ಸೌದಿ ಸರ್ಕಾರಕ್ಕೆ ಮನವಿ

ಸೌದಿ ಅರೇಬಿಯಾ ಅರಸ ಹಾಗೂ ಮೆಕ್ಕಾ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಹರೀಶ್ ಬಂಗೇರ ಎಂಬ ಯುವಕನಿಗೆ ಮರಣದಂಡನೆ ಶಿಕ್ಷೆಯಾಗುವ ಸಾಧ್ಯತೆಗಳಿವೆ. ಸೌದಿ ಸರ್ಕಾರ ಈ ಹುಡಗನ ತಪ್ಪನ್ನು ಮನ್ನಿಗೆ ವಾಪಸ್ ಊರಿಗೆ ಕಳುಹಿಸಲೆಂದು ಆಶಿಸೋಣ ಅಂತಾ ಫೈ ಝ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.

English summary
Indian Man Arrested In Soudi Arebia For Derogatory Post Against King And Mekka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X