ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದ್ಯದಲ್ಲೇ ಬದಲಾಗಲಿದೆ ಭಾರತೀಯ ಸೇನೆಯ ಯೂನಿಫಾರ್ಮ್

|
Google Oneindia Kannada News

ನವದೆಹಲಿ, ಮೇ 14: ಭಾರತೀಯ ಸೇನೆಯ ಯೂನಿಫಾರ್ಮ್ ಸದ್ಯದಲ್ಲೇ ಬದಲಾಗಲಿದೆ ಎಂದು ಸೇನಾ ಮೂಲಗಳು ತಿಳಿಸಿವೆ. ಆಯಾ ಪ್ರದೇಶದ ಹವಾಮಾನಕ್ಕೆ ಅನುಗುಣವಾಗಿ, ಅನುಕೂಲವಾಗುವಂಥ ಯೂನಿಫಾರ್ಮ್ ಅನ್ನು ಸೇನೆಗೆ ನೀಡಲು ತಯಾರಿ ನಡೆದಿದೆ.

ಈಗ ಸೈನಿಕರು ತೊಡುತ್ತಿರುವ ಯೂನಿಫಾರ್ಮ್ ಸೆಖೆಗೆ ಹೊಂದುವುದಿಲ್ಲ. ತೀರಾ ಬಿಸಿನ ವಾತಾವರಣವಿದ್ದರೆ ಸಿಕರು ಪಡುವ ಪರಡಿಪಾಟಲು ಅಷ್ಟಿಷ್ಟಲ್ಲ. ಚಳಿಗೆ ಮಾತ್ರವೇ ಅನುಕೂಲವಾಗುವಂಥ ಟೆರಿಕೋಟ್ ಫೈಬರ್ ನ ಈ ಯೂನಿಫಾರ್ಮ್ ಅನ್ನು ಬದಲಿಸಿ ಆಯಾ ಪ್ರದೇಶದ ಹವಾಗುಣಕ್ಕೆ ಹೊಂದಿಕೆಯಾಗುವಂಥ ಯೂನಿಫಾರ್ಮ್ ನೀಡಲಾಗುತ್ತಿದೆ.

SSB ನೇಮಕಾತಿ 2019: 290 ಕಾನ್ಸ್ ಟೇಬಲ್ ಹುದ್ದೆಗಳಿವೆSSB ನೇಮಕಾತಿ 2019: 290 ಕಾನ್ಸ್ ಟೇಬಲ್ ಹುದ್ದೆಗಳಿವೆ

Indian Army uniform may change soon

ಮೊದಲಿಗೆ ಟೆರಿಕೋಟ್ ಫೈಬರ್ ಬದಲಿಗೆ ಕಾಟನ್ ಯೂನಿಫಾರ್ಮ್ ಅನ್ನು ಸೇನೆಗೆ ನೀಡಲಾಗಿತ್ತು. ಆದರೆ ಕಾಟನ್ ಅನ್ನು ನಿರ್ವಹಣೆ ಮಾಡುವುದು ಕಷ್ಟ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಟೆರಿಕೋಟ್ ಫೈಬರ್ ಯೂನಿಫಾರ್ಮ್ ನೀಡಲಾಗಿತ್ತು. ಆದರೆ ಇದು ಹೆಚ್ಚು ಬಿಸಿಲಿರುವ ಪ್ರದೇಶಕ್ಕೆ ಹೊಂದಿಕೆಯಾಗದ ಕಾರಣ ಇದೀಗ ಬದಲಿ ಯೋಚನೆ ಮಾಡಲಾಗುತ್ತಿದೆ.

ಭಾರತ ವಾಯುಪಡೆಗೆ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ ಬಲಭಾರತ ವಾಯುಪಡೆಗೆ ಅಪಾಚೆ ಗಾರ್ಡಿಯನ್ ಅಟ್ಯಾಕ್ ಹೆಲಿಕಾಪ್ಟರ್ ಬಲ

ಈ ಬಾರಿ ಶರ್ಟ್ ಮತ್ತು ಪ್ಯಾಂಟ್ ಬೇರೆ ಬೇರೆ ಬಣ್ಣದಲ್ಲಿರಲಿದ್ದು, ವಿಶ್ವದ ಬೇರೆ ಸೇನೆಯ ಯೂನಿಫಾರ್ಮ್ ಗಳನ್ನು ಅಭ್ಯಸಿಸಿ, ಹೊಸ ಯೂನಿಫಾರ್ಮ್ ತಯಾರಿಸಲಾಗುತ್ತಿದೆ. ಸೈನಿಕರ ಹಿತದೃಷ್ಟಿಯಿಂದ ಮತ್ತು ಅವರು ಹೆಚ್ಚು ಆರಾಮದಾಯಕವಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ಈ ಯೂನಿಫಾರ್ಮ್ ಅನ್ನು ತಯಾರಿಸಲಾಗುತ್ತಿದೆ.

English summary
Defence ministry sources said, Indian Army personnels' uniform may be changed soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X