• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಚೀನಾ ಗಡಿಯಲ್ಲಿ ಶಸ್ತ್ರಾಸ್ತ್ರ ಪತ್ತೆಗೆ 12 ರಡಾರ್‌ ಖರೀದಿಸಿದ ಭಾರತೀಯ ಸೇನೆ

|
Google Oneindia Kannada News

ನವದೆಹಲಿ ಮೇ 12: ಭಾರತೀಯ ಸೇನೆಯು ಹೊಸದಾಗಿ 12 ಮೇಡ್‌ ಇನ್‌ ಇಂಡಿಯಾ ಶಸ್ತ್ರಾಸ್ತ್ರ ಪತ್ತೆ ರಡಾರ್‌ಗಳನ್ನು ಖರೀದಿಸಲು ತೀರ್ಮಾನಿಸಿದ್ದು, ಇದನ್ನು ಚೀನಾ ಗಡಿಯಲ್ಲಿ ನಿಯೋಜಿಸಲು ಯೋಜಿಸಲಾಗಿದೆ.

'ಸ್ವಾತಿ' ಹೆಸರಿನ ರಾಡಾರ್‌, ಶತ್ರುಗಳ ಮಾರ್ಟಾರ್ಸ್‌, ಶೆಲ್‌ಗಳು, ರಾಕೆಟ್‌ಗಳು ಸೇರಿದಂತೆ 50 ಮೀಟರ್‌ ದೂರದಿಂದ ಹಾರಿಸುವ ಶಸ್ತ್ರಾಸ್ತ್ರಗಳ ಸ್ಥಳವನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ಮೂಲಕ ಭಾರತೀಯ ಸೈನಿಕರಿಗೆ ಸಹಕಾರಿಯಾಗಲಿದೆ.

ಈ ವ್ಯವಸ್ಥೆಯು ಏಕಕಾಲದಲ್ಲಿ ಹಲವು ಕಡೆಗಳಿಂದ ಹಾರಿಸಲಾದ ಬಹು ಸ್ಫೋಟಕಗಳನ್ನು ಪತ್ತೆಹಚ್ಚಲು ಸಮರ್ಥವಾಗಿದೆ. ಆರ್ಟಿಲರಿ ಗನ್‌ಗಳಂತಹ ಶತ್ರುಗಳ ಶಸ್ತ್ರಾಸ್ತ್ರ ಇರುವ ಸ್ಥಳಗಳನ್ನು ತಿಳಿಯುವುದರಿಂದ ಭಾರತೀಯ ಯೋಧರು ಕರಾರುವಾಕ್ಕಾಗಿ ಪ್ರತಿ ದಾಳಿ ನಡೆಸಲು ಸಹಕಾರಿಯಾಗಲಿದೆ.

'ಸ್ವಾತಿ' ರಡಾರ್‌ಗಳನ್ನು ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದ್ದು, ಭಾರತ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಇದನ್ನು ನಿರ್ಮಿಸಿದೆ. ಒಟ್ಟು 12 ರಡಾರ್‌ಗಳ ಬೆಲೆ 1000 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ರಕ್ಷಣಾ ಇಲಾಖೆಯಿಂದ ಅನುಮೋದನೆ ದೊರೆತ ನಂತರ ಇದು ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ.

ಸದ್ಯ ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ತನ್ನ ಕಾರ್ಯಾಚರಣೆಗಾಗಿ ಶಸ್ತ್ರಾಸ್ತ್ರ ಪತ್ತೆ ಹಚ್ಚುವ ರಡಾರ್‌ಗಳನ್ನು ಬಳಸುತ್ತಿದೆ. ನೂತನವಾಗಿ ಅಭಿವೃದ್ಧಿಪಡಿರುವ 'ಸ್ವಾತಿ' ರಡಾರಗಳನ್ನು2018ರಲ್ಲಿಪರೀಕ್ಷೆಗಾಗಿ ಭಾರತೀಯ ಸೇನೆಗೆ ಹಸ್ತಾಂತರಿಸಲಾಗಿತ್ತು.

Indian Army to buy 12 more weapon locating radars

ಅತ್ಮನಿರ್ಭರ ಭಾರತ್‌ ಯೋಜನೆಯ ಅಡಿಯಲ್ಲಿ ಭಾರತೀಯ ನಿರ್ಮಿತ ಶಸ್ತ್ರಾಸ್ತ್ರಗಳನ್ನು ಹೊಂದಲು ಆದ್ಯತೆ ನೀಡಲಾಗಿದೆ. ಅಲ್ಲದೇ ಹೈಟೆಕ್‌ ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿ ತಯಾರಿಸುವ ಮೂಲಕ ಆಮದನ್ನು ಕಡಿತಗೊಳಿಸುವ ಪ್ರಯತ್ನದಲ್ಲಿ ಇದ್ದೇವೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ.

English summary
Indian Army to buy 12 more weapon locating radars for china border,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X