ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ಮತ್ತು ಭಾರತ ಸೈನಿಕರ ಘರ್ಷಣೆ ವಿಡಿಯೋ ತಿರಸ್ಕರಿಸಿದ ಸೈನ್ಯ

|
Google Oneindia Kannada News

ದೆಹಲಿ, ಮೇ 31: ಚೀನಾ ಮತ್ತು ಭಾರತ ಗಡಿ ವಿವಾದ ಪರಿಸ್ಥಿತಿ ಗಂಭೀರವಾಗಿದ್ದು, ಉಭಯ ರಾಷ್ಟ್ರಗಳ ನಡುವೆ ಯುದ್ಧದ ಸಂಭವಿಸುವ ಆತಂಕ ಮೂಡಿದೆ.

ಲಡಾಕ್ ಗಡಿಯಲ್ಲಿ ಚೀನಾ ಮತ್ತು ಭಾರತ ಎರಡು ದೇಶಗಳು ಸೈನ್ಯವನ್ನು ಹೆಚ್ಚಿಸಿದೆ. ಈ ನಡುವೆ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ಘರ್ಷಣೆ ಆಗುತ್ತಿರುವಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚೀನಾ-ಭಾರತ ಗಡಿ ವಿವಾದ: ಸರ್ಕಾರದ ಮೌನ ಗೊಂದಲಕ್ಕೆ ಕಾರಣ-ರಾಹುಲ್ ಗಾಂಧಿಚೀನಾ-ಭಾರತ ಗಡಿ ವಿವಾದ: ಸರ್ಕಾರದ ಮೌನ ಗೊಂದಲಕ್ಕೆ ಕಾರಣ-ರಾಹುಲ್ ಗಾಂಧಿ

ಇದೀಗ, ಈ ವಿಡಿಯೋವನ್ನು ಭಾರತೀಯ ಸೈನ್ಯ ತಿರಸ್ಕರಿಸಿದೆ. ಸದ್ಯದ ಪರಿಸ್ಥಿತಿಗೆ ಈ ವಿಡಿಯೋವನ್ನು ಸಂಬಂಧ ಕಲ್ಪಿಸಲಾಗುತ್ತಿದೆ. ಇದರಲ್ಲಿ ಸತ್ಯ ಇಲ್ಲ ಎಂದು ಖಂಡಿಸಿದೆ.

Indian Army rejected video showing clashes between Chinese and Indian troops in eastern Ladakh

"ಪ್ರಸ್ತುತ ಯಾವುದೇ ಹಿಂಸಾಚಾರ ನಡೆಯುತ್ತಿಲ್ಲ. ಉಭಯ ದೇಶಗಳ ನಡುವಿನ ಗಡಿಗಳ ನಿರ್ವಹಣೆಯ ಕುರಿತು ಪ್ರೋಟೋಕಾಲ್‌ಗಳಿಂದ ಮಾರ್ಗದರ್ಶನ ನೀಡಲಾಗುತ್ತದೆ. ಮಿಲಿಟರಿ ಮುಖ್ಯಸ್ಥರ ನಡುವೆ ಸಮಸ್ಯೆ ಬಗೆಹರಿಸುವ ಪ್ರಯತ್ನ ಸಾಗ್ತಿದೆ" ಎಂದು ಸೇನೆ ತಿಳಿಸಿದೆ.

ಮೇ 5ರ ಸಂಜೆ ಪಂಗೊಂಗ್ ತ್ಸೊದಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ಘರ್ಷಣೆ ಆಗಿತ್ತು. ಅದಾದ ಬಳಿಕ ಪರಿಸ್ಥಿತಿ ಹದಗೆಟ್ಟಿತು. ಅಲ್ಲಿಂದ ಉಭಯ ರಾಷ್ಟ್ರಗಳ ನಡುವೆ ಸಂಬಂಧ ಕೆಟ್ಟಿದೆ. ಈ ಸಮಸ್ಯೆಯನ್ನು ಬಗರಹರಿಸಲು ಚೀನಾ ದೇಶದೊಂದಿಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.

English summary
Indian Army rejected a video, which emerged on the social media, purportedly showing clashes between Chinese and Indian troops in eastern Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X