ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರದಲ್ಲಿ ಭಾರತವು ಏಷ್ಯಾದಲ್ಲೇ ನಂಬರ್ 1: ಸಮೀಕ್ಷೆ

|
Google Oneindia Kannada News

ನವದೆಹಲಿ, ನವೆಂಬರ್ 26: ಭಾರತದಲ್ಲಿ ಭ್ರಷ್ಟಾಚಾರವನ್ನು ಎಷ್ಟೇ ಪ್ರಯತ್ನಿಸಿದರೂ ಇನ್ನೂ ಯಾವುದೇ ರೀತಿಯಲ್ಲಿ ತಗ್ಗಿಸಲು ಸಾಧ್ಯವಿಲ್ಲ ಎಂಬುದಕ್ಕೆ ಈ ಒಂದು ವರದಿ ಸಾಕ್ಷಿಯಾಗಿದೆ. ಏಷ್ಯಾ ಪೆಸಿಫಿಕ್ ವಲಯದ ದೇಶಗಳಲ್ಲಿ ಲಂಚ ಪಡೆಯುವುದರಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯ ಸಮೀಕ್ಷಾ ವರದಿ ತಿಳಿಸಿದೆ.

ಜಾಗತಿಕ ಭ್ರಷ್ಟಾಚಾರ ಮಾಪಕ (ಜಿಸಿಬಿ) ಪ್ರಕಾರ ಲಂಚ ಪಾವತಿಸಿದ ಸುಮಾರು ಶೇಕಡಾ 50ರಷ್ಟು ಜನರಲ್ಲಿ ಶೇಕಡಾ 32ರಷ್ಟು ಜನರು ತಮ್ಮ ವೈಯಕ್ತಿಕ ಸಂಪರ್ಕದ ಮೂಲಕ ಜನರನ್ನು ಸಂಪರ್ಕಿಸಿದ್ದಾರೆ. ವಿನಃ ಅವರಿಗೆ ಆ ಸೇವೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ವಂಶಪಾರಂಪರ್ಯ ಭ್ರಷ್ಟಾಚಾರ ದೇಶದ ದೊಡ್ಡ ಸವಾಲು: ನರೇಂದ್ರ ಮೋದಿವಂಶಪಾರಂಪರ್ಯ ಭ್ರಷ್ಟಾಚಾರ ದೇಶದ ದೊಡ್ಡ ಸವಾಲು: ನರೇಂದ್ರ ಮೋದಿ

ಅಂದರೆ ಆಶ್ಚರ್ಯಕರ ರೀತಿಯಲ್ಲಿ ದೇಶದಲ್ಲಿ ಸರ್ಕಾರಿ ಸೇವೆಗಳನ್ನು ಪಡೆಯಲು ಜನರು ಲಂಚ ನೀಡುವ ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ ಎಂದು ಸಮೀಕ್ಷೆ ತಿಳಿಸಿದೆ.

 20,000 ನಾಗರಿಕರ ಮೇಲಿನ ಸಮೀಕ್ಷೆ

20,000 ನಾಗರಿಕರ ಮೇಲಿನ ಸಮೀಕ್ಷೆ

ಈ ವರ್ಷ ಜೂನ್ 17 ಮತ್ತು ಜುಲೈ 17 ರ ನಡುವೆ ಭಾರತದಲ್ಲಿ 2,000 ಮಾದರಿಗಳ ಗಾತ್ರದೊಂದಿಗೆ ನಡೆಸಿದ ಸಮೀಕ್ಷೆಯ ಆಧಾರದ ಮೇಲೆ ಈ ವರದಿಯನ್ನು ತಯಾರಿಸಲಾಗಿದೆ. ದೇಶದಲ್ಲಿ ಸರ್ಕಾರಿ ಸೇವೆಗಳನ್ನು ಪಡೆಯುವ ಪ್ರತಿ 10 ಜನರಲ್ಲಿ ಅಂದಾಜು 7 ಜನರು ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ಲಂಚ ಪಾವತಿಸುತ್ತಾರೆ ಎಂದು ವರದಿ ಹೇಳಿದೆ.

17 ದೇಶಗಳಲ್ಲಿ ಸರ್ಕಾರಿ ಕ್ಷೇತ್ರಗಳ ಆಧಾರದ ಮೇಲೆ, ಜಿಸಿಬಿ ಒಟ್ಟು 20,000 ನಾಗರಿಕರನ್ನು ಸಮೀಕ್ಷೆ ಮಾಡಿದೆ. ಅದರಲ್ಲಿ ಭಾರತವು ಲಂಚಕೋರತನದಲ್ಲಿ ಎಲ್ಲಾ ರಾಷ್ಟ್ರಗಳಿಗಿಂತ ಮುಂದಿದೆ.

ಶೇಕಡಾ 39ರಷ್ಟು ಲಂಚದ ದರ

ಶೇಕಡಾ 39ರಷ್ಟು ಲಂಚದ ದರ

ಭಾರತದಲ್ಲಿ ಏಷ್ಯಾದಲ್ಲಿಯೇ ಅತಿ ಹೆಚ್ಚು ಭ್ರಷ್ಟಾಚಾರ, ಲಂಚ ನೀಡುವ ದರವನ್ನು ಹೊಂದಿದ್ದು ಶೇಕಡಾ 39ರಷ್ಟಿದೆ. ಇನ್ನು ಸಾರ್ವಜನಿಕ ಸೇವೆಗಳನ್ನು ಪಡೆಯಲು ಶೇಕಡಾ 46ರಷ್ಟು ಜನರು ತಮ್ಮ ವೈಯಕ್ತಿಕ ಸಂಪರ್ಕಗಳನ್ನು ಬಳಸುತ್ತಾರೆ ಎನ್ನಲಾಗಿದೆ.

ಲಂಚ, ಲಂಚ, ಲಂಚ: ಜಾಗತಿಕ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?ಲಂಚ, ಲಂಚ, ಲಂಚ: ಜಾಗತಿಕ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?

ಸಾರ್ವಜನಿಕ ಆಸ್ಪತ್ರೆ, ಸಾರ್ವಜನಿಕ ಶಾಲೆ, ಗುರುತಿನ ಚೀಟಿ, ಪರ್ಮಿಟ್, ಸಾರ್ವಜನಿಕ ಸೇವೆ, ಪೊಲೀಸ್ ಇಲಾಖೆಗಳಿಂದ ಸೇವೆ ಪಡೆಯಲು ಜನರು ಲಂಚ ನೀಡುತ್ತಾರೆ. ಆದರೆ ನ್ಯಾಯಾಲಯಗಳಲ್ಲಿ ಭ್ರಷ್ಟತೆ ಪ್ರಮಾಣ ಕಡಿಮೆ ಎಂದು ವರದಿ ತಿಳಿಸಿದೆ.

ಭ್ರಷ್ಟಾಚಾರವನ್ನು ವರದಿ ಮಾಡಲು ಜನರು ಭಯಪಡುತ್ತಾರೆ

ಭ್ರಷ್ಟಾಚಾರವನ್ನು ವರದಿ ಮಾಡಲು ಜನರು ಭಯಪಡುತ್ತಾರೆ

ಜಿಸಿಬಿ ಸಮೀಕ್ಷೆಯ ಪ್ರಕಾರ ದೇಶದಲ್ಲಿ ಭ್ರಷ್ಟಾಚಾರದ ಕುರಿತು ವರದಿ ಮಾಡಲು, ದೂರು ನೀಡಲು ಜನರು ಭಯಪಡುತ್ತಾರೆ. ಭಾರತದ ಬಹುಪಾಲು ನಾಗರಿಕರು (ಶೇಕಡಾ 63) ಭ್ರಷ್ಟಾಚಾರ ವರದಿ ಮಾಡಿದರೆ ತಮಗೆ ತೊಂದರೆಯಾಗುತ್ತದೆ ಎಂದು ಭಾವಿಸಿದ್ದಾರೆ.

ಏಷ್ಯಾ ರಾಷ್ಟ್ರಗಳಲ್ಲಿ ಲೈಂಗಿಕ ಸುಲಿಗೆಯು ಹೆಚ್ಚಿದೆ

ಏಷ್ಯಾ ರಾಷ್ಟ್ರಗಳಲ್ಲಿ ಲೈಂಗಿಕ ಸುಲಿಗೆಯು ಹೆಚ್ಚಿದೆ

ಭಾರತ, ಮಲೇಷ್ಯಾ, ಥೈಲ್ಯಾಂಡ್, ಶ್ರೀಲಂಕಾ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಲೈಂಗಿಕ ಸುಲಿಗೆ ಪ್ರಮಾಣವೂ ಹೆಚ್ಚಾಗಿದೆ ಎಂದು ಸಮೀಕ್ಷೆ ತಿಳಿಸಿದೆ. ಲೈಂಗಿಕ ಸುಲಿಗೆ ತಡೆಗಟ್ಟಲು ಮತ್ತು ನಿರ್ದಿಷ್ಟ ಲಿಂಗಭೇದದ ಭ್ರಷ್ಟಾಚಾರವನ್ನು ಪರಿಹರಿಸಲು ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ವರದಿ ತಿಳಿಸಿದೆ.

ಭ್ರಷ್ಟಾಚಾರವು ಸರ್ಕಾರದ ಸಮಸ್ಯೆ ಎಂದೇ ಭಾವಿಸಿದ್ದಾರೆ!

ಭ್ರಷ್ಟಾಚಾರವು ಸರ್ಕಾರದ ಸಮಸ್ಯೆ ಎಂದೇ ಭಾವಿಸಿದ್ದಾರೆ!

ಭಾರತದಲ್ಲಿ, ಶೇಕಡಾ 89 ರಷ್ಟು ಜನರು ಸರ್ಕಾರದ ಭ್ರಷ್ಟಾಚಾರವು ಒಂದು ದೊಡ್ಡ ಸಮಸ್ಯೆ ಎಂದು ಭಾವಿಸುತ್ತಾರೆ. ಶೇಕಡಾ 18ರಷ್ಟು ಜನರು ತಮ್ಮ ಮತಗಳಿಗೆ ಬದಲಾಗಿ ಲಂಚವನ್ನು ಸ್ವೀಕರಿಸುತ್ತಾರೆ.

ಸಮೀಕ್ಷೆಯಲ್ಲಿ ಭಾಗಿಯಾದ ಶೇಕಡಾ 63 ರಷ್ಟು ಜನರು ಭ್ರಷ್ಟಾಚಾರವನ್ನು ನಿಭಾಯಿಸುವಲ್ಲಿ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಭಾವಿಸಿದರೆ, ಶೇಕಡಾ 73 ರಷ್ಟು ಜನರು ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳ ಪರ ಮಾತನಾಡಿದ್ದಾರೆ.

English summary
India has the highest bribery rate in Asia and the most number of people who use personal connections to access public services, according to a new report
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X