ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ದೇಶದ ಹಳ್ಳಿ ಹಳ್ಳಿಗಳಿಗೆ 5ಜಿ; ಮೋದಿ ಘೋಷಣೆ

|
Google Oneindia Kannada News

ನವದೆಹಲಿ, ಆಗಸ್ಟ್ 15: ಭಾರತವು ಶೀಘ್ರದಲ್ಲೇ 5G ಮೊಬೈಲ್ ಸೇವೆಗಳನ್ನು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದು, ನವ ಭಾರತದ ಸವಾಲುಗಳನ್ನು ಎದುರಿಸಲು 'ಮೇಡ್-ಇನ್-ಇಂಡಿಯಾ' ತಂತ್ರಜ್ಞಾನದಲ್ಲಿ ಪರಿಹಾರ ಬೇರೂರಿದೆ ಎಂದರು.

ಭಾರತದ ತಂತ್ರಜ್ಞಾನ ಮತ್ತು ಡಿಜಿಟಲ್ ತಂತ್ರಜ್ಞಾನವು ಪ್ರತಿಯೊಂದು ಕ್ಷೇತ್ರದಲ್ಲೂ ಸುಧಾರಣೆಗಳನ್ನು ತರಲು ಇದು ಸಕಾಲ ಎಂದು ಪ್ರಧಾನಿ ಮೋದಿ ಹೇಳಿದರು.

ಆಗಸ್ಟ್‌ 15ಕ್ಕೆ ಜಿಯೋದಿಂದ 5ಜಿ ಸೇವೆ ಆರಂಭ, ಬೆಲೆ ಎಷ್ಟು?ಆಗಸ್ಟ್‌ 15ಕ್ಕೆ ಜಿಯೋದಿಂದ 5ಜಿ ಸೇವೆ ಆರಂಭ, ಬೆಲೆ ಎಷ್ಟು?

"ಹಳ್ಳಿಗಳಲ್ಲಿ 5G, ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಆಪ್ಟಿಕಲ್ ಫೈಬರ್ ಕೇಬಲ್ (OFCs) ಗಳೊಂದಿಗೆ, ನಾವು ಡಿಜಿಟಲ್ ಇಂಡಿಯಾದ ಮೂಲಕ ತಳಮಟ್ಟದಲ್ಲಿ ಕ್ರಾಂತಿಯನ್ನು ತರುತ್ತಿದ್ದೇವೆ" ಎಂದು ಹೇಳಿದರು.

Breaking News: India Will Soon see the Advent of 5G Mobile Services Says Prime Minister Narendra Modi

ಅರೆವಾಹಕಗಳು (semiconductors), 5G ನೆಟ್‌ವರ್ಕ್‌ಗಳು ಮತ್ತು ಆಪ್ಟಿಕಲ್ ಫೈಬರ್ ನೆಟ್‌ವರ್ಕ್‌ಗಳ ಉತ್ಪಾದನೆಯೊಂದಿಗೆ ಡಿಜಿಟಲ್ ಇಂಡಿಯಾವು ಶಿಕ್ಷಣ, ಆರೋಗ್ಯ ಸೌಲಭ್ಯಗಳು ಮತ್ತು ಸಾಮಾನ್ಯ ಜನರ ಜೀವನದಲ್ಲಿ ಬದಲಾವಣೆ ಎಂಬ ಮೂರು ಕ್ಷೇತ್ರಗಳನ್ನು ಅಭಿವೃದ್ಧಿ ಪಡಿಸುತ್ತದೆ ಎಂದರು.

"ಭಾರತದ ಕೈಗಾರಿಕಾ ಬೆಳವಣಿಗೆ ತಳಮಟ್ಟದಿಂದ ಆಗಲಿದೆ. ನಮ್ಮ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (MSMEಗಳು), ಬೀದಿ ವ್ಯಾಪಾರಿಗಳು ಮತ್ತು ಸಂಘಟಿತ ವಲಯಗಳಲ್ಲಿ ಕೆಲಸ ಮಾಡುವವರನ್ನು ಬಲಪಡಿಸಬೇಕಾಗಿದೆ" ಎಂದು ಹೇಳಿದರು.

ಇನ್ನು ಭ್ರಷ್ಟಾಚಾರದ ವಿರುದ್ಧ ಪೂರ್ಣ ಶಕ್ತಿಯಿಂದ ಹೋರಾಡುವುದಾಗಿ ಮೋದಿ ಪ್ರತಿಜ್ಞೆ ಮಾಡಿದರು. ಭ್ರಷ್ಟಾಚಾರದ ವಿರುದ್ಧ ನಾವೆಲ್ಲ ಸಂಪೂರ್ಣವಾಗಿ ಹೋರಾಟ ನಡೆಸಬೇಕಿದೆ, ಕಳೆದ ಎಂಟು ವರ್ಷಗಳಲ್ಲಿ ಆಧಾರ್, ನೇರ ಲಾಭ ವರ್ಗಾವಣೆ (ಡಿಬಿಟಿ) ಹಾಗೂ ಮೊಬೈಲ್ ಫೋನ್ ಬಳಸಿ 2 ಲಕ್ಷ ಕೋಟಿ ರೂಪಾಯಿ ಕಪ್ಪುಹಣ ಪತ್ತೆ ಮಾಡಲಾಗಿದೆ' ಎಂದು ತಿಳಿಸಿದರು.

ದೇಶದಲ್ಲಿ 5G ಹರಾಜು ಮುಗಿದಿದ್ದು, ಇದರೊಂದಿಗೆ 5G ನೆಟ್‌ವರ್ಕ್‌ನ ಸೇವೆಗಾಗಿ ಜನರು ಕಾಯುತ್ತಿದ್ದಾರೆ. ತರಂಗಾತರದ ಹರಾಜಿನಲ್ಲಿ ಜಿಯೋ ಅತಿ ಹೆಚ್ಚು ಬಿಡ್‌ದಾರರಾಗಿದ್ದು, ಏರ್‌ಟೆಲ್ ಮತ್ತು ವೊಡಾಫೋನ್ ನಂತರದ ಸ್ಥಾನದಲ್ಲಿವೆ.

ಹೀಗಾಗಿ ಭಾರತದಲ್ಲಿ 5G ಸೇವೆಗಳನ್ನು ಯಾವಾಗ ಪ್ರಾರಂಭಿಸಲಾಗುವುದು, ಯಾವ ನಗರಗಳು ಮತ್ತು ಸೇವೆಗಳಿಗೆ ಜನರು ಎಷ್ಟು ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ. ಸ್ವಾತಂತ್ರ್ಯ ದಿನದಂದು ಅಂದರೆ ಆಗಸ್ಟ್ 15 ರಂದು ಜಿಯೋ 5G ಸೇವೆಗಳನ್ನು ಹೊರತರುವ ನಿರೀಕ್ಷೆಯಿತ್ತು. ಆದರೆ, ಈ ತಿಂಗಳ ಅಂತ್ಯದೊಳಗೆ 5G ಸೇವೆ ದೊರೆಯುವ ಸಾಧ್ಯತೆಯಿದೆ.

English summary
India will soon see the advent of 5G mobile services Says Prime Minister Narendra Modi, know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X