ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IISc study: ಭಾರತದಲ್ಲಿ ಮಾರ್ಚ್ ಅಂತ್ಯದೊಳಗೆ 6 ಕೋಟಿ ಕೊವಿಡ್ ಕೇಸ್ ಪತ್ತೆ!

|
Google Oneindia Kannada News

ದೆಹಲಿ, ಜುಲೈ 16: ಕೊರೊನಾ ವೈರಸ್ ಕಾಟ ಯಾವಾಗ ಅಂತ್ಯವಾಗುತ್ತೆ ಎಂದು ಕಾಯುತ್ತಿರುವ ಜಗತ್ತಿಗೆ ಅಧ್ಯಯನಗಳು ನಿರಾಸೆ ತಂದಿದೆ. ಮುಂದಿನ ವರ್ಷವೂ ಕೊವಿಡ್ ಸಂಕಷ್ಟ ದೇಶಗಳಿಗೆ ತಪ್ಪಿದ್ದಲ್ಲ ಎಂದು IISc ಅಧ್ಯಯನ ಹೇಳಿದೆ.

Recommended Video

Drone Prathap ಆಯ್ತು ಈಗ ಕೆರೆ ಕಾಮೇಗೌಡರ ಸರದಿ | Oneindia Kannada

ಭಾರತದ ಜನಸಂಖ್ಯೆ ಹೋಲಿಸಿಕೊಂಡರೆ ಅಮೆರಿಕ ದೇಶಕ್ಕಿಂತ ಹೆಚ್ಚು ಸೋಂಕು ನಮ್ಮ ದೇಶದಲ್ಲಿ ಪತ್ತೆಯಾಗಲಿದೆ ಎಂದು ಅನೇಕ ತಜ್ಞರು ಭವಿಷ್ಯ ನುಡಿದಿದ್ದಾರೆ. ಆದರೆ, ಎಲ್ಲಿಯವರೆಗೂ ಪ್ರಕರಣಗಳು ದಾಖಲಾಗಬಹುದು? ಎಷ್ಟು ಕೇಸ್ ವರದಿಯಾಗಬಹುದು ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲ.

ಇದೇ ಮೊದಲ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ಪತ್ತೆಇದೇ ಮೊದಲ ಬಾರಿಗೆ ಭಾರತದಲ್ಲಿ ಅತಿ ಹೆಚ್ಚು ಕೊರೊನಾ ಕೇಸ್ ಪತ್ತೆ

ಇದೀಗ, ಭಾರತ ಮೂಲದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಧ್ಯಯನ ತಂಡ ಕೊವಿಡ್ ಕುರಿತು ವರದಿ ಸಿದ್ದ ಮಾಡಿದ್ದು, 2021ರ ಮಾರ್ಚ್ ಅಂತ್ಯದೊಳಗೆ ಇಂಡಿಯಾದಲ್ಲಿ 6 ಕೋಟಿಗೂ ಅಧಿಕ ಕೊರೊನಾ ಕೇಸ್‌ ಪತ್ತೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಮುಂದೆ ಓದಿ....

ಮಾರ್ಚ್ ಅಂತ್ಯಕ್ಕೆ 6 ಕೋಟಿ ದಾಟಬಹುದು!

ಮಾರ್ಚ್ ಅಂತ್ಯಕ್ಕೆ 6 ಕೋಟಿ ದಾಟಬಹುದು!

ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಧ್ಯಯನ ತಂಡ ಭಾರತದಲ್ಲಿ ಕೊರೊನಾ ಸೋಂಕಿನ ಪ್ರಮಾಣದ ಕುರಿತು ಸಂಶೋಧನೆ ಮಾಡಿದ್ದು, ಮಾರ್ಚ್ ಅಂತ್ಯದೊಳಗೆ ಗರಿಷ್ಠ 6 ಕೋಟಿ ಸೋಂಕಿತರನ್ನು ಕಾಣಬಹುದು ಎಂದು ಹೇಳಿದೆ. ಒಂದು ವೇಳೆ ಭಾರತ ಕೆಟ್ಟ ಸ್ಥಿತಿಗೆ ತಲುಪಿದರೆ ಮುಂದಿನ ಮಾರ್ಚ್ ಸಮಯಕ್ಕೆ 6 ಕೋಟಿ ಸೋಂಕಿತರು ದಾಖಲಾಗಬಹುದು. ಈ ಪೈಕಿ 82 ಲಕ್ಷ ಆಕ್ಟಿವ್ ಕೇಸ್ ಹಾಗೂ 28 ಲಕ್ಷ ಸಾವು ವರದಿಯಾಗಬಹುದು.

ಸೆಪ್ಟೆಂಬರ್ ಆರಂಭಕ್ಕೆ 20 ಲಕ್ಷ ಪ್ರಕರಣ!

ಸೆಪ್ಟೆಂಬರ್ ಆರಂಭಕ್ಕೆ 20 ಲಕ್ಷ ಪ್ರಕರಣ!

ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಧ್ಯಯನ ತಂಡ ಹೇಳಿರುವ ಪ್ರಕಾರ, ಪ್ರಸ್ತುತ ಅಂಕಿ ಅಂಶಗಳ ಆಧಾರದಲ್ಲಿ ಸೆಪ್ಟೆಂಬರ್ ಆರಂಭದ ವೇಳೆಗೆ ಭಾರತದಲ್ಲಿ 20 ಲಕ್ಷಕ್ಕೂ ಅಧಿಕ ಕೊವಿಡ್ ಸೋಂಕಿತರು ವರದಿಯಾಗಲಿದ್ದಾರೆ. ಸೆಪ್ಟೆಂಬರ್ 1 ರ ವೇಳೆಗೆ ದೇಶವು ಒಟ್ಟು 20 ಲಕ್ಷ ಪ್ರಕರಣಗಳು, 4.75 ಲಕ್ಷ ಸಕ್ರಿಯ ಕೇಸ್ ಮತ್ತು 88,000 ಸಾವುಗಳ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ತಿಳಿಸಿದೆ.

ಇದೇ ಪ್ರಮಾಣದಲ್ಲಿ ಸಾಗಿದರೆ ಮಾರ್ಚ್ ವೇಳೆಗೆ?

ಇದೇ ಪ್ರಮಾಣದಲ್ಲಿ ಸಾಗಿದರೆ ಮಾರ್ಚ್ ವೇಳೆಗೆ?

ಕೊರೊನಾದಲ್ಲಿ ನಿಯಂತ್ರಣ ತಪ್ಪಿದರೆ ಮಾರ್ಚ್ ಅಂತ್ಯಕ್ಕೆ 6 ಕೋಟಿ ದಾಟುವ ಸಾಧ್ಯತೆ ಎಂದು ಹೇಳಿರುವ ಅಧ್ಯಯನ ತಂಡ, ಸದ್ಯದ ಪರಿಸ್ಥಿತಿಯಂತೆ ಸಾಗಿದರೆ ಮಾರ್ಚ್ 2021ರ ವೇಳೆಗೆ 37.4 ಲಕ್ಷ ಸೋಂಕಿತರು ವರದಿಯಾಗಬಹುದು ಎಂದಿದೆ. ಅದರಲ್ಲಿ 14 ಲಕ್ಷ ಸಕ್ರಿಯ ಕೇಸ್ ಒಳಗೊಂಡಿದ್ದು, 1.9 ಲಕ್ಷ ಜನರು ಸಾವು ಆಗಬಹುದು ಎಂದು ಐಐಎಸ್ ಅಧ್ಯಯನ ತಂಡ ಹೇಳಿದೆ.

ಒಂದೆರಡು ದಿನ ಲಾಕ್‌ಡೌನ್‌ ಸಹಕಾರಿಯಾಗಬಹುದು

ಒಂದೆರಡು ದಿನ ಲಾಕ್‌ಡೌನ್‌ ಸಹಕಾರಿಯಾಗಬಹುದು

ಕೊರೊನಾ ವೈರಸ್ ಹರಡುವುದನ್ನು ತಡೆಯುವಲ್ಲಿ ಎರಡ್ಮೂರು ದಿನ ಲಾಕ್‌ಡೌನ್‌ ಮಾಡುವುದು ಪರಿಣಾಮಕಾರಿಯಾಗಬಹುದು ಎಂದು ಐಐಎಸ್ ಅಧ್ಯಯನ ತಂಡ ಅಭಿಪ್ರಾಯ ಪಟ್ಟಿದೆ. ವಾರಕ್ಕೆ ಒಂದು ಅಥವಾ ಎರಡು ದಿನ ಲಾಕ್‌ಡೌನ್ ಮಾಡಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದರಿಂದ ಸೋಂಕಿನ ಹರಡುವಿಕೆಯನ್ನು ಸ್ವಲ್ಪ ಮಟ್ಟಿಗೆ ತಡೆಯಬಹುದು ಎಂದಿದೆ.

ಹತ್ತು ಲಕ್ಷದ ಸನಿಹದಲ್ಲಿ ಭಾರತ

ಹತ್ತು ಲಕ್ಷದ ಸನಿಹದಲ್ಲಿ ಭಾರತ

ಇಂದಿನ ವರದಿ ಬಳಿಕ ಭಾರತದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಹತ್ತು ಲಕ್ಷ (9,68,876) ಗಡಿಯ ಸಮೀಪ ಬಂದಿದೆ. ಈ ಪೈಕಿ 6,12,815 ಜನರು ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. 3,31,146 ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ದೇಶದಲ್ಲಿ 24,915 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ಜಗತ್ತಿನಲ್ಲಿ ಸೋಂಕಿತರ ಸಂಖ್ಯೆ 1.36 ಕೋಟಿ (13,692,614) ಆಗಿದೆ.

English summary
India will have 35 lakh Covid cases by Sept, says IISc study. As per the worse-case scenario, there will be 6.2 cr cases, 82 lakh active cases and 28 lakh deaths by March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X