ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ನೀಡಿದ್ದ ಎಚ್ಚರಿಕೆಯನ್ನು ಲಂಕಾ ಗಂಭೀರವಾಗಿ ತೆಗೆದುಕೊಂಡಿದ್ದರೆ...

|
Google Oneindia Kannada News

ಕೊಲಂಬೋ, ಏಪ್ರಿಲ್ 25: ಶ್ರೀಲಂಕಾದಲ್ಲಿ ನಡೆದ ಉಗ್ರದಾಳಿಗೂ ಹತ್ತು ದಿನ ಮೊದಲು ಭಾರತ ನೀಡಿದ್ದ ಎಚ್ಚರಿಕೆಯನ್ನು ಶ್ರೀಲಂಕಾ ಗಂಭೀರವಾಗಿ ಪರಿಗಣಿಸಿದ್ದರೆ, ಬಹುಶಃ ಈ ಅನಾಹುತ ಸಂಭವಿಸುತ್ತಿರಲಿಲ್ಲ.

ಶ್ರೀಲಂಕಾದಲ್ಲಿ ಚರ್ಚ್, ಹೊಟೇಲ್ ಸೇರಿದಂತೆ ಒಟ್ಟು ಎಂಟು ಕಡೆ ನಡೆದ ದಾಳಿಯಲ್ಲಿ 350 ಕ್ಕೂ ಹೆಚ್ಚು ಜನ ಬಲಿಯಾದರು. ಆದರೆ ಚರ್ಚ್ ಮತ್ತು ಹೊಟೇಲ್ ಗಳನ್ನು ಗುರಿಯಾಗಿಸಿಕೊಂಡು ಇಂಥದೊಂದು ಭಯಾನಕ ದಾಳಿ ನಡೆಯಲಿದೆ ಎಂದು ಹತ್ತು ದಿನಗಳ ಮೊದಲೇ ಭಾರತ ಶ್ರೀಲಂಕಾಕ್ಕೆ ಎಚ್ಚರಿಕೆ ನೀಡಿತ್ತು ಎಂದು ವರದಿಯೊಂದು ತಿಳಿಸಿದೆ.

ಶ್ರೀಲಂಕಾ ಸರಣಿ ಆತ್ಮಹತ್ಯಾ ದಾಳಿಯ ರೂವಾರಿಗಳ ಬದುಕು ಹೇಗಿತ್ತು ಗೊತ್ತಾ? ಶ್ರೀಲಂಕಾ ಸರಣಿ ಆತ್ಮಹತ್ಯಾ ದಾಳಿಯ ರೂವಾರಿಗಳ ಬದುಕು ಹೇಗಿತ್ತು ಗೊತ್ತಾ?

ಅಷ್ಟೇ ಅಲ್ಲ, ಈ ದಾಳಿಯ ಹಿಂದೆ ಯಾರಿದ್ದಾರೆ, ಆ ಎಲ್ಲಾ ಉಗ್ರ ಸಂಘಟನೆಗಳು ಯಾವವು? ಅವುಗಳ ಮುಖ್ಯಸ್ಥರ ಹೆಸರೇನು, ಸಂಪರ್ಕ ಸಂಖ್ಯೆ ಯಾವುದು ಎಂಬಿತ್ಯಾದಿ ಎಲ್ಲ ವಿವರಗಳನ್ನೂ ಭಾರತ ನೀಡಿತ್ತು.

ndia warns Sri Lanka about deadly attack 10 days before the attack

ಈ ಎಲ್ಲ ಮಾಹಿತಿಯುಳ್ಳ ಪತ್ರವನ್ನು ಏ 11 ರಂದೇ ಭಾರತ ಶ್ರೀಲಂಕಾಕ್ಕೆ ಕಳಿಸಿತ್ತು. ಆದರೆ ಶ್ರೀಲಂಕಾ ಅದನ್ನು ಗಂಭಿರವಾಗಿ ಪರಿಗಣಿಸಿರಲಿಲ್ಲ ಎಂದು ವದಿ ತಿಳಿಸಿದೆ.

ಪತ್ನಿ,ಪುತ್ರಿಯ ಕಳೇಬರ ಕೈಮೇಲಿತ್ತು!ಶ್ರೀಲಂಕಾ ಸ್ಫೋಟದ ಮನಕಲಕುವ ಕತೆಪತ್ನಿ,ಪುತ್ರಿಯ ಕಳೇಬರ ಕೈಮೇಲಿತ್ತು!ಶ್ರೀಲಂಕಾ ಸ್ಫೋಟದ ಮನಕಲಕುವ ಕತೆ

ಈ ದಾಳಿಯ ಹೊಣೆಯನ್ನು ಐಸಿಸ್ ಉಗ್ರ ಸಂಘಟನೆ ಹೊತ್ತುಕೊಂಡಿದ್ದರೂ ಅದನ್ನು ಸಾಬೀತುಪಡಿಸುವಂಥ ಯಾವ ಸಾಕ್ಷ್ಯವನ್ನೂ ಅದಿನ್ನೂ ನೀಡಿಲ್ಲ. ದಾಳಿ ನಡೆದ ಮೂರು ದಿನಗಳಲ್ಲಿ ಇದುವರೆಗೆ 60 ಜನರನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯ ಪ್ರಕಾರ ಒಟ್ಟು 9 ದಾಳಿಕೋರರಿದ್ದು, ಅವರಲ್ಲಿ ಓರ್ವ ಮಹಿಳೆಯೂ ಸೇರಿದ್ದಾಳೆ ಎನ್ನಲಾಗಿದೆ.

English summary
India warns Sri Lanka about deadly attack 10 days before the attack. But Sri Lanka has not taken this seriously.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X