ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ವಿರುದ್ಧ ಸೋನಿಯಾ ಗಾಂಧಿ-ಪ್ರಿಯಾಂಕಾ ಗಾಂಧಿ ಜಂಟಿ ವಾಗ್ದಾಳಿ

|
Google Oneindia Kannada News

ದೆಹಲಿ, ಜೂನ್ 26: ಚೀನಾ ಮತ್ತು ಭಾರತ ಸೇನೆ ಘರ್ಷಣೆಗೆ ಸಂಬಂಧಪಟ್ಟಂತೆ ''ದೇಶದ ಜನತೆ ಸ್ಪಷ್ಟ ಉತ್ತರ ನೀಡಿ'' ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Recommended Video

ಬೆಂಗಳೂರಲ್ಲಿ ನದಿ ಇದ್ದಿದ್ದು ಗೊತ್ತಾಗಿದ್ದೇ ನೆನ್ನೆ| Vrushabavathi River | Bengaluru | Oneindia Kannada

''ಪ್ರಧಾನಿ ಮೋದಿ ಹೇಳ್ತಾರೆ, ಭಾರತದ ಗಡಿಯೊಳಗೆ ಚೀನಾ ಪ್ರವೇಶ ಮಾಡಿಲ್ಲ ಅಂತ, ಆದರೆ ಮತ್ತೊಂದು ಕಡೆ ರಕ್ಷಣಾ ಸಚಿವ ಹಾಗೂ ವಿದೇಶಾಂಗ ಸಚಿವರು ಈ ಕುರಿತು ಚರ್ಚೆ ಮಾಡ್ತಿದ್ದಾರೆ'' ಎಂದು ಸೋನಿಯಾ ಗಾಂಧಿ ಟೀಕಿಸಿದ್ದಾರೆ.

India wants to know why our 20 soldiers were killed Sonia Gandhi ask to Modi

ಲಡಾಖ್, ಪ್ರಧಾನಿ ಮೋದಿ ಜೊತೆ ಸರ್ವಪಕ್ಷಗಳ ಸಭೆ: ಪ್ರಶ್ನೆಯ ಸುರಿಮಳೆಗೈದ ಸೋನಿಯಾ ಗಾಂಧಿಲಡಾಖ್, ಪ್ರಧಾನಿ ಮೋದಿ ಜೊತೆ ಸರ್ವಪಕ್ಷಗಳ ಸಭೆ: ಪ್ರಶ್ನೆಯ ಸುರಿಮಳೆಗೈದ ಸೋನಿಯಾ ಗಾಂಧಿ

'ಚೀನಾ ಗಡಿ ಪ್ರದೇಶಕ್ಕೆ ನುಗ್ಗಿಲ್ಲ ಅಂದ್ರೆ ನಮ್ಮ 20 ಯೋಧರು ಏಕೆ ಸತ್ತರು ಮತ್ತು ಹೇಗೆ ಕೊಲ್ಲಲ್ಪಟ್ಟರು ಎಂಬುದು ದೇಶದ ಜನತೆಗೆ ತಿಳಿಯಬೇಕಿದೆ' ಎಂದು ಕಾಂಗ್ರೆಸ್ ಅಧ್ಯಕ್ಷೆ ಕೇಂದ್ರಕ್ಕೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಲಡಾಖ್ ಗಡಿಯಲ್ಲಿ ನಡೆದಿರುವ ಘಟನೆ ಬಗ್ಗೆ ಪ್ರಧಾನಿ ಸ್ಪಷ್ಟ ವಿವರಣೆ ಕೊಟ್ಟಿಲ್ಲ. ಆದರೆ, ಉಪಗ್ರಹ ಚಿತ್ರಗಳನ್ನು ನೋಡಿದ ತಜ್ಞರು ನಮ್ಮ ಭೂಪ್ರದೇಶದಲ್ಲಿ ಚೀನಾದ ಸೈನ್ಯದ ಉಪಸ್ಥಿತಿಯನ್ನು ದೃಢಪಡಿಸಿದ್ದಾರೆ ಎಂದು ಸೋನಿಯಾ ಹೇಳಿದ್ದಾರೆ.

ಚೀನಾ ಆಕ್ರಮಿಸಿಕೊಂಡಿರುವ ಭೂ ಪ್ರದೇಶವನ್ನು ಮೋದಿ ಯಾವಾಗ ಹಿಂದಕ್ಕೆ ಪಡೆಯುತ್ತಾರೆ? ಲಡಾಖ್‌ನಲ್ಲಿ ಚೀನಾದಿಂದ ವಾಸ್ತವ ಗಡಿ ರೇಖೆ ಉಲ್ಲಂಘನೆ ಆಗುತ್ತಿದೆಯೇ? ಗಡಿ ವಿಷಯದಲ್ಲಿ ಪ್ರಧಾನಿ ಅವರು ದೇಶದ ಜನರ ವಿಶ್ವಾಸ ತೆಗೆದುಕೊಳ್ಳುತ್ತಿದ್ದಾರೆಯೇ? ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರಿಯಾಂಕಾ ಗಾಂಧಿ ಸಹ ಮಾತನಾಡಿದ್ದು ''ಚೀನಾದ ಸೈನಿಕರನ್ನು ಎದುರಿಸಲು ನೀವು (ಪಿಎಂ) ನಮ್ಮ ಸೈನಿಕರನ್ನು ನಿರಾಯುಧವಾಗಿ ಏಕೆ ಕಳುಹಿಸಿದ್ದೀರಿ ಎಂದು ಭಾರತದ ಜನರು ತಿಳಿದುಕೊಳ್ಳಬೇಕು. ಅವರು ಪ್ರಾಣ ಕಳೆದುಕೊಂಡ ಭೂಮಿ ನಮ್ಮದು; ನಮ್ಮ ಭೂಮಿಯನ್ನು ಚೀನಾಕ್ಕೆ ನೀಡಲು ನಿಮಗೆ ಬಿಡುವುದಿಲ್ಲ' ಎಂದು ಪ್ರಶ್ನಿಸಿದ್ದಾರೆ.

English summary
India wants to know why & how our 20 soldiers were killed (in Galwan Valley): Congress interim pres Sonia Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X