ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಮ್ಮನ್ನು ಪ್ರಚೋದಿಸಿದರೆ ತಕ್ಕ ಉತ್ತರ ಕೊಡ್ತೇವೆ': ಚೀನಾಗೆ ಮೋದಿ ಖಡಕ್ ಎಚ್ಚರಿಕೆ

|
Google Oneindia Kannada News

ದೆಹಲಿ, ಜೂನ್ 17: ಚೀನಾ ಮತ್ತು ಭಾರತ ಸೈನಿಕರ ಘರ್ಷಣೆ ಕುರಿತು ಪ್ರಧಾನಿ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ''ಭಾರತ ಶಾಂತಿ ಬಯಸುತ್ತದೆ, ನಮ್ಮನ್ನು ಪ್ರಚೋದಿಸಿದರೆ, ಅದು ಯಾವುದೇ ಪರಿಸ್ಥಿತಿ ಇರಲಿ ನಾವು ಸಹ ಸೂಕ್ತ ಉತ್ತರ ನೀಡಲು ಸಮರ್ಪಕವಾಗಿದ್ದೇವೆ'' ಎಂದಿದ್ದಾರೆ.

Recommended Video

History of India China border dispute | Oneindia Kannada

ಕೊರೊನಾ ವೈರಸ್ ಕುರಿತು ಮುಖ್ಯಮಂತ್ರಿಗಳು ಜೊತೆ ಸಭೆ ನಡೆಸಿದಿ ಪ್ರಧಾನಿ ಮೋದಿ, ಸಭೆ ಆರಂಭಕ್ಕೂ ಮುನ್ನ ಹುತಾತ್ಮ ಯೋಧರಿಗೆ ಎರಡು ನಿಮಿಷಗಳ ಕಾಲ ಸಂತಾಪ ಸೂಚಿಸಿದರು.

'ನಿಮ್ಮ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ'- ರಾಜನಾಥ್ ಸಿಂಗ್'ನಿಮ್ಮ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ'- ರಾಜನಾಥ್ ಸಿಂಗ್

ಬಳಿಕ ಮಾತನಾಡಿದ ಮೋದಿ ''ನಮ್ಮ ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ನಾನು ದೇಶದ ಜನತೆಗೆ ಭರವಸೆ ನೀಡುತ್ತೇನೆ. ನಮಗೆ ದೇಶದ ಐಕ್ಯತೆ ಮತ್ತು ಸಾರ್ವಭೌಮತ್ವವು ಅತ್ಯಂತ ಮುಖ್ಯವಾದುದು'' ಎಂದು ಹೇಳುವ ಮೂಲಕ ಚೀನಾಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

India Wants Peace But It Is Capable To Give A Befitting Reply If Instigated Said Modi

ಸೋಮವಾರ ರಾತ್ರಿ ಲಡಾಖ್‌ನ ಗಾಲ್ವಿನ್ ಕಣಿವೆ ಪ್ರದೇಶದಲ್ಲಿ ಚೀನಾ ಮತ್ತು ಭಾರತ ಸೈನಿಕರ ನಡುವೆ ಘರ್ಷಣೆ ಉಂಟಾಗಿತ್ತು. ಈ ಹಿಂಸಾತ್ಮಕ ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು.

ಚೀನಾ ಸೇನೆಯಲ್ಲೂ 40ಕ್ಕೂ ಅಧಿಕ ಯೋಧರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈವರೆಗೂ ಚೀನಾ ಸೇನೆ ಈ ಬಗ್ಗೆ ನಿಖರವಾದ ಮಾಹಿತಿ ಹಂಚಿಕೊಂಡಿಲ್ಲ.

ಭಾರತದ ರಕ್ಷಣ ರಾಜನಾಥ್ ಸಿಂಗ್ ಸಹ ಈ ಘಟನೆ ಬಗ್ಗೆ ಟ್ವೀಟ್ ಮಾಡಿ ''ಗಾಲ್ವಾನ್ ಕಣಿವೆ ಪ್ರದೇಶದ ನಡೆದ ಘಟನೆಯಲ್ಲಿ ಹುತಾತ್ಮರಾದ ಯೋಧರ ಸಾವು ನಮಗೆ ತೀವ್ರ ನೋವು ತಂದಿದೆ. ನಮ್ಮ ಸೈನಿಕರು ಗಡಿ ಕರ್ತವ್ಯದಲ್ಲಿ ಧೈರ್ಯ ಮತ್ತು ಶೌರ್ಯದಿಂದ ಹೋರಾಡಿದರು. ಭಾರತದ ಸೈನ್ಯದ ಉನ್ನತಮಟ್ಟದ ಸಂಪ್ರದಾಯದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ'' ಎಂದು ಸಂತಾಪ ಸೂಚಿಸಿದ್ದಾರೆ.

English summary
India wants peace but when instigated, India is capable of giving a befitting reply, be it any kind of situation: Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X