ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ವೇಗದ ಆರ್ಥಿಕ ಬೆಳವಣಿಗೆ: ಟಾಪ್ 10ರಲ್ಲಿ ಭಾರತದ್ದೇ ನಗರಗಳು

|
Google Oneindia Kannada News

ನವದೆಹಲಿ, ಡಿಸೆಂಬರ್ 6: ಅತ್ಯಂತ ವೇಗವಾಗಿ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ ವಿಶ್ವದ ನಗರಗಳ ಟಾಪ್ 10ರ ಪಟ್ಟಿಯಲ್ಲಿ ಸಂಪೂರ್ಣ ಭಾರತದ ನಗರಗಳೇ ತುಂಬಿಕೊಂಡಿವೆ.

ಆಕ್ಸ್‌ಫರ್ಡ್ ಎಕನಾಮಿಕ್ಸ್ ಪ್ರಕಾರ, ಭಾರತದ ನಗರಗಳು ಇನ್ನೂ ಎರಡು ವರ್ಷಗವರೆಗೆ ಆರ್ಥಿಕಾಭಿವೃದ್ಧಿಯಲ್ಲಿ ಪಾರುಪತ್ಯ ಮೆರೆಯಲಿವೆ. 2035ರವರೆಗೂ ಟಾಪ್ 10ರಲ್ಲಿ ಭಾರತದ ನಗರಗಳೇ ಇರಲಿವೆ ಎಂದು ವರದಿ ತಿಳಿಸಿದೆ.

ಟೈಮ್ಸ್ ಸಮೀಕ್ಷೆ ವಿಶ್ವದ ಟಾಪ್ 100 ವಿವಿಗಳಲ್ಲಿ ಬೆಂಗಳೂರಿನ ಐಐಎಸ್ಸಿ
ಈ ಪಟ್ಟಿಯಲ್ಲಿ ಗುಜರಾತ್‌ನ ಸೂರತ್ ಮೊದಲನೆಯ ಸ್ಥಾನ ಪಡೆದುಕೊಂಡಿದೆ. ಸೂರತ್ ವಾರ್ಷಿಕ 9.17% ಬೆಳವಣಿಗೆ ಹೊಂದಿದೆ.

india top ten worlds fastest economic growing cities surat

ಉತ್ತರ ಪ್ರದೇಶದ ಆಗ್ರಾ 8.58% ಬೆಳವಣಿಗೆಯೊಂದಿಗೆ ಎರಡನೆಯ ಸ್ಥಾನದಲ್ಲಿದ್ದರೆ, ಬೆಂಗಳೂರು ಶೇ 8.5ರ ಬೆಳವಣಿಗೆಯೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದೆ.

ಹೈದರಾಬಾದ್ (8.47%), ನಾಗಪುರ (8.41%), ತಿರುಪ್ಪುರ್ (8.36%), ರಾಜಕೋಟ್ (8.33%), ತಿರುಚಿರಾಪಳ್ಳಿ (8.29%), ಚೆನ್ನೈ (8.17%) ಮತ್ತು ವಿಜಯವಾಡ (8.16%) ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

ವಿಶ್ವದ ಐದನೇ ಪರಮಾಣು ಶಕ್ತಿಯಾಗಿ ಪಾಕ್? ಟಾಪ್ 10 ಪರಮಾಣು ರಾಷ್ಟ್ರಗಳ ಪಟ್ಟಿ ವಿಶ್ವದ ಐದನೇ ಪರಮಾಣು ಶಕ್ತಿಯಾಗಿ ಪಾಕ್? ಟಾಪ್ 10 ಪರಮಾಣು ರಾಷ್ಟ್ರಗಳ ಪಟ್ಟಿ

ವಿಶ್ವದ ಅತಿದೊಡ್ಡ ಮೆಟ್ರೊಪಾಲಿಟನ್ ನಗರಗಳಿಗೆ ಹೋಲಿಸಿದರೆ ಭಾರತದ ನಗರಗಳು ಈಗಲೂ ತುಂಬಾ ಚಿಕ್ಕದಾಗಿವೆ. ಆದರೆ, ಏಷ್ಯಾದ ಎಲ್ಲ ನಗರಗಳ ಒಟ್ಟು ಸರಾಸರಿ ಆಂತರಿಕ ಉತ್ಪಾದನೆಯು ಉತ್ತರ ಅಮೆರಿಕ ಮತ್ತು ಯುರೋಪ್‌ನ ನಗರ ಕೇಂದ್ರಗಳ ಒಟ್ಟಾರೆ ಉತ್ಪಾದನೆಯನ್ನು 2027ರ ವೇಳೆಗೆ ಮೀರಿಸಲಿದೆ. 2035ರ ವೇಳೆಗೆ ಅದು ಶೇ 17ರಷ್ಟು ಹೆಚ್ಚಳವಾಗಲಿದೆ. ಇದರಲ್ಲಿ ಚೀನಾ ನಗರಗಳ ಪಾಲು ಹೆಚ್ಚಿನದ್ದಾಗಿರಲಿದೆ.

2035ರ ವೇಳೆಗೆ ವಿಶ್ವದ ಅತಿ ದೊಡ್ಡ ನಗರಗಳ ಪಟ್ಟಿಯಲ್ಲಿ ಕೆಲವು ಬದಲಾವಣೆಗಳಾಗಲಿವೆ.

ನ್ಯೂಯಾರ್ಕ್, ಟೋಕಿಯೊ, ಲಾಸ್ ಏಂಜಲಿಸ್ ಮತ್ತು ಲಂಡನ್ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲಿವೆ. ಶಾಂಘೈ ಮತ್ತು ಬೀಜಿಂಗ್ ನಗರಗಳು ಪ್ಯಾರಿಸ್ ಹಾಗೂ ಷಿಕಾಗೊಗಳನ್ನು ಹಿಂದಿಕ್ಕಿ 20 ಮಿಲಿಯನ್ ಜನಸಂಖ್ಯೆಯೊಂದಿಗೆ ಮೇಲಕ್ಕೇರಲಿವೆ.

ದೇಶದ ಟಾಪ್ 10 ಗಲೀಜು ಹಾಗೂ ತುಂಬ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿದೇಶದ ಟಾಪ್ 10 ಗಲೀಜು ಹಾಗೂ ತುಂಬ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿ

ದಕ್ಷಿಣ ಚೀನಾದ ಗಾಂಗ್‌ಜೌ ಮತ್ತು ಶೆಂಜೆನ್ ನಗರಗಳು ಟಾಪ್ 10ರಲ್ಲಿ ಸ್ಥಾನ ಪಡೆದುಕೊಳ್ಳಲಿವೆ. 2035ರ ವೇಳೆಗೆ ಟಾಪ್ 10 ಅತಿ ದೊಡ್ಡ ನಗರಗಳ ಪಟ್ಟಿಯಲ್ಲಿ ಚೀನಾದ ನಾಲ್ಕು ನಗರಗಳು ಇರಲಿವೆ. ಇದರಲ್ಲಿ ಭಾರತದ ನಗರಗಳ ಹೆಸರಿಲ್ಲ.

English summary
India dominates acquiring all top 10 places in he worlds fastest economic growing cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X