ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಅಮೆರಿಕಾ ನಡುವೆ 2+2 ಚರ್ಚೆ: ವಿಶೇಷವೇನು?

|
Google Oneindia Kannada News

ನವದೆಹಲಿ, ಅಕ್ಟೋಬರ್.27: ಕೊರೊನಾವೈರಸ್ ಆತಂಕ ಮತ್ತು ಗಡಿಯಲ್ಲಿ ಚೀನಾ ತಂಟೆ ನಡುವೆ ಭಾರತದತ್ತ ಜಗತ್ತಿನ ಕಣ್ಣು ನೆಟ್ಟಿದೆ. ರಾಷ್ಟ್ರ ರಾಜಧಾನಿಯಲ್ಲಿ ಭಾರತ ಮತ್ತು ಅಮೆರಿಕಾ ನಡುವೆ 2+2 ಚರ್ಚೆ ನಡೆಯಲಿದೆ.

ಈಗಾಗಲೇ ಅಮೆರಿಕಾದ ವಿದೇಶಾಂಗ ಸಚಿವ ಮೈಕ್ ಪೊಂಪ್ಯು ಮತ್ತು ರಕ್ಷಣಾ ಸಚಿವ ಮಾರ್ಕ್ ಎಸ್ಟರ್ ನವದೆಹಲಿಗೆ ಆಗಮಿಸಿದ್ದಾರೆ. ಮಂಗಳವಾರ ನವದೆಹಲಿಯ ಹೈದ್ರಾಬಾದ್ ಹೌಸ್ ನಲ್ಲಿ ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವರು ಮತ್ತು ರಕ್ಷಣಾ ಸಚಿವರು ಮಹತ್ವದ ಮಾತುಕತೆ ನಡೆಸಲಿದ್ದಾರೆ.

ಯುದ್ಧಕ್ಕೆ ಸಿದ್ಧರಾಗುವಂತೆ ಯೋಧರಿಗೆ ಕರೆ ಕೊಟ್ಟಿತಾ ಚೀನಾ? ಯುದ್ಧಕ್ಕೆ ಸಿದ್ಧರಾಗುವಂತೆ ಯೋಧರಿಗೆ ಕರೆ ಕೊಟ್ಟಿತಾ ಚೀನಾ?

ಅಮೆರಿಕಾ ವಿದೇಶಾಂಗ ಸಚಿವ ಮೈಕ್ ಪೊಂಪ್ಯು, ರಕ್ಷಣಾ ಸಚಿವ ಮಾರ್ಕ್ ಎಸ್ಟರ್ ಹಾಗೂ ಭಾರತದ ಪರವಾಗಿ ವಿದೇಶಾಂಗ ಸಚಿವ ಜೈಶಂಕರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪ್ರಾದೇಶಿಕ ಭದ್ರತಾ ಸಹಕಾರ, ರಕ್ಷಣಾ ಮಾಹಿತಿ ವಿನಿಮಯ, ರಕ್ಷಣಾ ಕ್ಷೇತ್ರದಲ್ಲಿನ ಹೂಡಿಕೆ, ಸೇನೆ ನಡುವಿನ ಮಾತುಕತೆ ನಡೆಯಸಲಿದ್ದಾರೆ. ಈ ಹಿಂದೆ ನವದೆಹಲಿಯಲ್ಲೇ 2018ರ ಸಪ್ಟೆಂಬರ್ ನಲ್ಲಿ ಭಾರತ ಮತ್ತು ಅಮೆರಿಕಾ ನಡುವೆ 2+2 ಮಾತುಕತೆ ನಡೆದಿತ್ತು.

India To Sign Deal To Take Precision Data From American Military Satellites

ಚೀನಾದ ಗಡಿ ತಂಟೆ ಬಗ್ಗೆ ಚರ್ಚೆ ಸಾಧ್ಯತೆ:

ಕೊರೊನಾವೈರಸ್ ಸೋಂಕು ಹರಡುವಿಕೆಗೆ ಸಂಬಂಧ ಚೀನಾದ ವಿರುದ್ಧ ಅಮೆರಿಕಾ ಈಗಾಗಲೇ ಕೆರಳಿದೆ. ದಕ್ಷಿಣ ಸಮುದ್ರ ಗಡಿಯಲ್ಲಿ ಅಮೆರಿಕಾದ ಜೊತೆಗೆ ಹಾಗೂ ಲಡಾಖ್ ಪೂರ್ವ ಗಡಿಯಲ್ಲಿ ಭಾರತದ ಜೊತೆಗೆ ಚೀನಾ ತಂಟೆ ತೆಗೆಯುತ್ತಿದೆ. ಈ ಬಗ್ಗೆಯು ಮಂಗಳವಾರದ ಸಭೆಯಲ್ಲಿ ಉಭಯ ರಾಷ್ಟ್ರಗಳ ನಾಯಕರು ಚರ್ಚಿಸುವ ಸಾಧ್ಯತೆಯಿದೆ.

ಬಹುಮುಖ್ಯವಾಗಿ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ಸಾಮಾನ್ಯ ಅಂಶಗಳ ವಿನಿಮಯ ಮತ್ತ ಸಹಕಾರಿ ಒಪ್ಪಂದಕ್ಕೆ ಅಂಕಿತ ಹಾಕುವ ನಿರೀಕ್ಷೆಯಿದೆ. ಅಮೆರಿಕಾದ ಸೆಟ್ ಲೈಟ್ ಗಳ ಮೂಲಕ ರಕ್ಷಣಾ ವಿಚಾರಕ್ಕೆ ಸಂಬಂಧಿಸಿದ ನಿಖರ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕೆ ಭಾರತಕ್ಕೆ ಇದರಿಂದ ಸಹಾಯವಾಗಲಿದೆ.

English summary
2+2 Discussion Between America And India. India To Sign Deal To Take Precision Data From American Military Satellites.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X