ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ಷಡ್ಯಂತ್ರದಿಂದಲೂ ದೇಶದ ಏಕತೆಗೆ ಧಕ್ಕೆಯಾಗದು: ಅಮಿತ್ ಶಾ

|
Google Oneindia Kannada News

ನವದೆಹಲಿ, ಫೆಬ್ರವರಿ 03: ದೆಹಲಿ ಸುತ್ತಮುತ್ತ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿರುವ ರೈತರ ಹೋರಾಟಕ್ಕೆ ವಿದೇಶಿ ಸೆಲೆಬ್ರಿಟಿಗಳು ಬೆಂಬಲ ಸೂಚಿಸಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಕ್ರೋಶದ ಟ್ವೀಟ್ ಮಾಡಿದ್ದಾರೆ.

ಯಾವ ಷಡ್ಯಂತ್ರವೂ ಭಾರತದ ಏಕತೆಯನ್ನು ಅಲುಗಾಡಿಸಲಾಗದು, ಭಾರತವನ್ನು ಉನ್ನತ ಸ್ಥರಕ್ಕೆ ಏರುವುದನ್ನು ಯಾವ ಷಡ್ಯಂತ್ರದಿಂದಲೂ ತಡೆಯಲಾಗದು. ಯಾವ ಷಡ್ಯಂತ್ರವೂ ಭಾರತದ ಹಣೆಬರಹವನ್ನು ನಿರ್ಧರಿಸದು,ಅಭಿವೃದ್ಧಿಯೊಂದೇ ಭಾರತದ ಹಣೆಬರಹವನ್ನು ನಿರ್ದರಿಸಲಿದೆ.

ಕಾಂಗ್ರೆಸ್‌ಗೆ ಶಾಹಿನ್ ಬಾಗ್ ರೀತಿ ಹಿಂಸಾಚಾರ ಸೃಷ್ಟಿ ಮಾಡಬೇಡಿ ಎಂದ ಬಿಜೆಪಿಕಾಂಗ್ರೆಸ್‌ಗೆ ಶಾಹಿನ್ ಬಾಗ್ ರೀತಿ ಹಿಂಸಾಚಾರ ಸೃಷ್ಟಿ ಮಾಡಬೇಡಿ ಎಂದ ಬಿಜೆಪಿ

ಭಾರತ ಒಂದಾಗಿದೆ, ಹಾಗೂ ಒಂದಾಗಿಯೇ ಅಭಿವೃದ್ಧಿಯನ್ನು ಸಾಧಿಸಲಿದೆ ಎಂದು ಅಮಿತ್ ಶಾ ಖಡಕ್ ಸಂದೇಶ ರವಾನಿಸಿದ್ದಾರೆ. ರೈತರ ಹೋರಾಟ ಬೆಂಬಲಿಸಿ ವಿದೇಶಿ ಸೆಲೆಬ್ರಿಟಿಗಳಾದ ರಿಹಾನಾ ಮಿಯಾ ಖಲೀಫಾ ಟ್ವೀಟ್ ಮಾಡಿದ್ದರು.

India Stands United Amit Shah Amid Pushback After Rihanna Farmer Post

ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥಂಬರ್ಗ್ ಕೂಡಾ ಟ್ವೀಟ್ ಮಾಡಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಕೂಡ ಪ್ರತಿಕ್ರಿಯೆಯನ್ನು ಕೂಡಾ ನೀಡಿತ್ತು. ಈ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ ಇದರ ಬೆನ್ನಲ್ಲೇ ಈಗ ಅಮಿತ್ ಶಾ ಕೂಡ ಟ್ವೀಟ್ ಮಾಡಿದ್ದಾರೆ.

ರೈತ ಹೋರಾಟದ ಹಿಂದಿನ ಶಕ್ತಿ ಬಗ್ಗೆ ಕೂಡ ಸಂಶಯ ವ್ಯಕ್ತಪಡಿಸಿದ್ದು, ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹಾಗೂ ಇತರೆ ಬಿಜೆಪಿ ಮುಖಂಡರು ಕೂಡ ವಿದೇಶಿ ಸೆಲೆಬ್ರಿಟಿಗಳ ವಿರುದ್ಧ ಕಿಡಿ ಕಾರಿದ್ದಾರೆ.

English summary
Home Minister Amit Shah this evening became the senior-most member of the government to warn of the "temptation of sensationalist social media hashtags and comments" - a response to the wave of support for farmers protesting the new agriculture laws, a wave generated by a six-word tweet and hashtag from pop star Rihanna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X