ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಾದ್ಯಂತ ಎಲ್ಲಾ ತುರ್ತು ಸೇವೆಗೆ '112' ಸಾಮಾನ್ಯ ಸಂಖ್ಯೆ

By Vanitha
|
Google Oneindia Kannada News

ನವದೆಹಲಿ,ಮಾರ್ಚ್,29: ಪೊಲೀಸ್, ಆಂಬುಲೆನ್ಸ್, ಅಗ್ನಿ ಶಾಮಕ ದಳ ಹೀಗೆ ಪ್ರತಿಯೊಂದು ಇಲಾಖೆಗಳು ತನ್ನದೇ ಆದ ತುರ್ತು ಸೇವಾ ಸಂಖ್ಯೆ ಇರಿಸಿಕೊಂಡಿವೆ. ಇದೀಗ ಎಲ್ಲಾ ಬಗೆಯ ತುರ್ತು ಸೇವೆಗಳಿಗೆ ಅನ್ವಯವಾಗುವ ಸಾಮಾನ್ಯ ಸಂಖ್ಯೆ ಜಾರಿಗೆ ತರಲು ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಂದಾಗಿದೆ.

ಪೊಲೀಸ್ 100, ಅಗ್ನಿ ಶಾಮಕ ಇಲಾಖೆಗೆ 101, ಆಂಬುಲೆನ್ಸ್ 108 ಇವು ಸಾರ್ವಜನಿಕರಿಗೆ ತುರ್ತು ಸೇವೆ ಒದಗಿಸಲು ಇರುವ ತುರ್ತು ಸೇವಾ ಸಂಖ್ಯೆಗಳು. ಈ ಎಲ್ಲಾ ಇಲಾಖೆಗಳನ್ನು ಒಂದೇ ಸೂರಿನಡಿಯಲ್ಲಿ ತರುವ ಉದ್ದೇಶದಿಂದ 'ಆಲ್ ಇನ್ ಒನ್' ಎಂಬ ಹೆಸರಿನಲ್ಲಿ 112 ಸಂಖ್ಯೆಯನ್ನು ತುರ್ತು ಸೇವಾ ಸಂಖ್ಯೆಯಾಗಿ ಬಳಕೆ ಮಾಡಲು ಟ್ರಾಯ್ ಚಿಂತನೆ ನಡೆಸಿದೆ.[ಗರ್ಭಿಣಿ, ಮಕ್ಕಳ ರಕ್ಷಣೆಗಾಗಿ 'ವಾತ್ಸಲ್ಯವಾಣಿ-104']

India to soon launch 112 as National Emergency Number

ಏನಿದು 112?

ನಾವು ಅಕಸ್ಮಾತ್ ಆರೋಗ್ಯದಲ್ಲಿ ದಿಢೀರ್ ತೊಂದರೆಯಾದಾಗ 108, ಬೆಂಕಿ ಅವಘಡ ಸಂಭವಿಸಿದರೆ 101, ಕಿಡಿಗೇಡಿಗಳಿಂದ ಅಪಾಯವಾದಾಗ 100 ಈ ಸಂಖ್ಯೆಗಳಿಗೆ ಕರೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ಸಮಸ್ಯೆ ನಿವಾರಣೆಯಾಗುತ್ತದೆ.

ಇದೀಗ ತುರ್ತು ಸೇವೆಗಳಿಗೆ ಈ ಮೂರು ಇಲಾಖೆಗಳನ್ನು ಸಂಪರ್ಕಿಸಲು ಹೆಣಗಾಡಬೇಕಾಗಿಲ್ಲ. ಯಾವುದೇ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿದರೆ ಸಾಕು. ಸಾರ್ವಜನಿಕರಿಂದ ಬಂದ ಕರೆಗಳನ್ನು ಅಲ್ಲಿಂದ ಸಂಬಂಧಪಟ್ಟ ಸೇವೆಗೆ ಕರೆಯನ್ನು ವರ್ಗಾಯಿಸಿ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸಲಾಗುವುದು.[ಕುಂದು ಕೊರತೆ ಇದ್ದರೆ ಸಹಾಯವಾಣಿ ಬಳಸಿ]

ಈ ಸಂಬಂಧ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಶಿಫಾರಸ್ಸಿಗೆ ಟೆಲಿಕಾಂ ಸಮಿತಿ ಸಮ್ಮತಿ ಸೂಚಿಸಿದ್ದು, ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ಒಪ್ಪಿಗೆ ಸಿಗಬೇಕಾಗಿದೆ. ಕೆಲವೇ ತಿಂಗಳಲ್ಲಿ 112 ತುರ್ತು ಸೇವೆ ಆರಂಭವಾಗಲಿದೆ ಎಂದು ಅಧಿಕಾರಿಗಳು ಹೇಳಿದರು.

English summary
People will soon have to dial a single number 112 for help during emergency situations. 112 would be the single National emergency number in India and 100 (Police), 101 (Fire engine), 108 (Ambulance) phased out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X