ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2018-19ರ ಅವಧಿಯಲ್ಲಿ ನಿರುದ್ಯೋಗ ದರ 5.8% ಇಳಿಕೆ: ಲಾಕ್‌ಡೌನ್ ಬಳಿಕ ಏರಿಕೆ

|
Google Oneindia Kannada News

ನವದೆಹಲಿ, ಜೂನ್ 5: ಜೂನ್ 2018 ರಿಂದ ಜೂನ್ 2019ರ ಅವಧಿಯಲ್ಲಿ ಭಾರತದ ನಿರುದ್ಯೋಗ ದರವು 6.1 ಪರ್ಸೆಂಟ್‌ ರಿಂದ 5.8 ಪರ್ಸೆಂಟ್‌ಗೆ ಇಳಿದಿದೆ ಎಂದು ಸರ್ಕಾರ ಅಂಕಿ-ಅಂಶಗಳು ತಿಳಿಸಿವೆ.

ನಿರುದ್ಯೋಗಿಗಳ ವಯಸ್ಸು 15 ರಿಂದ 29 ಆಗಿದ್ದು, ಇದು ಭಾರತದ 136 ಕೋಟಿ ಜನಸಂಖ್ಯೆಯ ಮೂರನೇ ಒಂದರಷ್ಟು ಆಗಿದೆ. 2017ರಲ್ಲಿ ನಿರುದ್ಯೋಗ ದರ 17.8 ಪರ್ಸೆಂಟ್ ಆಗಿದ್ದು 2018-19ರ ಅವಧಿಯಲ್ಲಿ 17.3 ಪರ್ಸೆಂಟ್‌ಗೆ ಇಳಿದಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ವರದಿಯಲ್ಲಿದೆ.

LIC ನೇಮಕಾತಿ 2020: 100 ಹುದ್ದೆಗಳಿಗೆ ಅರ್ಜಿ ಆಹ್ವಾನLIC ನೇಮಕಾತಿ 2020: 100 ಹುದ್ದೆಗಳಿಗೆ ಅರ್ಜಿ ಆಹ್ವಾನ

ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯು (ಎನ್‌ಎಸ್ಒ) ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿನ 1 ಲಕ್ಷಕ್ಕಿಂತಲೂ ಹೆಚ್ಚು ಕುಟುಂಬಗಳನ್ನು ಗಣನೆಗೆ ತೆಗೆದುಕೊಂಡು ಕಾರ್ಮಿಕರ ಸಮೀಕ್ಷೆ ನಡೆಸಿದ್ದು, ಇದರ ಮಾಹಿತಿ ಆಧರಿಸಿ ವಾರ್ಷಿಕ ವರದಿ ಸಿದ್ಧಪಡಿಸಲಾಗಿದೆ.

Indias Unemployment Rate Improved To 5.8 Percent In 2018-19: Govt Data

ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ; ಅರ್ಜಿ ಹಾಕಿ ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ; ಅರ್ಜಿ ಹಾಕಿ

ಆದರೆ, ಲಾಕ್‌ಡೌನ್‌ದಿಂದಾಗಿ ಮಾರ್ಚ್‌ ಕೊನೆಯ ವಾರದಲ್ಲಿ ನಿರುದ್ಯೋಗ ದರ ಏರಿಕೆಯಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಭಾರತದ ನಿರುದ್ಯೋಗ ದರ ಮೇ ತಿಂಗಳಲ್ಲಿ 23.48% ರಷ್ಟಿದ್ದು, ಏಪ್ರಿಲ್ ತಿಂಗಳಲ್ಲಿ 23.52% ಆಗಿತ್ತು ಎಂದು ಭಾರತೀಯ ಆರ್ಥಿಕ ನಿಗಾ ಸಂಸ್ಥೆ (ಸಿಎಂಐಇ) ವರದಿಯಲ್ಲಿ ತಿಳಿಸಿದೆ.

English summary
India's Unemployment Rate an improvement during 2018-19. declining to 5.8 per cent, down from 6.1 per cent in the previous financial year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X