ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮುಂದಿನ ರಾಷ್ಟ್ರಪತಿ ಮುರಳೀ ಮನೋಹರ ಜೋಷಿ?

ಭಾರತದ ಮುಂದಿನ ರಾಷ್ಟ್ರಪತಿ ಯಾರು ಎಂಬ ಬಗ್ಗೆ ಈಗಾಗಲೇ ಹಲವು ಬಾರಿ ಚರ್ಚೆ ನಡೆದಿದೆ. ಇದೀಗ ರಾಷ್ಟ್ರಪತಿ ಗಾದಿಗೆ ಬಿಜೆಪಿ ಮುಖಂಡ ಮುರಳೀ ಮನೋಹರ್ ಜೋಷಿ ಹೆಸರು ಕೇಳಿಬರುತ್ತಿದ್ದು, ಅಚ್ಚರಿ ಮೂಡಿಸಿದೆ.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜೂನ್ 3: ಭಾರತದ ಮುಂದಿನ ರಾಷ್ಟ್ರಪತಿ ಯಾರು ಎಂಬ ಬಗ್ಗೆ ಈಗಾಗಲೇ ಹಲವು ಬಾರಿ ಚರ್ಚೆ ನಡೆದಿದೆ. ಇದೀಗ ರಾಷ್ಟ್ರಪತಿ ಗಾದಿಗೆ ಬಿಜೆಪಿ ಮುಖಂಡ ಮುರಳೀ ಮನೋಹರ್ ಜೋಷಿ ಹೆಸರು ಕೇಳಿಬರುತ್ತಿದ್ದು, ಅಚ್ಚರಿ ಮೂಡಿಸಿದೆ.
ಇತ್ತೀಚೆಗೆ ದೆಹಲಿಯಲ್ಲಿ ನಡೆದ ಬಿಜೆಪಿ ಮತ್ತು ಆರ್ ಎಸ್ ಎಸ್ ಮುಖಂಡರ ಸಭೆಯಲ್ಲಿ ರಾಷ್ಟ್ರಪತಿ ಹುದ್ದೆಗಾಗಿ ಮುರಳೀ ಮನೋಹರ್ ಜೋಷಿಯವರ ಹೆಸರು ಪ್ರಸ್ತಾಪವಾಗಿದೆ ಎನ್ನಲಾಗಿದೆ.[ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಪಾಳಯದಿಂದ ಹೊಸ ಹೆಸರು ಗೆಹ್ಲೋಟ್!]

ಆದರೆ ಬಾಬ್ರಿ ಮಸೀದಿ ದ್ವಂಸ ಪ್ರಕರಣದಲ್ಲಿ ಎಲ್ ಕೆ ಅಡ್ವಾಣಿ ಅವರೊಂದಿಗೆ ಜೋಷಿಯವರ ಹೆಸರೂ ಕೇಳಿಬರುತ್ತಿರುವುದರಿಂದ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೋಷಿಸುವುದು ಕಷ್ಟವೇ. ಆದರೆ ಎಲ್ ಕೆ ಅಡ್ವಾಣಿ ಮತ್ತು ಜೋಷಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಪರಿಸ್ಥಿತಿ ಬಂದರೆ ವಯಸ್ಸನ್ನು ಪರಿಗಣಿಸಿ, ಮೋದಿ, ಜೋಷಿಯವರನ್ನೇ ಆಯ್ಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ.

India's next president, Murli Manohar Joshi?

ಮುಂಬರುವ ಜುಲೈನಲ್ಲಿ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿ ಮುಗಿಯಲಿದ್ದು, ಈ ಸ್ಥಾನಕ್ಕಾಗಿ ವಿಪಕ್ಷಗಳೆಲ್ಲ ಒಟ್ಟಾಗಿ ಸೂಕ್ತ ಅಭ್ಯರ್ಥಿಯನ್ನು ಹುಡುಕುವ ಪ್ರಯತ್ನದಲ್ಲಿವೆ. ಬಿಜೆಪಿಗೆ ತನ್ನದೇ ಪಕ್ಷದ ಅಭ್ಯರ್ಥಿಯನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲ್ಲಿಸುವುದು ಪ್ರತಿಷ್ಟೆಯ ಪ್ರಶ್ನೆ ಎನ್ನಿಸಿದೆ.

English summary
The name of Murli Manohar Joshi has cropped up with the RSS pushing for his candidature to be the next President of India. The Presidential elections will be held on July 25. The name of Joshi was proposed by the top RSS leadership during a meeting with senior BJP leaders at New Delhi recently.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X