ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ನಾಯಕತ್ವದಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ದೇಶದಲ್ಲಿ ಆರ್ಥಿಕತೆಯ ಹಿಂಜರಿತ: ರಾಹುಲ್ ಗಾಂಧಿ ಕಿಡಿ

|
Google Oneindia Kannada News

ನವದೆಹಲಿ, ನವೆಂಬರ್ 28: ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರವು ಋಣಾತ್ಮಕವಾಗಿ ಕಂಡು ಬಂದ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತ ಆರ್ಥಿಕ ಹಿಂಜರಿತ ಪ್ರವೇಶಿಸಿದ್ದರೂ ಪ್ರೋತ್ಸಾಹದಾಯಕವಾಗಿದೆ: ಕೆ. ಸುಬ್ರಹ್ಮಣಿಯನ್ಭಾರತ ಆರ್ಥಿಕ ಹಿಂಜರಿತ ಪ್ರವೇಶಿಸಿದ್ದರೂ ಪ್ರೋತ್ಸಾಹದಾಯಕವಾಗಿದೆ: ಕೆ. ಸುಬ್ರಹ್ಮಣಿಯನ್

ಎರಡನೇ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡಾ 7.5 ರಷ್ಟು ಕುಸಿತ ಕಂಡಿದ್ದು, ದೇಶದ ಆರ್ಥಿಕತೆಯು ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮೊದಲ ಬಾರಿಗೆ ಆರ್ಥಿಕ ಹಿಂಜರಿತಕ್ಕೆ ಹೋಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಅದಕ್ಕಿಂತ ಮುಖ್ಯವಾಗಿ, ಮೂರು ಕೋಟಿ ಜನರು ಇನ್ನೂ ಎಂಎನ್‌ಆರ್‌ಇಜಿಎ(ಮನ್ರೇಗಾ) ಅಡಿಯಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದಾರೆ. ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಆರ್ಥಿಕತೆಯನ್ನು ಪ್ರಗತಿಯ ಹಾದಿಯಲ್ಲಿ ಸಾಗಿಸಲು ಸಾಧ್ಯವಿಲ್ಲ. ಈ ಮೂಲ ಅಂಶವನ್ನು ಪ್ರಧಾನಿ ಅರ್ಥಮಾಡಿಕೊಳ್ಳಬೇಕು ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

Indias Economy Is Officially In A Recession For The First Time Ever Under PM Modi: Rahul Gandhi

ಸರ್ಕಾರ ಶುಕ್ರವಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿ ಅಂಶಗಳ ಪ್ರಕಾರ, ಉತ್ಪಾದನಾ ವಲಯವು ಜಿಡಿಪಿಯಲ್ಲಿ ಶೇಕಡಾ 7.5 ರಷ್ಟು ಕುಸಿತವನ್ನು ದಾಖಲಿಸಿದೆ. 2020-21ರ ಆರ್ಥಿಕ ವರ್ಷದ ಏಪ್ರಿಲ್-ಜೂನ್ ಮೊದಲ ತ್ರೈಮಾಸಿಕದಲ್ಲಿ ಆರ್ಥಿಕತೆಯು ಶೇಕಡಾ 23.9 ರಷ್ಟು ಕುಸಿದಿದೆ.

English summary
Former Congress president Rahul Gandhi slammed the Centre over the contraction of India's GDP by 7.5% in the second quarter of the fiscal year 2020-21.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X