ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೊವಿಡ್ ಸಾವಿನ ಪ್ರಮಾಣ ಇಳಿಕೆ: ಆರೋಗ್ಯ ಇಲಾಖೆ

|
Google Oneindia Kannada News

ದೆಹಲಿ, ಜುಲೈ 20: ಭಾರತದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೂ ಸಾವಿನ ಪ್ರಮಾಣ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಭಾನುವಾರ ಹೇಳಿದೆ.

ಭಾರತದಲ್ಲಿ ಶೇಕಡಾ 2.5 ರಷ್ಟು ಮಾತ್ರ ಸಾವು ಸಂಭವಿಸಿದೆ. ಜಗತ್ತಿನಲ್ಲಿ ಅದರ ಪ್ರಮಾಣ ಸರಾಸರಿ 4.2 ರಷ್ಟಿದೆ. ಪ್ರಪಂಚ ಇತರೆ ದೇಶಗಳಿಗೆ ಹೋಲಿಸಿಕೊಂಡರೆ ಕೇಸ್‌ಗಳ ಪೈಕಿ ಸರಾಸರಿ ಪ್ರಮಾಣದಲ್ಲಿ ಅತಿ ಕಡಿಮೆ ಸಾವು ವರದಿಯಾಗಿರುವುದು ಭಾರತದಲ್ಲಿ.

ಜಗತ್ತಿನಾದ್ಯಂತ ಕೊವಿಡ್ ಸಾವಿನ ಸಂಖ್ಯೆ 6 ಲಕ್ಷ, ಟಾಪ್ 5 ದೇಶ ಯಾವುದು?ಜಗತ್ತಿನಾದ್ಯಂತ ಕೊವಿಡ್ ಸಾವಿನ ಸಂಖ್ಯೆ 6 ಲಕ್ಷ, ಟಾಪ್ 5 ದೇಶ ಯಾವುದು?

ಅಮೆರಿಕದಲ್ಲಿ ಸಾವಿನ ಪ್ರಮಾಣ ಶೇಕಡಾ 3.7ರಷ್ಟಿದೆ, ಬ್ರೆಜಿಲ್‌ನಲ್ಲಿ ಸಾವಿನ ಪ್ರಮಾಣ 3.8ರಷ್ಟಿದೆ. ಆದರೆ, ಭಾರತದಲ್ಲಿ ಕೇವಲ 2.5 ರಷ್ಟಿದೆ. ಇದುವರೆಗೂ ಭಾರತದಲ್ಲಿ 11,18,043 ಜನರಿಗೆ ಕೊವಿಡ್ ತಗುಲಿದೆ. ಅದರಲ್ಲಿ 27,497 ಜನರು ಪ್ರಾಣ ಕಳೆದುಕೊಂಡಿದ್ದಾರೆ. 3,90,459 ಪ್ರಕರಣ ಪ್ರಸ್ತುತ ಸಕ್ರಿಯವಾಗಿದ್ದು, 7,00,087 ಕೇಸ್ ಚೇತರಿಕೆ ಕಂಡಿದೆ.

India’s COVID19 death rate drops to 2.5 per cent

ಭಾರತದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಸಮಯೋಚಿತ ಕ್ರಮಗಳಿಂದ ಸಾವಿನ ಸಂಖ್ಯೆಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದೆ. ಆಕ್ರಮಣಕಾರಿ ಪರೀಕ್ಷೆ ಮತ್ತು ಪ್ರಕರಣಗಳನ್ನು ಪತ್ತೆಹಚ್ಚುವುದು, ಆರೈಕೆಯ ಪ್ರೋಟೋಕಾಲ್ ಉತ್ತಮವಾಗಿ ಕಾರ್ಯಗತಗೊಳಿಸಿರುವುದರಿಂದ ಚೇತರಿಕೆ ಪ್ರಮಾಣ ಹೆಚ್ಚಿದೆ. ಮಧ್ಯಮ ಮತ್ತು ತೀವ್ರವಾದ ಪ್ರಕರಣಗಳಲ್ಲಿ ಪರಿಣಾಮಕಾರಿ ಕ್ಲಿನಿಕಲ್ ನಿರ್ವಹಣೆ ಸಾವಿನಿಂದ ತಪ್ಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ದೇಶದ ಸರಾಸರಿ ಹೋಲಿಸಿಕೊಂಡರೆ ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ದೇಶದ ಸರಾಸರಿಗಿಂತ ಈ ರಾಜ್ಯಗಳಲ್ಲಿ ಹೆಚ್ಚು ಕೊವಿಡ್ ಸಾವು ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ಶೇಕಡಾ 3.85ರಷ್ಟು, ಗುಜರಾತ್‌ನಲ್ಲಿ ಶೇಕಡಾ 4.48ರಷ್ಟು ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇಕಡಾ 2.67 ರಷ್ಟು ಸಾವು ವರದಿಯಾಗಿದೆ.

ಅಂಕಿ ಅಂಶಗಳಲ್ಲಿ ನೋಡುವುದಾದರೆ ಮಹಾರಾಷ್ಟ್ರದಲ್ಲಿ ಒಟ್ಟು ಕೊವಿಡ್ ಕೇಸ್ 3,10,455. ಸಾವಿನ ಸಂಖ್ಯೆ 11,854. ಗುಜರಾತ್‌ನಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 48,441, ಸಾವಿನ ಸಂಖ್ಯೆ 2,146. ಪಶ್ಚಿಮ ಬಂಗಾಳದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ 42,487, ಸಾವಿನ ಸಂಖ್ಯೆ 1,112.

English summary
COVID19 fatality rate 'progressively falling' and its 2.49% currently in India, one of the lowest in the world: Health Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X