• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಭಾರತದ ಕೋವಿಡ್‌ ಸಾವು ಅಧಿಕೃತ ಮಾಹಿತಿಗಿಂತ 14 ಪಟ್ಟು ಹೆಚ್ಚಿದೆ' - ಎನ್‌ವೈಟಿ ವರದಿ

|
Google Oneindia Kannada News

ನವದೆಹಲಿ, ಮೇ 27: ಭಾರತದ ಸರ್ಕಾರದ ಅಂಕಿ ಅಂಶ ಪ್ರಕಾರವಾಗಿ ದೇಶದಲ್ಲಿ ಮೇ 24 ರ ವೇಳೆಗೆ 26.9 ಮಿಲಿಯನ್ (2.69 ಕೋಟಿ) ಕೋವಿಡ್ -19 ಪ್ರಕರಣಗಳು ಮತ್ತು 307,231 (3.07 ಲಕ್ಷ) ಕೋವಿಡ್‌ ಸಾವುಗಳು ವರದಿಯಾಗಿದೆ. ಆದರೆ ನ್ಯೂಯಾರ್ಕ್ ಟೈಮ್ಸ್‌ (ಎನ್‌ವೈಟಿ ) ವಿಶ್ಲೇಷಣೆಯ ಪ್ರಕಾರ ನಿಜವಾದ ಅಂಕಿ ಅಂಶಗಳು ಹೆಚ್ಚಾಗಿರುವ ಸಾಧ್ಯತೆಯಿದೆ.

ನ್ಯೂಯಾರ್ಕ್ ಟೈಮ್ಸ್‌ನ ವಿಶ್ಲೇಷಣೆ ಪ್ರಕಾರ ಭಾರತದಲ್ಲಿ 700.7 ಮಿಲಿಯನ್ (70.07 ಕೋಟಿ) ಕೋವಿಡ್‌ ಪ್ರಕರಣಗಳು ಇದ್ದು, ಈ ಪೈಕಿ 4.2 ಮಿಲಿಯನ್ (42 ಲಕ್ಷ) ಕೋವಿಡ್‌ ಸೋಂಕಿತರು ಸಾವನ್ನಪ್ಪಿದ್ದಾರೆ. ಈ ವರದಿಯ ಪ್ರಕಾರ ದೇಶದ ಪರಿಸ್ಥಿತಿ ತೀರಾ ಶೋಚನೀಯವಾಗಿದೆ.

Explained: ಭಾರತದಲ್ಲಿ ಮಕ್ಕಳಿಗೆ Covid-19 ಅಲ್ಲ MIS-C ಭಯ! Explained: ಭಾರತದಲ್ಲಿ ಮಕ್ಕಳಿಗೆ Covid-19 ಅಲ್ಲ MIS-C ಭಯ!

ಮೇ 25 ರಂದು ಪ್ರಕಟವಾದ, 'Just How Big Could India's True Covid Toll Be? (ಭಾರತದ ನಿಜವಾದ ಕೋವಿಡ್ ಪ್ರಕರಣ ಎಷ್ಟು ಹೆಚ್ಚಿದೆ?) ಎಂಬ ಶೀರ್ಷಿಕೆಯ ವರದಿಯಲ್ಲಿ ಎನ್‌ವೈಟಿ ಪ್ರಕರಣ ಮತ್ತು ಸಾವಿನ ಎಣಿಕೆಗಳನ್ನು ಅಧ್ಯಯನ ಮಾಡಿದ ಬಳಿಕದ ಭಾರತದ ಅಂದಾಜು ಕೋವಿಡ್‌ ಪ್ರಕರಣ, ಸಾವಿನ ಬಗ್ಗೆ ತಿಳಿಸಿದೆ.

12 ಕ್ಕೂ ಅಧಿಕ ಅಂತರಾಷ್ಟ್ರೀಯ ತಜ್ಞರ ಅಭಿಪ್ರಾಯವಿದೆ ಈ ವರದಿಯಲ್ಲಿ

12 ಕ್ಕೂ ಅಧಿಕ ಅಂತರಾಷ್ಟ್ರೀಯ ತಜ್ಞರ ಅಭಿಪ್ರಾಯವಿದೆ ಈ ವರದಿಯಲ್ಲಿ

ಭಾರತದ ಅಂದಾಜು ಕೋವಿಡ್‌ ಪ್ರಕರಣದ ವರದಿಯಲ್ಲಿ ಎನ್‌ವೈಟಿ ಬರೀ ಒಂದೆರಡು ತಜ್ಞರನ್ನು ಸಂಪರ್ಕಿಸಿ ಪ್ರಕಟಿಸಿಲ್ಲ. ಬದಲಾಗಿ ಸುಮಾರು 12 ಕ್ಕೂ ಅಧಿಕ ಅಂತರಾಷ್ಟ್ರೀಯ ತಜ್ಞರ ಅಭಿಪ್ರಾಯವನ್ನು ಒಟ್ಟುಗೂಡಿಸಿ ನ್ಯೂಯಾರ್ಕ್ ಟೈಮ್ಸ್‌ ಭಾರತದ ಕೋವಿಡ್‌ ಪರಿಸ್ಥಿತಿ ಬಗ್ಗೆ ವರದಿ ಮಾಡಿದೆ. ಎಮೋರಿ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಕಯೊಕೊ ಶಿಯೋಡಾ, ಯೇಲ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾನ್ ವೈನ್‌ಬರ್ಗರ್, ಸೆಂಟರ್ ಫಾರ್ ಡಿಸೀಸ್ ಡೈನಾಮಿಕ್ಸ್, ಎಕನಾಮಿಕ್ಸ್ & ಫಾಲಿಸಿಯ ಡಾ. ರಮಣನ್ ಲಕ್ಷ್ಮೀನಾರಾಯಣ್, ಡಾರ್ಟ್ಮೌತ್ ಕಾಲೇಜಿನ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ. ಪಾಲ್ ನೊವೊಸಾದ್ ಈ 12 ಕ್ಕೂ ಅಧಿಕ ಅಂತರಾಷ್ಟ್ರೀಯ ತಜ್ಞರಲ್ಲಿ ನಾಲ್ವರಾಗಿದ್ದಾರೆ.

ಕಳಪೆ ದಾಖಲೆ ಸಂಗ್ರಹ

ಕಳಪೆ ದಾಖಲೆ ಸಂಗ್ರಹ

ಭಾರತದಲ್ಲಿ ಕೋವಿಡ್‌ಗೆ ಸಂಬಂಧಿಸಿ ದಾಖಲೆ ಸಂಗ್ರಹ ಸ್ಥಿತಿಯು ಕಳಪೆಯಾಗಿದೆ. ಹಾಗೆಯೇ ವ್ಯಾಪಕವಾಗಿ ಕೊರೊನಾ ಪರೀಕ್ಷೆಯು ನಡೆಯುತ್ತಿಲ್ಲ ಎಂಬ ಅಂಶಗಳನ್ನು ಉಲ್ಲೇಖಿಸಿರುವ ವರದಿಯು, ಒಟ್ಟಾರೆಯಾಗಿ ಭಾರತದಲ್ಲಿನ ಕೋವಿಡ್‌ ಸೋಂಕಿನ ಬಗ್ಗೆ ಸ್ಪಷ್ಟ ಚಿತ್ರಣವನ್ನು ಪಡೆಯುವುದು ಕಷ್ಟ ಎಂದು ಹೇಳಿದೆ.
ಇದಲ್ಲದೆ, ಹೆಚ್ಚಾಗಿ "ತಾಂತ್ರಿಕ, ಸಾಂಸ್ಕೃತಿಕ ಮತ್ತು ವ್ಯವಸ್ಥಾಪನಾ ಕಾರಣಗಳಿಗಾಗಿ ಈ ಸಮಸ್ಯೆ ಉಂಟಾಗಿದೆ" ಎಂದಿದೆ.

ಶಿವಮೊಗ್ಗ; ಹಳ್ಳಿಗಳಿಗೆ ಕೊರೊನಾ, ತಡವಾಗಿ ಎಚ್ಚೆತ್ತ ಜಿಲ್ಲಾಡಳಿತಶಿವಮೊಗ್ಗ; ಹಳ್ಳಿಗಳಿಗೆ ಕೊರೊನಾ, ತಡವಾಗಿ ಎಚ್ಚೆತ್ತ ಜಿಲ್ಲಾಡಳಿತ

ಮನೆಯಲ್ಲೇ ಸಂಭವಿಸುತ್ತಿದೆ ಕೋವಿಡ್‌ ಸಾವು

ಮನೆಯಲ್ಲೇ ಸಂಭವಿಸುತ್ತಿದೆ ಕೋವಿಡ್‌ ಸಾವು

ಆಸ್ಪತ್ರೆಗಳಲ್ಲಿ ಬೆಡ್‌ ಮೊದಲಾದ ಸಮಸ್ಯೆಗಳು ಇರುವ ಕಾರಣದಿಂದಾಗಿ ಅನೇಕ ಕೋವಿಡ್ ಸಾವುಗಳು ಮನೆಯಲ್ಲಿಯೇ ಸಂಭವಿಸುತ್ತಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮನೆಯಲ್ಲೇ ಕೋವಿಡ್‌ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ. ಇದರಿಂದಾಗಿ ಅಧಿಕೃತ ಅಂಕಿ ಅಂಶಗಳಲ್ಲಿ ಈ ಸಾವು ಪ್ರಕರಣಗಳು ಸೇರ್ಪಡೆ ಮಾಡಲಾಗುತ್ತಿಲ್ಲ. ಇನ್ನು ಈ ಸಾವಿಗೆ ಕಾರಣವನ್ನು ದೃಢಪಡಿಸುವ ಮುನ್ನವೇ ಎಲ್ಲಾ ವಿಧಿ ವಿಧಾನ ಮುಗಿದಿರುತ್ತದೆ. ಪ್ರಯೋಗಾಲಯಗಳಲ್ಲಿಯೂ ಒತ್ತಡದ ಸ್ಥಿತಿ ಇದೆ ಎಂದು ಎಮೋರಿ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಕಯೊಕೊ ಶಿಯೋಡಾ ಅಭಿಪ್ರಾಯಿಸಿದ್ದಾರೆ.

ಕೋವಿಡ್‌ ಸಾವು ಎಂದು ಹೇಳಲು ಕುಟುಂಬಸ್ಥರಿಗೆ ಭಯ

ಕೋವಿಡ್‌ ಸಾವು ಎಂದು ಹೇಳಲು ಕುಟುಂಬಸ್ಥರಿಗೆ ಭಯ

ಭಾರತದಲ್ಲಿ ಹೆಚ್ಚಿನ ಜನರು ತಮ್ಮ ಕುಟುಂಬಸ್ಥರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಳ್ಳಲು ಆತಂಕ ಪಡುತ್ತಾರೆ. ಇನ್ನೂ ಭಯದಿಂದ ಕೆಲವರು ಪರೀಕ್ಷೆಯನ್ನೇ ಮಾಡಿಸಿರುವುದಿಲ್ಲ. ಒಟ್ಟಾರೆಯಾಗಿ ಭಾರತದಲ್ಲಿ ಕೋವಿಡ್‌ ಅಂಕಿ ಅಂಶಗಳ ಮಾಹಿತಿ ಸಂಗ್ರಹ ಪರಿಸ್ಥಿತಿಯು ತೀರಾ ಕಳಪೆಯಾಗಿದೆ ಎನ್ನುತ್ತಾರೆ ಈ ಸಂಶೋಧಕರು.

ಕೊರೊನಾ ಮೂಲ ಯಾವುದು?; ತನಿಖೆಗೆ ಗಡುವು ನೀಡಿದ ಬೈಡನ್ಕೊರೊನಾ ಮೂಲ ಯಾವುದು?; ತನಿಖೆಗೆ ಗಡುವು ನೀಡಿದ ಬೈಡನ್

ಹಾಗಾದರೆ ಭಾರತದ ಕೋವಿಡ್ ಪ್ರಕರಣಗಳ ನಿಜವಾದ ಅಂಕಿಅಂಶ ಎಷ್ಟು?

ಹಾಗಾದರೆ ಭಾರತದ ಕೋವಿಡ್ ಪ್ರಕರಣಗಳ ನಿಜವಾದ ಅಂಕಿಅಂಶ ಎಷ್ಟು?

ಭಾರತದ ಕೋವಿಡ್‌ ಪರಿಸ್ಥಿತಿ ಬಗ್ಗೆ ರಾಷ್ಟ್ರವ್ಯಾಪಿ ಸಮೀಕ್ಷೆ ಮಾಡಲಾಗಿದೆ. ಒಂದು ಸಮೀಕ್ಷೆಯ ಪ್ರಕಾರ 1.4 ಬಿಲಿಯನ್ (140 ಕೋಟಿ) ಭಾರತೀಯರಲ್ಲಿ ಸುಮಾರು 30,000 ಜನರಿಗೆ ಕೋವಿಡ್‌ ದೃಢಪಟ್ಟಿದೆ. ಇನ್ನು ಇನ್ನೊಂದು ಸಮೀಕ್ಷೆಯ ಪ್ರಕಾರ ನೈಜ ಅಂಕಿ ಅಂಶಕ್ಕಿಂತ 15 ಪಟ್ಟು ಹೆಚ್ಚು ಪ್ರಕರಣಗಳು ಭಾರತದಲ್ಲಿ ದೃಢಪಟ್ಟಿದೆ. ಅಂದರೆ 404.2 ಮಿಲಿಯನ್ (40.42 ಕೋಟಿ) ಕೋವಿಡ್‌ ಪ್ರಕರಣಗಳು ಮತ್ತು ಸೋಂಕಿನ ಸಾವಿನ ಪ್ರಮಾಣ ಶೇ. 0.15 ಇದೆ. ಈ ಪ್ರಕಾರವಾಗಿ ದೇಶದಲ್ಲಿ 600,000 (6 ಲಕ್ಷ) ಮಂದಿ ಕೋವಿಡ್‌ ಸೋಂಕಿತರು ಸಾವನ್ನಪ್ಪಿದ್ದಾರೆ. ಭಾರತ ವರದಿ ಮಾಡಿದ ಅಧಿಕೃತ ಮಾಹಿತಿಗಿಂತ ಇದು ದ್ವಿಗುಣವಾಗಿದೆ. ಇನ್ನು ಮಗದೊಂದು ಸಂಭವನೀಯ ಸಮೀಕ್ಷೆ ಪ್ರಕಾರ ಮೇ 24, 2021 ರ ಅಧಿಕೃತ ಎಣಿಕೆಗಿಂತ ಐದು ಪಟ್ಟು ಹೆಚ್ಚು ಕೋವಿಡ್‌ ಪ್ರಕರಣಗಳಿವೆ. ಡಿಸೆಂಬರ್ 2020 ಮತ್ತು ಜನವರಿ 2021 ರ ನಡುವೆ ನಡೆಸಿದ ಇತ್ತೀಚಿನ ರಾಷ್ಟ್ರೀಯ ಅಧ್ಯಯನದ ಪ್ರಕಾರ ಸಾವಿನ ಪ್ರಮಾಣವು ಶೇಕಡಾ 0.3 ಎಂದು ಅಂದಾಜಿಸಲಾಗಿದೆ. 1.6 ಮಿಲಿಯನ್ (16 ಲಕ್ಷ) ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಊಹಿಸಲಾಗಿದೆ. ಇನ್ನು ಕೊನೆಯ ಸಮೀಕ್ಷೆಯ ಪ್ರಕಾರ ದೇಶ ಪರಿಸ್ಥಿತಿ ಕೆಟ್ಟದಾಗಿದೆ. ಈ ಸಮೀಕ್ಷೆ ಪ್ರಕಾರ ಅಧಿಕೃತ ಎಣಿಕೆಗಳಿಗಿಂತ ನಿಜವಾದ ಸೋಂಕು ಪ್ರಮಾಣ 26 ಪಟ್ಟು ಹೆಚ್ಚಾಗಿದೆ. ಸಾವಿನ ಸಂಖ್ಯೆಯು 4.2 ಮಿಲಿಯನ್ ಆಗಿದ್ದು, ಇದು ಪ್ರಸ್ತುತ ಸಾವಿನ ಸಂಖ್ಯೆಗಿಂತ 13.7 ಪಟ್ಟು ಹೆಚ್ಚಾಗಿದೆ. ಇನ್ನು ಒಟ್ಟಾರೆಯಾಗಿ ಭಾರತದಲ್ಲಿ ಅರ್ಧದಷ್ಟು ಜನಸಮುದಾಯಕ್ಕೆ ಕೋವಿಡ್‌ ಹರಡಿದೆ ಎಂದು ವರದಿ ಹೇಳಿದೆ.

ಅಧಿಕೃತ ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,11,298 ಹೊಸ ಕೋವಿಡ್-19 ಪ್ರಕರಣ ಪತ್ತೆಯಾಗಿದೆ. 2,83,135 ಚೇತರಿಕೆ ಪ್ರಕರಣಗಳು ಮತ್ತು 3,847 ಸಾವುಗಳು ವರದಿಯಾಗಿವೆ. ಈ ಮೂಲಕ ಒಟ್ಟು ಪ್ರಕರಣಗಳು 2,73,69,093 ಕ್ಕೆ ಏರಿಕೆ ಕಂಡಿದ್ದು, ಒಟ್ಟು ಚೇತರಿಕೆ ಪ್ರಮಾಣ 2,46,33,951, ಒಟ್ಟು ಸಾವಿನ ಸಂಖ್ಯೆ 3,15,235, ಒಟ್ಟು ಸಕ್ರಿಯ ಪ್ರಕರಣಗಳು 24,19,907 ಇದೆ. ಒಟ್ಟಾರೆಯಾಗಿ 20,26,95,874 ಮಂದಿಗೆ ಲಸಿಕೆ ನೀಡಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
India’s Covid deaths are 14 times higher than govt count, says NYT. What is real count according to NYT, read more..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X