ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದಲ್ಲಿ ಕೊವಿಡ್ ಲೆಕ್ಕಾಚಾರ: ಕೇರಳ, ಅಸ್ಸಾಂನಲ್ಲಿ ಸೋಂಕು ದ್ವಿಗುಣ

|
Google Oneindia Kannada News

ದೆಹಲಿ, ಮೇ 28: ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದರೆ, ಆ ಕಡೆ ಕೇರಳದಲ್ಲಿ ಎಲ್ಲ ಕೇಸ್‌ಗಳು ಚೇತರಿಕೆ ಕಂಡು ಕೊರೊನಾ ಮುಕ್ತರಾಜ್ಯವಾಗುತ್ತ ಹೆಜ್ಜೆ ಇಟ್ಟಿತ್ತು. ಕೊನೆಯದಾಗಿ ಕೇವಲ 24 ಸಕ್ರಿಯ ಕೇಸ್‌ಗಳು ಮಾತ್ರ ರಾಜ್ಯದಲ್ಲಿತ್ತು. ಇನ್ನೊಂದು ವಾರ ಕಳೆದಿದ್ದರೂ ಆ ಪ್ರಕರಣಗಳು ಮಾಯವಾಗುತ್ತಿದ್ದವು.

ಆದ್ರೀಗ, ಕೇರಳದಲ್ಲಿ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗಿದೆ. ಕಳೆದ ಒಂದು ವಾರದಲ್ಲಿ 350ಕ್ಕೂ ಹೆಚ್ಚು ಹೊಸ ಕೇಸ್ ದಾಖಲಾಗಿದೆ. 24ರವರೆಗೂ ಇಳಿಕೆ ಕಂಡಿದ್ದ ಕೊರೊನಾ ಸೋಂಕಿತರ ಆಕ್ಟಿವ್ ಕೇಸ್ ಈಗ ರಾಜ್ಯದಲ್ಲಿ 400ರ ಗಡಿ ದಾಟಿದೆ.

5ನೇ ಲಾಕ್‌ಡೌನ್‌ನಲ್ಲಿ ಯಾವುದಕ್ಕೆ ವಿನಾಯಿತಿ? ಸುಳಿವು ನೀಡಿದ ಡಿಸಿಎಂ5ನೇ ಲಾಕ್‌ಡೌನ್‌ನಲ್ಲಿ ಯಾವುದಕ್ಕೆ ವಿನಾಯಿತಿ? ಸುಳಿವು ನೀಡಿದ ಡಿಸಿಎಂ

ಹೊರರಾಜ್ಯ, ಹೊರದೇಶಗಳಿಂದ ಕೇರಳಕ್ಕೆ ಬಂದವರಿಂದ ರಾಜ್ಯದಲ್ಲಿ ಮತ್ತೆ ಸೋಂಕು ಹೆಚ್ಚಿದೆ. ಕಳೆದ ಒಂದು ವಾರದಲ್ಲಿ ರಾಜ್ಯದಲ್ಲಿ 666 ಇದ್ದ ಸೋಂಕು 1,003ಕ್ಕೆ ಏರಿದೆ. ಈ ಅಂಕಿ ಅಂಶ ಗಮನಿಸಿದರೆ ಕೇರಳದಲ್ಲಿ ಸೋಂಕಿತರ ಸಂಖ್ಯೆ ದ್ವಿಗುಣವಾಗಿದೆ.

 Indias Covid-19 Numbers Explained in Kannada

ಮೇ ಮಧ್ಯದವರೆಗೂ ಕೇರಳ ಸಂಪೂರ್ಣವಾಗಿ ನಿಯಂತ್ರಣದಲ್ಲಿತ್ತು. ಅದಕ್ಕೂ ಮುಂಚೆ ಹಲವು ದಿನಗಳು ಹೊಸ ಕೇಸ್ ಪತ್ತೆಯಾಗಿರಲಿಲ್ಲ. ಅದಾಗಲೇ, ಶೇಕಡ 90ಕ್ಕಿಂತ ಹೆಚ್ಚು ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದರು.

ಅದ್ಯಾವಾಗ, ವಿದೇಶಗಳಲ್ಲಿ ಸಿಲುಕಿಕೊಂಡಿದ್ದವರು, ಹೊರರಾಜ್ಯಗಳಲ್ಲಿ ಸಿಲುಕಿಕೊಂಡಿದ್ದವರು ರಾಜ್ಯಕ್ಕೆ ಮರಳಲು ಅನುಮತಿ ನೀಡಲಾಯಿತು. ಲಾಕ್‌ಡೌನ್ ನಿಬಂಧನೆಗಳಲ್ಲಿ ಸಡಿಲಿಕೆ ನೀಡಲಾಯಿತು. ಇದರ ಪರಿಣಾಮ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ ಕಂಡಿದೆ.

ಆ ಕಡೆ ಅಸ್ಸಾಂ ರಾಜ್ಯದಲ್ಲಿ ಕೊರೊನಾ ಸೋಂಕು ದ್ವಿಗುಣವಾಗಿದೆ. ಕಳೆದ ಒಂದು ವಾರದಲ್ಲಿ 170 ಕೇಸ್ ಹೊಂದಿದ್ದ ಅಸ್ಸಾಂ ರಾಜಜ್ಯದಲ್ಲಿ ಈಗ 774ಕ್ಕೆ ಏರಿದೆ. ಈ ಅಂಕಿ ಅಂಶ ಗಮನಿಸಿದರೆ ಅಸ್ಸಾಂನಲ್ಲಿ ಕೇರಳಕ್ಕಿಂತಲೂ ಹೆಚ್ಚು ವೇಗವಾಗಿ ಬೆಳೆಯುತ್ತಿದೆ.

ಮೇ 27ರಂದು ದೆಹಲಿಯಲ್ಲಿ 792 ಕೊರೊನಾ ವೈರಸ್ ಕೇಸ್ ದಾಖಲಾಗಿದೆ. ದೆಹಲಿಯಲ್ಲಿ ದಾಖಲಾದ ಗರಿಷ್ಠ ಕೇಸ್ ಎನ್ನಲಾಗಿದೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಗುಜರಾತ್‌ ಹಿಂದಿಕ್ಕಿ ದೆಹಲಿ ಮುಂದೆ ಸಾಗಿದೆ. ತಮಿಳುನಾಡಿನಲ್ಲಿ 18,575 ಕೇಸ್ ವರದಿಯಾಗಿದ್ದು, 133 ಜನರು ಮೃತಪಟ್ಟಿದ್ದಾರೆ.

ಬುಧವಾರ ದೇಶದಲ್ಲಿ 6,566 ಹೊಸ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಒಟ್ಟು ಸೋಂಕುಗಳ ಸಂಖ್ಯೆ ಈಗ 1,58,333 ಲಕ್ಷ ದಾಟಿದೆ. ಅದರಲ್ಲಿ ಸುಮಾರು 67692 ರೋಗಗಳು ಚೇತರಿಸಿಕೊಂಡಿದ್ದಾರೆ.

English summary
India's Covid-19 Numbers Explained: Kerala and Assam cases growing faster than national average.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X