ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಳೆದ 1 ವರ್ಷದಲ್ಲಿ ಭಾರತದ ಶೇಕಡಾ 93ರಷ್ಟು ಸಂಸ್ಥೆಗಳ ಮೇಲೆ ಸೈಬರ್ ದಾಳಿ

|
Google Oneindia Kannada News

ನವದೆಹಲಿ, ಜುಲೈ 13: ಕಳೆದ 12 ತಿಂಗಳುಗಳಲ್ಲಿ ಸುಮಾರು ಶೇಕಡಾ 93ರಷ್ಟು ಭಾರತೀಯ ಸಂಸ್ಥೆಗಳು ಸೈಬರ್ ಅಟ್ಯಾಕ್‌ಗೆ ಒಳಗಾಗಿದ್ದವು ಎಂದು ಸೈಬರ್‌ ಸೆಕ್ಯುರಿಟಿ ಸಂಸ್ಥೆ ಸೋಫೋಸ್ ನಡೆಸಿದ ಸಮೀಕ್ಷೆಯೊಂದು ತಿಳಿಸಿದೆ.

ಜನವರಿ ಮತ್ತು ಫೆಬ್ರವರಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ, 227 ಭಾರತೀಯ ಸಂಸ್ಥೆಗಳನ್ನು ಒಳಗೊಂಡ ಸಮೀಕ್ಷೆಯಲ್ಲಿ ಶೇಕಡಾ 55ರಷ್ಟು ಸಂಸ್ಥೆಗಳು ದತ್ತಾಂಶ ಉಲ್ಲಂಘನೆಯನ್ನು ವರದಿ ಮಾಡಿವೆ. ಇದರಲ್ಲಿ ಕ್ಲೌಡ್ ಪ್ರೊವೈಡರ್ ಖಾತೆಯ ರುಜುವಾತುಗಳನ್ನು ಕಳವು ಮಾಡಲಾಗಿದೆ ಮತ್ತು ಶೇಕಡಾ 44 ರಷ್ಟು ಓಪನ್ ಪೋರ್ಟ್ಸ್‌ಗಳಲ್ಲಿ ದಾಳಿಗಳು ಸಂಭವಿಸಿವೆ ಎಂದು ಕಂಡುಹಿಡಿದಿದೆ.

ಡಂಜೊ ವಿತರಣಾ ಸೇವೆಯ ಡೇಟಾ ಸೋರಿಕೆ: ಬಳಕೆದಾರರ ಮಾಹಿತಿ ಹ್ಯಾಕ್ಡಂಜೊ ವಿತರಣಾ ಸೇವೆಯ ಡೇಟಾ ಸೋರಿಕೆ: ಬಳಕೆದಾರರ ಮಾಹಿತಿ ಹ್ಯಾಕ್

ಜಾಗತಿಕ ಕಂಪನಿಗಳಿಗೆ ಹೋಲಿಸಿದರೆ, ಭಾರತೀಯ ಸಂಸ್ಥೆಗಳು ಹೆಚ್ಚಿನ ಭದ್ರತಾ ಘಟನೆಗಳಿಗೆ ಸಾಕ್ಷಿಯಾದರೆ, ಯುರೋಪ್‌ನಲ್ಲಿ ಅತಿ ಕಡಿಮೆ ಸೈಬರ್ ದಾಳಿ ನಡೆದಿದೆ.. ಯುರೋಪಿನಲ್ಲಿ ಸುಧಾರಿತ ಭದ್ರತಾ ಕ್ರಮಗಳನ್ನು 2018 ರಲ್ಲಿ ಜಾರಿಗೆ ಬಂದ ಜನರಲ್ ಡಾಟಾ ಪ್ರೊಟೆಕ್ಷನ್ ರೆಗ್ಯುಲೇಷನ್ (ಜಿಡಿಪಿಆರ್) ಮಾರ್ಗಸೂಚಿಗಳ ಅನುಸರಣೆಗೆ ಕಾರಣವಾಗಿದೆ.

Indias 93% Organisations Hit Cyberattacks In Last 1 Year

ಭಾರತ ತನ್ನ ಡೇಟಾ ಸಂರಕ್ಷಣಾ ಕಾನೂನನ್ನು ಇನ್ನೂ ಹೊರತಂದಿಲ್ಲ. ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆಯನ್ನು ಡಿಸೆಂಬರ್‌ನಲ್ಲಿ ಸಂಸತ್ತಿನಲ್ಲಿ ಮಂಡಿಸಲಾಯಿತು.

English summary
About 93% of Indian organizations suffered cyberattack in the last 12 months, a survey by cybersecurity firm Sophos has found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X